ಕೋವಿಡ್ ನಿಂದ ಸುನೀಲ್ ಚೆಟ್ರಿ ಚೇತರಿಕೆ; ಫುಟ್ಬಾಲ್ ತಂಡ ದೋಹಾಕ್ಕೆ
Team Udayavani, May 19, 2021, 11:13 PM IST
ಹೊಸದಿಲ್ಲಿ: ಭಾರತ ಫುಟ್ಬಾಲ್ ನಾಯಕ ಸುನೀಲ್ ಚೆಟ್ರಿ ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ತಂಡವನ್ನು ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ 28 ಸದಸ್ಯರ ಭಾರತ ತಂಡ ಬುಧವಾರ ಸಂಜೆ ದೋಹಾಕ್ಕೆ ವಿಮಾನವೇರಿತು. ಭಾರತವಿಲ್ಲಿ 2022ರ ಫಿಫಾ ವಿಶ್ವಕಪ್ ಹಾಗೂ 2023ರ ಏಶ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ.
ಜೂ. 3ರಂದು ಆತಿಥೇಯ ಕತಾರ್ ತಂಡವನ್ನು ಭಾರತ ಎದುರಿಸಲಿದೆ. ಅಲ್ಲಿಯ ತನಕ ದೋಹಾದ ಜೈವಿಕ ಸುರಕ್ಷಾ ವಲಯದಲ್ಲಿ ಅಭ್ಯಾಸ ನಡೆಸಲಿದೆ. ಬಳಿಕ ಜೂ. 7ರಂದು ಬಾಂಗ್ಲಾದೇಶ ಹಾಗೂ ಜೂ. 15ರಂದು ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.
ಒಮಾನ್ ಮತ್ತು ಯುಎಇ ವಿರುದ್ಧ ಸೌಹಾರ್ದ ಪಂದ್ಯವನ್ನು ತಪ್ಪಿಸಿಕೊಂಡ ಬಳಿಕ ಚೆಟ್ರಿ ಮೊದಲ ಸಲ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ತಂಡ
ಗೋಲ್ ಕೀಪರ್: ಗುರುಪ್ರೀತ್ ಸಿಂಗ್ ಸಂಧು, ಅಮರೀಂದರ್ ಸಿಂಗ್, ಧೀರಜ್ ಸಿಂಗ್.
ಡಿಫೆಂಡರ್: ಪ್ರೀತಮ್ ಕೋಟಲ್, ರಾಹುಲ್ ಭೇಕೆ, ನರೇಂದರ್ ಗೆಹೊÉàಟ್, ಚಿಂಗ್ಲೆನ್ಸಾನ ಸಿಂಗ್, ಸಂದೇಶ್ ಜಿಂಗಾನ್, ಆದಿಲ್ ಖಾನ್, ಆಕಾಶ್ ಮಿಶ್ರಾ, ಸುಭಾಶಿಷ್ ಬೋಸ್.
ಮಿಡ್ ಫೀಲ್ಡರ್: ಉದಾಮತ್ ಸಿಂಗ್, ಬೃಂಡನ್ ಫೆರ್ನಾಂಡಿಸ್, ಲಿಸ್ಟನ್ ಕೊಲಾಕೊ, ರೌವಿÉನ್ ಬೋರ್ಗಸ್, ಗ್ಲ್ಯಾನ್ ಮಾರ್ಟಿನ್ಸ್, ಅನಿರುದ್ಧ್ ಥಾಪ, ಪ್ರೊಣೋಯ್ ಹಲ್ದರ್, ಸುರೇಶ್ ಸಿಂಗ್, ಲಾಲೆಂಗ್ಮಾವಿಯ ರಾಲ್ಟೆ, ಅಬ್ದುಲ್ ಸಾಹಲ್, ಯಾಸಿರ್ ಮೊಹಮ್ಮದ್, ಲಲ್ಲಿಯಾನ್ಜುವಾಲ ಚಂಗೆr, ಬಿಪಿನ್ ಸಿಂಗ್, ಆಶಿಖ್ ಕುರುನಿಯನ್.
ಫಾರ್ವರ್ಡ್ಸ್: ಇಶಾನ್ ಪಂಡಿತ್, ಸುನೀಲ್ ಚೆಟ್ರಿ (ನಾಯಕ), ಮಾನ್ವೀರ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ