ಮೆಸ್ಸಿ ದಾಖಲೆ ಮುರಿದ ಸುನೀಲ್ ಚೆಟ್ರಿ : 117 ಪಂದ್ಯ, 74 ಗೋಲು
Team Udayavani, Jun 9, 2021, 12:36 AM IST
ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ತಮ್ಮ ವರ್ಣರಂಜಿತ ಬಾಳ್ವೆಯಲ್ಲಿ ಹೊಸತೊಂದು ಎತ್ತರಕ್ಕೆ ಏರಿದ್ದಾರೆ. ಅಂತಾರಾಷ್ಟ್ರೀಯ ಗೋಲು ಗಳಿಕೆಯಲ್ಲಿ ಆರ್ಜೆಂಟೀನಾದ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಹಾಗೂ ಯುಎಇಯ ಫಾರ್ವರ್ಡ್ ಆಟಗಾರ ಅಲಿ ಮಾಬ್ಕೌತ್ ಅವರ ಗೋಲು ದಾಖಲೆಯನ್ನು ಮುರಿದು ಟಾಪ್-10 ಯಾದಿಯನ್ನು ಅಲಂಕರಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಸೋಮವಾರ ದೋಹಾದಲ್ಲಿ ನಡೆದ ವಿಶ್ವಕಪ್, ಏಶ್ಯನ್ ಕಪ್ ಅರ್ಹತಾ ಫುಟ್ಬಾಲ್ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿದ ಚೆಟ್ರಿ ಜಾಗತಿಕ ಫುಟ್ಬಾಲ್ನಲ್ಲಿ ಸುದ್ದಿಯಾದರು. ಇದು 117 ಪಂದ್ಯಗಳಲ್ಲಿ ಚೆಟ್ರಿ ಸಿಡಿಸಿದ 74ನೇ ಗೋಲು. ಅಂದರೆ ಆರ್ಜೆಂಟೀನಾ ನಾಯಕ ಮೆಸ್ಸಿಗಿಂತ ಎರಡು ಗೋಲು ಹೆಚ್ಚು. ಮೆಸ್ಸಿ 143 ಪಂದ್ಯಗಳಿಂದ 72 ಗೋಲು ದಾಖಲಿಸಿದ್ದಾರೆ. 89 ಪಂದ್ಯಗಳನ್ನಾಡಿರುವ ಅಲಿ ಮಾಬೌಕೌತ್ ಖಾತೆಯಲ್ಲಿ 73 ಗೋಲುಗಳಿವೆ.
ಚೆಟ್ರಿ ಈಗ ಸಾರ್ವಕಾಲಿಕ ಟಾಪ್-10 ಅಂತಾರಾಷ್ಟ್ರೀಯ ಗೋಲು ಸಾಧಕರ ಯಾದಿಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಫುಟ್ಬಾಲಿಗನೋರ್ವ ಈ ಯಾದಿಯನ್ನು ಅಲಂಕರಿಸಿದ್ದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು