ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು


Team Udayavani, Sep 27, 2021, 11:24 PM IST

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ದುಬಾೖ: ಇನ್ನೇನು ಕೂಟದಿಂದ ನಿರ್ಗಮಿಸಲಿದೆ ಎನ್ನುವ ಹಂತದಲ್ಲೇ ಸನ್‌ರೈಸರ್ ಹೈದರಾಬಾದ್‌ ದ್ವಿತೀಯ ಗೆಲುವು ಸಾಧಿಸಿದೆ. ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 5 ವಿಕೆಟಿಗೆ 164 ರನ್‌ ಗಳಿಸಿದರೆ, ಹೈದರಾಬಾದ್‌ 18.3 ಓವರ್‌ಗಳಲ್ಲಿ 3 ವಿಕೆಟಿಗೆ 167 ರನ್‌ ಬಾರಿಸಿತು. ಸತತ 5 ಸೋಲುಗಳ ಬಳಿಕ ಸನ್‌ರೈಸರ್ಗೆ ಒಲಿದ ಗೆಲುವು ಇದಾಗಿತ್ತು.

ಈ ಕೂಟದಲ್ಲಿ ಮೊದಲ ಪಂದ್ಯವಾಡಿದ ಜಾಸನ್‌ ರಾಯ್‌ (42 ಎಸೆತಗಳಿಂದ 60 ರನ್‌) ಮತ್ತು ನಾಯಕ ಕೇನ್‌ ವಿಲಿಯಮ್ಸನ್‌ (41 ಎಸೆತಗಳಿಂದ ಅಜೇಯ 51) ಅರ್ಧ ಶತಕ ಬಾರಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು. ಡೇವಿಡ್‌ ವಾರ್ನರ್‌ ಅವರನ್ನು ಹೊರಗಿಟ್ಟು ಜಾಸನ್‌ ರಾಯ್‌ಗೆ ಅವಕಾಶ ನೀಡಲಾಗಿತ್ತು.

ಸಂಜು ಆರೇಂಜ್‌ ಕ್ಯಾಪ್‌
ರಾಜಸ್ಥಾನ್‌ ಮೊತ್ತದಲ್ಲಿ ನಾಯಕ ಸಂಜು ಸ್ಯಾಮ್ಸನ್‌ ಸರಿ ಅರ್ಧದಷ್ಟು ಮೊತ್ತ ಪೇರಿಸಿದರು. ಈ ಸೊಗಸಾದ ಇನ್ನಿಂಗ್ಸ್‌ ವೇಳೆ ಸ್ಯಾಮ್ಸನ್‌ ತಮ್ಮ ಒಟ್ಟು ಮೊತ್ತವನ್ನು 433ಕ್ಕೆ ಏರಿಸಿಕೊಂಡು ಈ ಐಪಿಎಲ್‌ನ ಟಾಪ್‌ ಸ್ಕೋರರ್‌ ಆಗಿ ಮೂಡಿಬಂದು ಆರೇಂಜ್‌ ಕ್ಯಾಪ್‌ ಏರಿಸಿಕೊಂಡರು.
ಈ ಋತುವಿನ ದ್ವಿತೀಯ ಪಂದ್ಯ ಆಡಲಿಳಿದ ವಿಂಡೀಸಿನ ಬಿಗ್‌ ಹಿಟ್ಟಿಂಗ್‌ ಓಪನರ್‌ ಎವಿನ್‌ ಲೆವಿಸ್‌ ಕೇವಲ 6 ರನ್‌ ಮಾಡಿ ನಿರ್ಗಮಿಸಿದರು. ಭುವನೇಶ್ವರ್‌ ಕುಮಾರ್‌ ತಮ್ಮ ಮೊದಲ ಎಸೆತದಲ್ಲೇ ಈ ದೊಡ್ಡ ಬೇಟೆಯಾಡಿದರು. ಈ ಓವರ್‌ “ವಿಕೆಟ್‌ ಮೇಡನ್‌’ ಆಗಿತ್ತು. ರಾಜಸ್ಥಾನ್‌ ಆಗ ಕೇವಲ 11 ರನ್‌ ಮಾಡಿತ್ತು.

ಇದನ್ನೂ ಓದಿ:ಹ್ಯಾಟ್ರಿಕ್‌ ಹೀರೋ ಹರ್ಷಲ್‌ ಪಟೇಲ್‌

ದ್ವಿತೀಯ ವಿಕೆಟಿಗೆ ಜತೆಗೂಡಿದ ಯಶಸ್ವಿ ಜೈಸ್ವಾಲ್‌-ಸಂಜು ಸ್ಯಾಮ್ಸನ್‌ ಉತ್ತಮ ಆಟವಾಡಿದರು. ಪವರ್‌ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 49ಕ್ಕೆ ಕೊಂಡೊಯ್ದರು. ಇವರಿಂದ 56 ರನ್‌ ಒಟ್ಟುಗೂಡಿತು. ಆಗ 23 ಎಸೆತಗಳಿಂದ 36 ರನ್‌ ಬಾರಿಸಿದ ಜೈಸ್ವಾಲ್‌ (5 ಬೌಂಡರಿ, 1 ಸಿಕ್ಸರ್‌) ಸಂದೀಪ್‌ ಶರ್ಮ ಎಸೆತದಲ್ಲಿ ಬೌಲ್ಡ್‌ ಆದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 77ಕ್ಕೆ ಏರಿತು.ಅರ್ಧ ಹಾದಿ ಕ್ರಮಿಸಿದ ಬಳಿಕ ಮೊದಲ ಎಸೆತದಲ್ಲೇ ರಶೀದ್‌ ಖಾನ್‌ ಬಿಗ್‌ ವಿಕೆಟ್‌ ಉರುಳಿಸಿದರು. ಲಿಯಮ್‌ ಲಿವಿಂಗ್‌ಸ್ಟೋನ್‌ ಕೇವಲ 4 ರನ್‌ ಮಾಡಿ ಸಮದ್‌ಗೆ ಕ್ಯಾಚ್‌ ನೀಡಿ ವಾಪಸಾದರು.

ಈ ನಡುವೆ ಸಂಜು ಸ್ಯಾಮ್ಸನ್‌ ಅವರ ಭರ್ಜರಿ ಬ್ಯಾಟಿಂಗ್‌ ಮುಂದುವರಿಯಿತು. ಅರ್ಧ ಶತಕದೊಂದಿಗೆ 2021ರ ಐಪಿಎಲ್‌ನಲ್ಲಿ 400 ರನ್‌ ಕೂಡ ಪೂರ್ತಿಗೊಂಡಿತು. ಆದರೂ ಅರ್ಧ ಶತಕಕ್ಕೆ 41 ಎಸೆತ ಬಳಸಿಕೊಂಡರು. ಇದು ಅವರ ನಿಧಾನ ಗತಿಯ ಅರ್ಧ ಶತಕದ ಜಂಟಿ ದಾಖಲೆ. 2017ರ ಪುಣೆ ಎದುರಿನ ಪಂದ್ಯದಲ್ಲೂ 50 ರನ್ನಿಗೆ ಇಷ್ಟೇ ಎಸೆತ ತೆಗೆದುಕೊಂಡಿದ್ದರು.

ಸಿದ್ಧಾರ್ಥ್ ಕೌಲ್‌ ಅವರ ಒಂದೇ ಓವರ್‌ನಲ್ಲಿ 20 ರನ್‌ ಬಾರಿಸುವ ಮೂಲಕ ಸ್ಯಾಮ್ಸನ್‌ ಡೆತ್‌ ಓವರ್‌ಗೆ ಅಮೋಘ ಚಾಲನೆ ನೀಡಿದರು. ಅವರಿಗೆ ಮಹಿಪಾಲ್‌ ಲೊನ್ರೋರ್‌ ಉತ್ತಮ ಸಾಥ್‌ ಕೊಟ್ಟರು. 4ನೇ ವಿಕೆಟಿಗೆ 54 ಎಸೆತಗಳಿಂದ 84 ರನ್‌ ಒಟ್ಟುಗೂಡಿಸಿದರು.

ಸ್ಯಾಮ್ಸನ್‌ ತಮ್ಮ ಗಳಿಕೆಯನ್ನು 82ಕ್ಕೆ ಏರಿಸಿಕೊಂಡಾಗ “ಆರೇಂಜ್‌ ಕ್ಯಾಪ್‌’ ಏರಿಸಿಕೊಂಡರು. ಅಂತಿಮ ಓವರ್‌ನಲ್ಲಿ ಇದೇ ಮೊತ್ತಕ್ಕೆ ಅವರ ವಿಕೆಟ್‌ ಉರುಳಿತು.

ಸ್ಕೋರ್‌ ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಎವಿನ್‌ ಲೆವಿಸ್‌ ಸಮದ್‌ ಬಿ ಭುವನೇಶ್ವರ್‌ 6
ಯಶಸ್ವಿ ಜೈಸ್ವಾಲ್‌ ಬಿ ಸಂದೀಪ್‌ 36
ಸಂಜು ಸ್ಯಾಮ್ಸನ್‌ ಸಿ ಹೋಲ್ಡರ್‌ ಬಿ ಕೌಲ್‌ 82
ಲಿವಿಂಗ್‌ಸ್ಟೋನ್‌ ಸಿ ಸಮದ್‌ ಬಿ ರಶೀದ್‌ 4
ಮಹಿಪಾಲ್‌ ಲೊನ್ರೋರ್‌ ಔಟಾಗದೆ 29
ರಿಯಾನ್‌ ಪರಾಗ್‌ ಸಿ ರಾಯ್‌ ಬಿ ಕೌರ್‌ 0
ರಾಹುಲ್‌ ತೇವಟಿಯಾ ಔಟಾಗದೆ 0
ಇತರ 7
ಒಟ್ಟು(5 ವಿಕೆಟಿಗೆ) 164
ವಿಕೆಟ್‌ ಪತನ:1-11, 2-67, 3-77, 4-161, 5-162.
ಬೌಲಿಂಗ್‌; ಸಂದೀಪ್‌ ಶರ್ಮ 3-0-30-1
ಭುವನೇಶ್ವರ್‌ ಕುಮಾರ್‌ 4-1-28-1
ಜಾಸನ್‌ ಹೋಲ್ಡರ್‌ 4-0-27-0
ಸಿದ್ಧಾರ್ಥ್ ಕೌಲ್‌ 4-0-36-2
ರಶೀದ್‌ ಖಾನ್‌ 4-0-31-1
ಅಭಿಷೇಕ್‌ ಶರ್ಮ 1-0-8-0

ಸನ್‌ರೈಸರ್ ಹೈದರಾಬಾದ್‌
ಜಾಸನ್‌ ರಾಯ್‌ ಸಿ ಸಂಜು ಬಿ ಸಕಾರಿಯ 60
ವೃದ್ಧಿಮಾನ್‌ ಸ್ಟಂಪ್ಡ್ ಸಂಜು ಬಿ ಮಹಿಪಾಲ್‌ 18
ಕೇನ್‌ ವಿಲಿಯಮ್ಸನ್‌ ಔಟಾಗದೆ 51
ಪ್ರಿಯಾಂ ಗರ್ಗ್‌ ಸಿ ಮತ್ತು ಬಿ ಮುಸ್ತಫಿಜರ್‌ 0
ಅಭಿಷೇಕ್‌ ಶರ್ಮ ಔಟಾಗದೆ 21
ಇತರ 17
ಒಟ್ಟು(18.3 ಓವರ್‌ಗಳಲ್ಲಿ 3 ವಿಕೆಟಿಗೆ) 167
ವಿಕೆಟ್‌ ಪತನ:1-57, 2-114, 3-119.
ಬೌಲಿಂಗ್‌; ಜೈದೇವ್‌ ಉನಾದ್ಕತ್‌ 2-0-20-0
ಕ್ರಿಸ್‌ ಮಾರಿಸ್‌ 3-0-27-0
ಮುಸ್ತಫಿಜರ್‌ ರೆಹಮಾನ್‌ 3.3-0-26-1
ಮಹಿಪಾಲ್‌ ಲೊನ್ರೋರ್‌ 3-0-22-1
ರಾಹುಲ್‌ ತೇವಟಿಯಾ 3-0-32-0
ಚೇತನ್‌ ಸಕಾರಿಯ 4-0-32-1

ಟಾಪ್ ನ್ಯೂಸ್

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ

ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.