ಸೂಪರ್‌ಮೂನ್‌ ಸಂಭ್ರಮ; ಚಂಡಮಾರುತದ ಭಯ

Team Udayavani, May 26, 2021, 6:55 AM IST

ಸೂಪರ್‌ಮೂನ್‌ ಸಂಭ್ರಮ; ಚಂಡಮಾರುತದ ಭಯ

ಮೇ 26ರಂದು ಹುಣ್ಣಿಮೆ. ಅದೇ ದಿನ ಚಂದ್ರ ಭೂಮಿಗೆ ಸಮೀಪ ಬರುವುದರಿಂದ ಸೂಪರ್‌ ಮೂನ್‌. ಈ ಬಾರಿ ಪೂರ್ಣಿಮೆ, ಸೂಪರ್‌ ಮೂನ್‌, ಚಂಡಮಾರುತದ ಆಗಮನ ಹೀಗೆ ತ್ರಿವೇಣಿ ಸಂಗಮವಾಗಿದೆ.

ಚಂದ್ರನ ಪಥ ದೀರ್ಘ‌ ವೃತ್ತಾಕಾರ. ಇದು ಒಮ್ಮೊಮ್ಮೆ ಭೂಮಿಗೆ ಹತ್ತಿರವೂ ಒಮ್ಮೊಮ್ಮೆ ದೂರವೂ ಇರುತ್ತದೆ. ಸಮೀಪವಿರುವ ದೂರವನ್ನು ಪೆರಿಜಿ ಎಂದೂ ದೂರದ ದೂರವನ್ನು ಅಪೊಜಿ ಎಂದೂ ಕರೆಯುತ್ತಾರೆ.

ಬುಧವಾರ ದೇಶದ ಪೂರ್ವ ಕರಾ ವಳಿಗೆ “ಯಾಸ್‌’ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೂ ಅಲ್ಲದೆ ಈ ದಿನ ಭಾರತದ ಹೆಚ್ಚಿನ ಭಾಗಗಳಿಗೆ ಗೋಚರವಾಗದೆ ಇರುವ ಚಂದ್ರಗ್ರಹಣವೂ ಸಂಭವಿಸಲಿದೆ.

ಇವುಗಳೆಲ್ಲದರ ಪರಿಣಾಮವಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆ (ಭರತ- ಇಳಿತ)ಗಳ ಅಬ್ಬರ ಜೋರಿರಬಹುದು.
ಪ್ರತೀ ಹುಣ್ಣಿಮೆ ಹಾಗೂ ಅಮಾ ವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು ಸರಿಸುಮಾರು ನೇರ ವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ ಹೆಚ್ಚಿನ ಬಲವುಂಟಾಗಿ ಭರತ-ಇಳಿತಗಳು ಜೋರಾಗಿರುತ್ತವೆ. ಪ್ರತೀ ಹುಣ್ಣಿಮೆ ಯಲ್ಲೂ ಅಮಾವಾಸ್ಯೆ ದಿನದಂದೂ ಗುರುತ್ವಾಕರ್ಷಣ ಬಲ ಹೆಚ್ಚಿಗೆ ಇರುತ್ತದೆ. ಸೂರ್ಯ, ಚಂದ್ರರಿಬ್ಬರ ಬಲವಿದ್ದರೂ ಚಂದ್ರನ ಬಲ ಸಮುದ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೂರೂ ಸರಳ ರೇಖೆಯಲ್ಲಿರುವುದರಿಂದ ಗುರುತ್ವಾಕರ್ಷಣೆ ಬಲದಿಂದ ಸಮುದ್ರ ಉಬ್ಬಿದಂತಾಗುತ್ತದೆ. ಸುಮಾರು ಎರಡು ಅಡಿ ನೀರಿನ ಮಟ್ಟ ಹೆಚ್ಚಿರುತ್ತದೆ. ತಿಂಗಳ ಉಳಿದ 28 ದಿನಗಳಲ್ಲಿ ಸಹಜವಾಗಿರುತ್ತದೆ.

ಮೇ 26ರ ಹುಣ್ಣಿಮೆ ಮಾಮೂಲಿ ಹುಣ್ಣಿಮೆ ಗಳಿಗಿಂತ ತುಸು ಮೇಲು. ಗ್ರಹಣದ ಹುಣ್ಣಿಮೆ ದಿನ (ಸೂರ್ಯ, ಚಂದ್ರ, ಭೂಮಿ ನೇರ ಇರುವುದರಿಂದ) ಈ ಭರತ -ಇಳಿತಗಳ ವ್ಯತ್ಯಾಸ ಸ್ವಲ್ಪ ಹೆಚ್ಚೇ ಇರಲಿದೆ.

ಎಲ್ಲೆಲ್ಲಿ ಗೋಚರ?
ಈ ಅಪರೂಪದ ಖಗೋಳ ವಿಸ್ಮಯ ವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಈಶಾನ್ಯ ಭಾರತೀಯರಿಗೆ ಮಾತ್ರವೇ ಲಭಿಸಲಿದೆ. ಈ ಭಾಗದಲ್ಲಿ ಅಪರಾಹ್ನ 3.14ಕ್ಕೆ ಆರಂಭಗೊಳ್ಳಲಿರುವ ಗ್ರಹಣ ಸಂಜೆ 6.23ಕ್ಕೆ ಅಂತ್ಯಗೊಳ್ಳಲಿದೆ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್‌ ಸಾಗರದ ಮಧ್ಯ ಭಾಗ, ಆಸ್ಟ್ರೇಲಿಯ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರವಾಗಲಿದೆ.

ಎಚ್ಚರಿಕೆ ಅಗತ್ಯ
ಇವುಗಳೆಲ್ಲದರ ಜತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಚಂಡ ಮಾರುತವೂ ಈ ದಿನ ಅಬ್ಬರಿಸುವುದರಿಂದ ಪಶ್ಚಿಮ ತೀರದಲ್ಲಿ ಕಡಲು, ಹೆಚ್ಚಿನ ಅಲೆಗಳಿಂದ ಭರತ- ಇಳಿತಗಳ ವ್ಯತ್ಯಾಸ ಹೆಚ್ಚಿರಬಹುದು. ಇದು ಈ ದಿನವೇ ಇರಬಹುದು ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು. ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ.

ರೆಡ್‌ ಬ್ಲಿಡ್‌ ಮೂನ್‌
ಈ ಸೂಪರ್‌ ಮೂನ್‌ ಭೂಮಿಗೆ ಅತೀ ಸಮೀಪದ ಸೂಪರ್‌ ಮೂನ್‌. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ. ಅಂತರದಲ್ಲಿ ಬರಲಿದೆ. (ಸರಾಸರಿ ದೂರ 3,84,000 ಕಿ.ಮೀ.). ಈ ವರ್ಷ ಮಾ. 28, ಎ.27ರಂದು ಎರಡು ಸೂಪರ್‌ ಮೂನ್‌ ಆಗಿದೆ. ಜೂ. 24ರಂದು ಇನ್ನೊಂದು ಸೂಪರ್‌ ಮೂನ್‌ ಆಗಲಿದೆ. ಆದರೆ ಈ ಸೂಪರ್‌ ಮೂನ್‌ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಸೂಪರ್‌ ಮೂನ್‌ ದಿನಗಳಲ್ಲಿ 24 ಅಂಶ ಹೆಚ್ಚು ಪ್ರಭೆಯಿಂದಲೂ, 14 ಅಂಶ ದೊಡ್ಡದಾಗಿಯೂ ಚಂದ್ರ ಗೋಚರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್‌ ಬ್ಲಿಡ್‌ ಮೂನ್‌ ಎಂದು ಕರೆಯಲಾಗುತ್ತದೆ. ಸೂಪರ್‌ ಮೂನ್‌ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ.

– ಡಾ| ಎ. ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.