ಹಬ್ಬದ ದಿನ ದೋಸೆ ಕದ್ದು ತಿಂದ ನೆನಪು


Team Udayavani, Oct 24, 2022, 12:00 PM IST

tdy-19

ಮೋಡ ಕವಿದು ಬಾನಂಗಳ ಕರಿಯ ಬಣ್ಣ ತಾಳಿದಾಗ ಎಲ್ಲೋ  ಮರೆಯಲ್ಲಿ ಮುದುಡಿದ್ದ ಸೂರ್ಯ ಸಣ್ಣಗೆ ಮಿಂಚಿನ ಬಾನು-ಭುವಿಯಲ್ಲ ಬೆಳಕಾಗಿಸಲು ಹೊರಟಂತೆ, ಬದುಕೆಂಬ ಭವಣೆಯಲಿ ಬೆಂದು ನೊಂದಿದ್ದ ಮನವ ನೋಡಿ ಮೂಲೆಯಲ್ಲಿ ಉರಿಯುತ್ತಿದ್ದ ಹಣತೆ ನಗುತ್ತಿತ್ತು, ಹೇ ಮನುಜ! ನಿನಗೆ ಬೆಳಕ ನೀಡಲು ಹೋಗಿ ನಾನು ನನ್ನ ದೇಹವನ್ನೇ ಉರಿಸಿಕೊಂಡೆಯಲ್ಲೋ   ಮೂರ್ಖ..!

ಹಣತೆಯ ಗಾತ್ರ ಕಿಂಚಿತ್ತಾದರೂ ಅವು ಜೀವನಕ್ಕೆ ನೀಡುವ ಸ್ಫೂರ್ತಿ ಬಹಳ ಮಹತ್ತರವಾದದ್ದು. ಜಗಕೆಲ್ಲ ಬೆಳಕ ನೀಡುವಾತ ಎಷ್ಟೇ ಪ್ರಕಾಶಮಾನವಾಗಿದ್ದರೂ ಇರುಳ ಕಳೆಯಲು ಅದೊಂದು ದಿನ ಹಣತೆಯ ಮೊರೆ ಹೋದ ಅದೆಷ್ಟೋ ನೆನಪುಗಳಿವೆ.

ಒಂದು ಹಣತೆಯ ಬೆಳಕಿನೆದುರಲ್ಲಿ ಹತ್ತಾರು ಮಂದಿ ಕುಳಿತು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದ ಸನ್ನಿವೇಶಗಳನ್ನು ನಮ್ಮ ಹಿರಿಯರಿಂದ ಕೇಳಿರಬಹುದು. ಹೀಗೆ ಹಣತೆಯ ಬೆಳಕು ನಮ್ಮ ಹಿರೀಕರಿಗೆ ಆತ್ಮೀಯವಾಗಿ ಇದ್ದಷ್ಟು ಇಂದಿನ ಯುವಜನತೆಗೆ ಹತ್ತಿರವಾಗಿಲ್ಲ. ಯಾಕಂದ್ರೆ ನಾವೆಲ್ಲ ಇಂದು ಇರುಳಿನಲ್ಲೂ ಸೂರ್ಯನನ್ನು ಕಲ್ಪಿಸಿಕೊಂಡವರು. ಆದರೂ ಕೂಡ ಬೆಳಕಿನ ಹಬ್ಬ ದೀಪಾವಳಿ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಮನೆ ಜಗುಲಿಯಲ್ಲಿ ಕುಣಿಯುತ್ತಿದ್ದ ಸಾಲು ಸಾಲು ಹಣತೆಗಳು.

ಹಿಂದೊಂದು ದಿನ ಮಕ್ಕಳಾಟಿಕೆಯಲ್ಲಿ ಜಾನುವಾರುಗಳನ್ನು ಕೆರೆಯಲ್ಲಿ ಮೀಯಲು ಇಳಿಸಿ ಅಪರಾಹ್ನದ ವರೆಗೂ ನೀರಿನಲ್ಲೇ ಕಳೆದದ್ದು… ತುಳಸಿ, ದಾಸವಾಳ, ಕಾಡು ಹೂಗಳ ಪೋಣಿಸಿ ಕೊಟ್ಟಿಗೆಯ ಗಂಗೆ ತುಂಗೆ ಗೌರಿಗೆ ಹಾರ ಹಾಕಿದ್ದು… ಅಮ್ಮ ಸೆಗಣಿ ಸಾರಿಸಿದ ಮನೆಯಂಗಳಕ್ಕೆ ರಂಗೋಲಿಯ ಬಣ್ಣ ತುಂಬಿದ್ದು… ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ಕುಟುಂಬ ಸಮೇತರಾಗಿ ಹರಟೆ ಹೊಡೆದಿದ್ದು… ಮುಂದೆ ಕುಂತಿದ್ದ ಅಜ್ಜಿ ಹೊಗೆ ತಾಳಲಾರದೆ ಕೆಮ್ಮುತ್ತಾ ದೋಸೆ ಹುಯ್ಯುತ್ತಿದ್ದಾಗ ಅದನ್ನು ನಾವೆಲ್ಲ ಕದ್ದು ತಿಂದಿದ್ದು… ಇರುಳಾಗುತ್ತಿದ್ದಂತೆ ಅಪ್ಪನೊಂದಿಗೆ ಪೂಜೆಯಲ್ಲಿ ಭಾಗವಹಿಸಿದ್ದು… ತೋಟದ ಮನೆಗೆ ಹೋಗಿ ಕೂ..ಕೂ ಎಂದು ಬಲೀಂದ್ರನನ್ನು ಕರೆದದ್ದು… ಪಟಾಕಿಗಳ ಸದ್ದು ತಾಳಲಾರದೆ ಕಿವಿ ಮುಚ್ಚಿಕೊಂಡಿದ್ದು…ಭಯವಿದ್ದರೂ ಬಣ್ಣದ ಸಿಡಿಮದ್ದುಗಳ ಹಾರಾಟ ಕಿರುಚಾಟ ನೋಡಬೇಕೆಂಬ ಆಸೆಯಿಂದ ಬಾಗಿಲ ಬಳಿ ಇಣುಕಿದ್ದು.. ಹೀಗೆ ದೀಪಾವಳಿ ಎಂದಾಕ್ಷಣ ಒಂದೊಮ್ಮೆ ಬಾಲ್ಯದ ಸಾಲು ಸಾಲು ನೆನಪುಗಳು ಕಣ್ಣಮುಂದೆ ಬಂದಾಗ ಹಾಯೆನಿಸುತ್ತದೆ.

ಅಂದು ದೀಪಾವಳಿಕೆಂದು ಕೊಡಿಸುತ್ತಿದ್ದ ಹೊಸ ಬಟ್ಟೆಯಲ್ಲಿ ಎಷ್ಟೆಲ್ಲಾ ಆಸೆಗಳು ಕನಸುಗಳು ತುಂಬಿರುತ್ತಿದ್ದವು ಎನ್ನುವುದನ್ನು ವರ್ಣಿಸಲು ಅಸಾಧ್ಯ. ಬಹುಶಃ ಇಂದಿನ ನಮ್ಮ ಯುವ ಪೀಳಿಗೆ ಕ್ರಮೇಣ ಎಲ್ಲಾ ಸುಖ ಸಂತೋಷಗಳನ್ನು ಕಳೆದುಕೊಂಡಿದೆ. ದೀಪಾವಳಿ ಎಂದರೆ ಕೇವಲ ಪಟಾಕಿ ಮೋಜು-ಮಸ್ತಿಗಳು ಮಾತ್ರ ಕಣ್ಣಿಗೆ ಗೋಚರಿಸುತ್ತವೆ. ಆದರೆ ಈ ಬೆಳಕಿನ ಹಬ್ಬದ ಮಹತ್ವ, ತಿಳಿವಳಿಕೆ ಇಂದು ಯಾರಿಗೂ ತಿಳಿದಂತೆ ಕಾಣುವುದಿಲ್ಲ. ಸದಾ ಬ್ಯುಸಿಯಾಗಿರು ಬ್ಯುಸಿನೆಸ್‌ ಲೈಫ್ ನಲ್ಲಿ ದೀಪಾವಳಿಯ ನಾಲ್ಕು ದಿನದ ರಜೆ ರಜೆ ಕೇವಲ ಪಿಕ್ನಿಕ್‌, ಫಿಲಂ, ಪಾರ್ಟಿ ಎಂದೇ ಕಳೆದು ಹೋಗುತ್ತೆ. ಆದರೆ ಒಂದು ಬಾರಿ ಕುಟುಂಬ ಸಮೇತರಾಗಿ ಹಬ್ಬ ಆಚರಿಸಿದಾಗ ಅಲ್ಲಿ ಸಿಗುವ ನೆಮ್ಮದಿ ,ಖುಷಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ…! ಹಾಗಾಗಿ ಈ ಬಾರಿ ನಿಮ್ಮ ದೀಪಾವಳಿ ಮನೆ ಮಂದಿಯ ಜತೆಗೆ ಸುಖ ಸಂತೋಷದಿಂದ ಕೂಡಿರಲಿ.

-ರೇಷ್ಮಾ ಎನ್‌ . ಬೆಳಾಲ್‌

ಎಸ್‌.ಡಿ.ಎಂ. ಕಾಲೇಜು ಉಜಿರೆ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.