ಟೋಲ್ ಸಿಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆ: ಆಕ್ರೋಶ
Team Udayavani, Feb 1, 2023, 1:40 AM IST
ಉಳ್ಳಾಲ : ಟೋಲ್ ಸಿಬಂದಿ ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ತಲಪಾಡಿ ಟೋಲ್ ಪ್ಲಾಜಾದಲ್ಲಿ ರವಿವಾರ ಸಂಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವೀಡಿಯೋ ವೈರಲ್ ಆಗಿದೆ.
ಟೋಲ್ ಸಿಬಂದಿ ಹಲ್ಲೆ ಮಾಡುವ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದು ಕಾರು ಚಾಲಕರು ಕೇರಳ ಮೂಲದವರೆಂದು ತಿಳಿದುಬಂದಿದೆ. ಕಾರಿನಲ್ಲಿದ ಕುಟುಂಬಸ್ಥರ ಎದುರೇ ಟೋಲ್ ಸಿಬಂದಿ ಹಲ್ಲೆ ನಡೆಸಿದ್ದು, ಇವರ ಗೂಂಡ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಉಳ್ಳಾಲ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.