ಕೋವಿಡ್ ಹೊಡೆತಕ್ಕೆ ಸಿಲುಕಿದ ಆಟ: ಭಾರತದಲ್ಲಿ ಟೆನ್ನಿಸ್ ಅಲ್ಲೋಲಕಲ್ಲೋಲ


Team Udayavani, Apr 16, 2020, 11:07 AM IST

ಕೋವಿಡ್ ಹೊಡೆತಕ್ಕೆ ಸಿಲುಕಿದ ಆಟ: ಭಾರತದಲ್ಲಿ ಟೆನ್ನಿಸ್ ಅಲ್ಲೋಲಕಲ್ಲೋಲ

‌ಮುಂಬೈ: ಕೋವಿಡ್-19 ವೈರಸ್‌ ಪರಿಣಾಮ ಯಾವ ರೀತಿಯಲ್ಲಿ ಆಗಿದೆ ಎಂದು ಎಲ್ಲರಿಗೂ ಗೊತ್ತು. ಬದುಕಿನ ಎಲ್ಲ ಹಾದಿಗಳು ಸದ್ಯ ಮುಚ್ಚಿ ಹೋಗಿವೆ. ಬಹುಶಃ ಮುಂದಿನ ದಿನಗಳಲ್ಲಿ ತಿನ್ನುವ ಅನ್ನವೂ ಇಲ್ಲವಾಗಬಹುದು. ಜಗತ್ತಿನ ಎಲ್ಲ ಕಡೆ ಹಾಹಾಕಾರ ಶುರುವಾಗಿ ಅಕ್ಷರಶಃ ಜನ ಅಂಧಕಾರದಲ್ಲಿ ಬದುಕಬೇಕಾಗಬಹುದು. ಆದರೆ ಕ್ರೀಡಾರಂಗದ ಕೆಲವು ಕಡೆ ಈಗಾಗಲೇ ಸಂಕಷ್ಟ ಶುರುವಾಗಿದೆ. ಹಾಗೆ ತಾಪತ್ರಯ ಪಡುತ್ತಿರುವ ಕ್ರೀಡೆಗಳಲ್ಲಿ ಟೆನಿಸ್‌ ಕೂಡ ಒಂದು. ದೇಶದಲ್ಲಿ ಟೆನಿಸ್‌ ಅಕಾಡೆಮಿ ನಡೆಸುತ್ತಿರುವವರು, ವೃತ್ತಿಪರ ಆಟಗಾರರು ಈಗ ಸಂಕಷ್ಟದಲ್ಲಿದ್ದಾರೆ. ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಕೋವಿಡ್-19 ಮುಗಿದ ಮೇಲಿನ ಸ್ಥಿತಿಗೆ ಅವರು ಈಗಲೇ ಅಂಜಿಕೊಳ್ಳುವಂತಹ ಸ್ಥಿತಿಯಿದೆ.

ಇತ್ತೀಚೆಗೆ ದೇಶದ ಮಣ್ಣಿನ ಕುಸ್ತಿಪಟುಗಳು ತೀರಾ ಸಂಕಷ್ಟಕ್ಕೊಳಗಾಗಿರುವುದು, ಗಾಲ್ಫ್ ಕ್ಲಬ್‌ಗಳ ಮಾಲೀಕರು, ಅಲ್ಲಿ ಕೆಲಸ ಮಾಡುವ ಕ್ಯಾಡಿಗಳು ಹಣಕ್ಕಾಗಿ ಪರಿತಪಿಸುವ ಸ್ಥಿತಿ ತಲುಪಿರುವುದು ವರದಿಯಾಗಿತ್ತು. ಈಗಿನ ಸ್ಥಿತಿ ಟೆನಿಸ್‌ನದ್ದು. ಸದ್ಯ ದೇಶ, ವಿದೇಶದಲ್ಲಿ ಟೆನಿಸ್‌ ನಡೆಯುತ್ತಿಲ್ಲ. ಹಾಗಂತ ಅಕಾಡೆಮಿಗಳ ಮಾಲೀಕರು ಸಂಬಳ ನೀಡದಿರಲು ಆಗುತ್ತಿಲ್ಲ!

ಆಟಗಾರರಿಗೆ ಭವಿಷ್ಯದ ಚಿಂತೆ
ಸದ್ಯ ಟೆನಿಸ್‌ನಲ್ಲಿ ಭಾರತದ ಭವಿಷ್ಯ ಎಂದು ಗುರ್ತಿಸಿಕೊಂಡಿರುವುದು ಪುರವ್‌ ರಾಜಾ, ದಿವಿಜ್‌ ಶರಣ್‌, ಪ್ರಜ್ಞೆಶ್‌ ಗುಣೇಶ್ವರನ್‌, ಜೀವನ್‌ ನೆಡುಂಚೆಜಿಯನ್‌, ಅಂಕಿತಾ ರೈನಾ ಇತ್ಯಾದಿ. ಇವರು ಯಾರೂ ಈಗ ಆಡುತ್ತಿಲ್ಲ. ಕೋವಿಡ್-19 ಮುಗಿದ ಮೇಲೆ ತಕ್ಷಣ ಕೂಟಗಳು ಶುರುವಾಗುತ್ತವೆ, ಇವರಿಗೆ ಆಡಲು ಸಾಧ್ಯವಾಗುತ್ತದೆ ಎಂಬ ಭರವಸೆಯೂ ಇಲ್ಲ. ಬರೀ ಪುರವ್‌ 38.27 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ.

ಇನ್ನುಳಿದ ಆಟಗಾರರ ಸ್ಥಿತಿಯೂ ಇದೇ ಆಗಿದೆ. ಇವರ ಆಟ ನಿಂತಿದೆ, ಗಳಿಕೆ ನಿಂತಿದೆ. ಆದರೆ ತರಬೇತಿಗಾಗಿ ಪಾವತಿ ಮಾಡಬೇಕಾದ ಹಣ, ಆಹಾರ, ಇನ್ನಿತರ ಸೌಲಭ್ಯಗಳಿಗಾಗಿ ಇವರ ಖರ್ಚು ನಿಲ್ಲುವುದೇ ಇಲ್ಲ. ಇದನ್ನು ತುಂಬಿಕೊಳ್ಳುವುದು ಹೇಗೆ ಎನ್ನುವುದೇ ಇಲ್ಲಿನ ಪ್ರಶ್ನೆ. ಇನ್ನೊಂದು ವಿಡಂಬನೆಯೆಂದರೆ ಮೇಲಿನ ಪಟ್ಟಿಯಲ್ಲಿರುವ ಯಾರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಲ್ಲ. ಪರಿಸ್ಥಿತಿ ಹೀಗಿರುವಾಗ ನಮ್ಮ ಮುಂದಿನ ದಾರಿಯೇನು ಎಂದು ಅವರು ಕೇಳುತ್ತಾರೆ. ಅದಕ್ಕಾಗಿ ಆಟಗಾರರ ಒಂದು ಸಂಘ ಕಟ್ಟುವುದು ಅವರ ಸಲಹೆ. ಹಾಗೆಯೇ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಟಗಾರರ ಹಿತಕ್ಕಾಗಿ ಕೂಡಲೇ ಏನಾದರೂ ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಅಕಾಡೆಮಿ ಮಾಲೀಕರ ದುಸ್ಥಿತಿ

ಭಾರತದಲ್ಲಿ 3827 ಪ್ರಮಾಣೀಕೃತ ತರಬೇತುದಾರರು ಇದ್ದಾರೆ. 10,000 ಸಹಾಯಕ ತರಬೇತುದಾರು ಇದ್ದಾರೆ. ದೇಶಾದ್ಯಂತ 2000 ಅಕಾಡೆಮಿಗಳು ಇವೆ. ಬೆಂಗಳೂರಿನಲ್ಲಿ ಡೇವಿಸ್‌ ಕಪ್‌ ತರಬೇತುದಾರ ಜೀಶನ್‌ ಅಲಿ ಅಕಾಡೆಮಿ ಹೊಂದಿದ್ದಾರೆ. ಅಲ್ಲಿ 12 ಸಿಬ್ಬಂದಿ ಇದ್ದಾರೆ. ಇನ್ನು ಭಾರತದ ಇನ್ನೊಬ್ಬ ತರಬೇತುದಾರ ಅಶುತೋಷ್‌ ಸಿಂಗ್‌ ದೆಹಲಿಯಲ್ಲಿ ಅಕಾಡೆಮಿ ಹೊಂದಿದ್ದಾರೆ. ಈ ಇಬ್ಬರೂ ಟೆನಿಸ್‌ ಚಟುವಟಿಕೆಯೇ ಇಲ್ಲದಿದ್ದರೂ ಸಂಬಳ ನೀಡುತ್ತಿದ್ದಾರೆ. ಭಾರತ ಫೆಡರೇಷನ್‌ ಕಪ್‌ ತಂಡದ ನಾಯಕ ವಿಶಾಲ್‌ ಉಪ್ಪಳ್‌ ತಮ್ಮ ಅಕಾಡೆಮಿಯಲ್ಲಿ, 14 ಮಂದಿ ಸಿಬ್ಬಂದಿ ಹೊಂದಿದ್ದಾರೆ. ಅವರಿಗೆ ತಿಂಗಳಿಗೆ 4.5 ಲಕ್ಷ ರೂ. ವೇತನ ನೀಡುತ್ತಾರೆ.

ಸಮಸ್ಯೆಯೇನು?

ಈಗೇನೋ ಕೊರೊನಾ ಇದೆ ಮಕ್ಕಳು ಬರುತ್ತಿಲ್ಲ. ಕೊರೊನಾ ಮುಗಿದ ಮೇಲೆ ಮಕ್ಕಳು ಬರುವುದರ ಬಗ್ಗೆ ಅಕಾಡೆಮಿಗಳಿಗೆ ಅನುಮಾನವಿದೆ. ಭಾರತದಲ್ಲಿ ಕ್ರೀಡೆಗೆ ವೃತ್ತಿ ಎನ್ನುವ ಸ್ಥಾನವಿಲ್ಲ. ಹೀಗಿರುವಾಗ ಆರ್ಥಿಕ ಕುಸಿತವಿರುವಾಗಲೂ ಮಕ್ಕಳು ಬರುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವೇ? ಅಕಾಡೆಮಿಗಳು ಏನು ಮಾಡಬೇಕು?

ಜಿಎಸ್‌ಟಿ ಮನ್ನಾ ಮಾಡಿ

ದೇಶದಲ್ಲಿರುವ ಕ್ರೀಡೆಗಳ ಪರಿಸ್ಥಿತಿ ಸುಧಾರಿಸಲು ಸರ್ಕಾರವೂ ಕೆಲವು ಕ್ರಮ ತೆಗೆದುಕೊಳ್ಳಬೇಕು ಎಂದು ವಿಶಾಲ್‌ ಉಪ್ಪಳ್‌ ಮನವಿ ಮಾಡಿದ್ದಾರೆ. ಸರ್ಕಾರ ಈಗ ಅಕಾಡೆಮಿಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ಹೇರಿದೆ. ಕ್ರೀಡೆಯನ್ನು ಶಿಕ್ಷಣ ಎಂದು ಪರಿಗಣಿಸಿ, ಜಿಎಸ್‌ಟಿ ರದ್ದು ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.