2ನೇ ಡೋಸ್-3ನೇ ಡೋಸ್ ನಡುವಿನ ಅಂತರ ಕಡಿತ?
Team Udayavani, Apr 28, 2022, 7:25 AM IST
ನವದೆಹಲಿ: ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರವನ್ನು ಈಗಿರುವ 9 ತಿಂಗಳಿನಿಂದ 6 ತಿಂಗಳಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಏ.29ರಂದು ರಾಷ್ಟ್ರೀಯ ಕೊರೊನಾ ತಾಂತ್ರಿಕ ಸಮಿತಿ ಸಭೆ ನಡೆಯಲಿದ್ದು, ಅಂದು ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅಲ್ಲದೆ, ಐಸಿಎಂಆರ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ನಡೆಸಿರುವ ಸಂಶೋಧನೆ ಪ್ರಕಾರ, 6 ತಿಂಗಳ ಬಳಿಕ ಲಸಿಕೆಯ ಪ್ರಭಾವ ಅಥವಾ ದೇಶದಲ್ಲಿನ ಕೊರೊನಾ ಪ್ರತಿರೋಧಕ ಸಾಮರ್ಥ್ಯ ಇಳಿಕೆಯಾಗುತ್ತದೆ.
ಹೀಗಾಗಿ, 2ನೇ ಡೋಸ್ ಪಡೆದು 6 ತಿಂಗಳಾದ ಮೇಲೆ ಮುನ್ನೆಚ್ಚರಿಕಾ ಡೋಸ್ ನೀಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.