ಚೀನಿ ಆ್ಯಪ್ ಗಳನ್ನು ಡಿಲೀಟ್ ಮಾಡುವ ಹೊಸ ಆ್ಯಪ್ಗೆ ಭರ್ಜರಿ ಬೇಡಿಕೆ!
Team Udayavani, Jun 2, 2020, 6:40 PM IST
ಹೊಸದಿಲ್ಲಿ: ಕೋವಿಡ್-19 ವೈರಸ್ ಹಾವಳಿ, ಲಡಾಖ್ನಲ್ಲಿ ಚೀನಿ ಸೈನಿಕರ ಕಿರಿಕ್ನಿಂದಾಗಿ ಭಾರತದಲ್ಲಿ ಚೀನ ವಸ್ತುಗಳನ್ನು ಬಹಿಷ್ಕರಿಸಿ, ಆ್ಯಪ್ ಗಳನ್ನು ಡಿಲೀಟ್ ಮಾಡಿ ಎಂಬ ಕೂಗುಗಳು ಜೋರಾಗಿವೆ.
ಆ್ಯಪ್ ಗಳನ್ನು ಡಿಲೀಟ್ ಮಾಡುವ ವಿಚಾರದಲ್ಲಂತೂ ಇದರ ನೇರ ಲಾಭ ಒಂದು ಆ್ಯಪ್ಗೆ ಆಗಿದೆ. “ರಿಮೂವ್ ಚೀನ ಆ್ಯಪ್ಸ್’ ಹೆಸರಿನ ಈ ಆ್ಯಂಡ್ರಾಯಿಡ್ ಆ್ಯಪ್ಗೆ ಭರ್ಜರಿ ವೈರಸ್ ಆಗಿದ್ದು, ಮೇ 17ರ ಬಳಿಕ 50 ಲಕ್ಷ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಏನಿದು ರಿಮೂವ್ ಚೀನ ಆ್ಯಪ್ಸ್?
ಇದು ಯಾವ ಆ್ಯಪ್ ಯಾವ ದೇಶದಿಂದ ಲಾಂಚ್ ಆಗಿದೆ ಎಂಬುದನ್ನು ಗುರುತಿಸುತ್ತದೆ. ವಿಶೇಷವಾಗಿ ಇದು ಹೆಸರೇ ಹೇಳುವಂತೆ ಚೀನದಿಂದ ಲಾಂಚ್ ಆದ ಆ್ಯಪ್ ಗಳನ್ನು ಗುರುತಿಸಿ ಡಿಲೀಟ್ ಮಾಡುತ್ತದೆ. ಆ್ಯಪ್ ಇನ್ಸ್ಟಾಲ್ ಮಾಡುವಾಗಲೇ ನಿರ್ದಿಷ್ಟ ಆ್ಯಪ್ ಚೀನದ್ದು ಆಗಿದ್ದರೆ ತಿಳಿಸುತ್ತದೆ ಕೂಡ.
ಈ ಆ್ಯಪ್ ಭಾರತದಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಪ್ರಸಿದ್ಧಿ ಹೊಂದುತ್ತಿದೆ. ಅಲ್ಲೂ ಚೀನ ವಿರೋಧಿ ಮನೋಭಾವನೆ ಹೆಚ್ಚುತ್ತಿದ್ದು, ಆ್ಯಪ್ ಹೆಚ್ಚು ಡೌನ್ಲೋಡ್ ಆಗಲು ಕಾರಣವಾಗಿದೆ.
ಆ್ಯಪ್ ಕಾರ್ಯಾಚರಣೆ
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯ. ಇದಕ್ಕೆ ಲಾಗಿನ್ ಆಗಬೇಕಾದ ಆವಶ್ಯಕತೆ ಇಲ್ಲ. ಬಳಕೆದಾರರು ಆ್ಯಪ್ ಇನ್ಸ್ಟಾಲ್ ಮಾಡಿ ಸ್ಕ್ಯಾನ್ ಕೊಟ್ಟರೆ ಸಾಕು ಇದು ಚೀನ ಮೂಲದ ಆ್ಯಪ್ ಅನ್ನು ಹುಡುಕುತ್ತದೆ. ಗಮನಿಸಬೇಕಾದ ಅಂಶವೆಂದರೆ ಬಳಕೆದಾರರು ಫೋನ್ನಲ್ಲಿ ಇನ್ಸ್ಟಾಲ್ ಮಾಡಿದ ಆ್ಯಪ್ ಗಳನ್ನು ಮಾತ್ರವೇ ಇದು ಗುರುತಿಸುತ್ತದೆ. ಒಂದು ವೇಳೆ ಬಳಕೆದಾರರ ಫೋನ್ನಲ್ಲಿ ಡಿಫಾಲ್ಟ್ ಆಗಿ ಚೀನ ಆ್ಯಪ್ ಇದ್ದರೆ ಅದನ್ನು ಡಿಲೀಟ್ ಮಾಡದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
MUST WATCH
ಹೊಸ ಸೇರ್ಪಡೆ
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ