Udayavni Special

ಹೊರಗಿನ ಕಾರ್ಮಿಕರು ತವರಿಗೆ; ಕನ್ನಡಿಗರಿಗೆ ವರದಾನ !

ರಾಜ್ಯ ಸರಕಾರ ಮನಸ್ಸು ಮಾಡಿದರೆ ಮಾತ್ರ ಸಾಧ್ಯ

Team Udayavani, May 15, 2020, 6:15 AM IST

ಹೊರಗಿನ ಕಾರ್ಮಿಕರು ತವರಿಗೆ; ಕನ್ನಡಿಗರಿಗೆ ವರದಾನ !

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ಹೊರ ಜಿಲ್ಲೆ -ಹೊರ ರಾಜ್ಯಗಳ ವಲಸೆ ಕಾರ್ಮಿಕರು ಸ್ವಂತ ಊರುಗಳತ್ತ ಮುಖ ಮಾಡಿದ್ದಾರೆ. ಇದು ಭವಿಷ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಾ ವಕಾಶ ಸೃಷ್ಟಿಗೆ ವಿಪುಲ ಅವಕಾಶ ತೆರದಿಡಲಿದೆ. ಇದಕ್ಕಾಗಿ “ನಮ್ಮವರು’ ಮನಸ್ಸು ಮಾಡಬೇಕಷ್ಟೇ.

ನಿರ್ಮಾಣ ಸಹಿತ ವಿವಿಧ ಕ್ಷೇತ್ರಗಳ ಕಾರ್ಮಿಕರು ಬಹುತೇಕ ಹೊರ ರಾಜ್ಯಗಳಿಂದ ಬಂದವರು. ಪ್ರಸ್ತುತ ಅವರು ಊರಿಗೆ ಮರಳಿದ್ದಾರೆ. ಈಗ ಪ್ರತಿಷ್ಠೆ ಬದಿಗೊತ್ತಿ ಮುಂದೆ ಬಂದರೆ ಮತ್ತು ರಾಜ್ಯ ಸರಕಾರ ಪಣತೊಟ್ಟರೆ ಈಗಿನ ಅನಿವಾರ್ಯತೆಯನ್ನು ಅವಕಾಶ ವಾಗಿ ಪರಿವರ್ತಿಸಬಹುದು. ಅದಕ್ಕೆ ಇದು ಸಕಾಲವೂ ಹೌದು ಎಂದು ಸಣ್ಣ ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಸಂಘಟನೆಗಳು ವಿಶ್ಲೇಷಿಸುತ್ತವೆ.
ರಾಜ್ಯದ ಸಣ್ಣ ಕೈಗಾರಿಕಾ ವಲಯದಲ್ಲಿ 6.5 ಲಕ್ಷ ಸಣ್ಣ, ಅತೀ ಸಣ್ಣ ಉದ್ದಿಮೆಗಳಿವೆ. ಇಲ್ಲಿ 10ರಿಂದ 15 ಲಕ್ಷ ವಲಸೆ ಕಾರ್ಮಿಕರು. ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಲ್ಲಿ 6ರಿಂದ 7 ಲಕ್ಷ ವಲಸಿಗರು. ಪ್ರಸ್ತುತ ಅವರು ತವರಿಗೆ ಮರಳಿರುವುದರಿಂದ ರಾಜ್ಯ ದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗ ಗಳು ತೆರವಾಗಿದ್ದು, ಈ ಜಾಗವನ್ನು ತುಂಬಲು ಸ್ಥಳೀಯರಿಗೆ ಅವಕಾಶ ಸಿಗಲಿದೆ ಎಂಬುದು ಸಣ್ಣ ಕೈಗಾರಿಕೆ ಸಂಘಟನೆಗಳ ಲೆಕ್ಕಾಚಾರ.

ವಲಸೆ ಕಾರ್ಮಿಕರು ತವರಿಗೆ ಮರಳಿರುವುದರಿಂದ ಕುಶಲೇತರ ಕಾರ್ಮಿಕರು ಹೆಚ್ಚಿರುವ ಸಂಘಟಿತ ಮತ್ತು ಅಸಂಘ ಟಿತ ಸಣ್ಣ ಉದ್ದಿಮೆ, ನಿರ್ಮಾಣ ವಲಯ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರಿಗೆ ಬೇಡಿಕೆ ಮತ್ತು ಆದ್ಯತೆ ಹೆಚ್ಚಿರುತ್ತದೆ. ಈ ಅವಕಾಶವನ್ನು ಸ್ಥಳೀಯರು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಸಣ್ಣ ಕೈಗಾರಿಕೆಗಳು ಮತ್ತು ನಿರ್ಮಾಣ ಕಾಮಗಾರಿಗಳ ವಲಯದ ತಜ್ಞರು ಅಭಿಪ್ರಾಯಪಡುತ್ತಾರೆ.

ನೀಲನಕ್ಷೆ ರೂಪಿಸಲಿ
ಒಂದು ಕಾಲದಲ್ಲಿ ಬೆಂಗಳೂರು ಸಹಿತ ಇಡೀ ರಾಜ್ಯದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಮಿಳರ ಪ್ರಾಬಲ್ಯ ಇತ್ತು. 90ರ ದಶಕದಲ್ಲಿ ನಡೆದ ಕಾವೇರಿ ಗಲಾಟೆಯ ಅನಂತರ ಚಿತ್ರಣ ಬದಲಾಯಿತು. ಆಗ ಉತ್ತರ ಕರ್ನಾಟಕ, ಉತ್ತರ ಭಾರತದವರಿಗೆ ಅವಕಾಶ ಸಿಕ್ಕಿತು. ಈಗ ಅವರೆಲ್ಲ ದೊಡ್ಡ ಸಂಖ್ಯೆಯಲ್ಲಿ ಹೊರಟು ಹೋಗಿದ್ದಾರೆ. ಇದು ಕನ್ನಡಿಗರಿಗೊಂದು ಸದವಕಾಶ. ವೃತ್ತಿ ಮೈಲಿಗೆ ಬಿಟ್ಟು ಈ ಅವಕಾಶಗಳನ್ನು ಕನ್ನಡಿಗರು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವೂ ನೀಲನಕ್ಷೆಯೊಂದನ್ನು ರೂಪಿಸಬೇಕು ಎಂದು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತ ಹೋರಾಟದ ಮುಂದಾಳು ರಾ.ನಂ. ಚಂದ್ರಶೇಖರ್‌ ಅಭಿಪ್ರಾಯಪಡುತ್ತಾರೆ.

ವಲಸೆ ಕಾರ್ಮಿಕರು ವಾಪಸಾತಿ ಯಿಂದ ನಮ್ಮವರಿಗೆ ವಿಪುಲ ಅವಕಾಶ ಸಿಗಲಿವೆ. ಈ ಅವಕಾಶ ವನ್ನು ಬಳಸಿಕೊಳ್ಳುವ ಸವಾಲು ಸ್ಥಳೀಯರ ಮುಂದಿದೆ. ಆದರೆ ವೈಟ್‌ ಕಾಲರ್‌ ಜಾಬ್‌ ಇಷ್ಟಪಡುವ ಮನಃಸ್ಥಿತಿಯಿಂದ ನಮ್ಮವರು ಹೊರಬರುತ್ತಾರೆಯೇ ಎಂಬುದು ಪ್ರಶ್ನೆ.
-ಆರ್‌. ರಾಜು, ಅಧ್ಯಕ್ಷರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)

ವಲಸಿಗರು ದಿನಕ್ಕೆ 13-14 ತಾಸು ಕೆಲಸ ಮಾಡುತ್ತಾರೆ. ಕೂಲಿ ಕಡಿಮೆ, ರಜೆ ಇಲ್ಲ. ವಲಸೆ ಕಾರ್ಮಿಕರು 30 ದಿನಗಳಲ್ಲಿ ಮುಗಿಸುವ ಯೋಜನೆಗೆ ಸ್ಥಳೀಯರಿಗೆ 40 ದಿನ ತಗಲುತ್ತದೆ ಎಂಬ ಭಾವನೆ ಇದೆ. ಇವನ್ನು ಮೆಟ್ಟಿ ನಿಂತರೆ ಸ್ಥಳೀಯರಿಗೆ ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ.
– ಎನ್‌.ಪಿ. ಸಾಮಿ, ಅಧ್ಯಕ್ಷರು, ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

shouting kovid

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೋವಿಡ್‌ 19 ಅಬ್ಬರ

lock-kendra

ಲಾಕ್‌ಡೌನ್‌ ಸಡಿಲ : ಕೇಂದ್ರಕ್ಕೆ ವರದಿ ಸಲ್ಲಿಸಲು ಸಿದ್ಧತೆ

vividha malas

“ಬಿಜೆಪಿ ಸಂಪರ್ಕದಲ್ಲಿ ವಿವಿಧ ಪಕ್ಷಗಳ ಶಾಸಕರು’

adi hara

ಅದಿರು ಹರಾಜಿಗೆ ಕ್ರಮ ವಹಿಸಲು ಸಿಎಂ ಸೂಚನೆ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

30-May-06

ಫೈನಾನ್ಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

30-May-05

ಅನಧಿಕೃತ ತಂಬಾಕು ಮಾರಾಟ ನಿಯಂತ್ರಿಸಿ: ಡಿಸಿ

30-May-04

ಊರಿಗೆ ಮರಳಿದ 139 ವಲಸೆ ಕಾರ್ಮಿಕರು

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.