ಮೈತ್ರಿ ಸರ್ಕಾರವಿದೆ ಎಂದು ಸತ್ಯ ತಿರುಚಬೇಕಾ: ಸಿದ್ದರಾಮಯ್ಯ ಪ್ರಶ್ನೆ
Team Udayavani, Jun 28, 2019, 3:20 PM IST
ಬಾಗಲಕೋಟೆ: ಅಹಿಂದ ಸಂಘಟನೆ ಮಾಡಿದ್ದಕ್ಕಾಗಿ ಜೆಡಿಎಸ್‌ನಿಂದನನ್ನನ್ನು ಹೊರ ಹಾಕಿದರು ಎಂದು ಅಮರೇಗೌಡ ಬಯ್ಯಾಪುರ ಅವರು ಹೇಳಿರುವುದು ಸತ್ಯ. ಮೈತ್ರಿ ಸರ್ಕಾರವಿದೆ ಎಂದು ಸತ್ಯವನ್ನು ತಿರುಚಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶುಕ್ರವಾರ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ಪಕ್ಷದ ಮೂಲಕವೆ ಅಹಿಂದ ಸಂಘಟಿಸುತ್ತೇನೆ. ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದು, ಪ್ರತ್ಯೇಕ ಸಂಘಟನೆ ಮಾಡುವುದಿಲ್ಲ ಎಂದರು.
ಮಾಧ್ಯಮಗಳ ವಿರುದ್ಧ ಕಿಡಿ
ನಾನು ಕೆಲಸ ಮಾಡುವವವರಿಗೆ ಮತ ಹಾಕಿ , ಕೆಲಸ ಮಾಡದವರಿಗೆ ಮತ ಹಾಕಬೇಡಿ ಎಂದಿದ್ದೆ ಆದರೆ ಮಾಧ್ಯಮದವರು ಆ ಹೇಳಿಕೆಯನ್ನು ಕುಮಾರಸ್ವಾಮಿ ಅವರ ಹೇಳಿಕೆಗೆ ಲಿಂಕ್ ಮಾಡಿದ್ದೀರಿ .ನಾನು ಹೇಳಿದ ರೀತಿಯಲ್ಲಿ ಪ್ರಸಾರ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದಲ್ಲಿ ಆಪರೇಷನ್ ಕಮಲ ಸಾಧ್ಯವಿಲ್ಲ. ಬಿಜೆಪಿಯವರಿಗೇ ಆಪರೇಷನ್ ಮಾಡಬೇಕು ಎಂದರು.
ಬಾದಾಮಿ ಪಟ್ಟಣ ಪ್ರದಕ್ಷಿಣೆ ನಡೆಸಿ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಇದೇ ವೇಳೆ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!
ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ
ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ
ಆಸ್ಪತ್ರೆಗಳಲ್ಲಿ ನಾರ್ಮಲ್ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಹೆಚ್ಚಳ : ಅಡಳಿತಾಧಿಕಾರಿ ಕಳವಳ