ದುರಸ್ಥಿಯಾಗದ ತುಂಗಭದ್ರಾ ಗೇಟ್ :ಅಪಾರ ಪ್ರಮಾಣದ ನೀರು ಪೋಲು

Team Udayavani, Aug 13, 2019, 6:52 PM IST

ಕೊಪ್ಪಳ: ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಮುಖ್ಯ ಕಾಲುವೆ ಮುರಿದಿದ್ದು ಸಂಜೆ ಕಳೆದರೂ ಇನ್ನೂ ದುರಸ್ತಿ ಮಾಡಲಾಗಿಲ್ಲ. ಇದರಿಂದ ಅಪಾರ ಪ್ರಮಾಣದ ನೀರು ಜಲಾಶಯದಿಂದ ಹರಿದು ನದಿಪಾತ್ರಗಳಿಗೆ ಸೇರುತ್ತಿದೆ.

ಇಂದು ಬೆಳಗ್ಗೆ 8.20ಕ್ಕೆ ಗೇಟ್ ಮುರಿದಿದ್ದು ಸಂಜೆ 6.30ರ ಹೊತ್ತಿಗೂ ಗೇಟ್ ದುರಸ್ಥಿ ಮಾಡಲಾಗಿಲ್ಲ. ಡ್ಯಾಂ ನೀರಿನ ರಭಸ ನೋಡಿದ ನದಿ ಪಾತ್ರದ ಜನರು ಆತಂಕದಿಂದ ಊರು ತೊರೆಯುತ್ತಿದ್ದಾರೆ‌.

ಜಿಲ್ಲಾಡಳಿತ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಇನ್ನೂ ನೀರಾವರಿ ಇಲಾಖೆ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದರೂ ನೀರು ನಿಯಂತ್ರಣಕ್ಕೆ ಬರುತ್ತಿಲ್ಲ‌. ಈಗಷ್ಟೇ ಇಬ್ಬರು ನೀರಾವರಿ ಇಲಾಖೆ ತಜ್ಞರು ಬೆಳಗಾವಿ, ಮೈಸೂರಿನಂದ ಕರೆಸಲಾಗುತ್ತಿದೆ. ಇನ್ನೂ ಗೇಟ್ ಅಳವಡಿಕೆ ಕಾರ್ಯಾಚರಣೆ ಮಂದುವರೆದಿದ್ದು ಡ್ಯಾಂ ತಟದ 70 ಎಕರೆ ಪಂಪಾವನ ಪೂರ್ಣ ಜಲಾವೃತವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ