
ಬೆಂಗಳೂರಿನಲ್ಲಿ ಸಿಲುಕಿದ್ದ ಮಂಗಳೂರು ಯುವತಿಯನ್ನು ಮನೆ ತಲುಪಿಸಿದ ಯು ಟಿ ಖಾದರ್
Team Udayavani, Apr 12, 2020, 4:20 PM IST

ಮಂಗಳೂರು: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಕರೆತಂದು ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರಿನ ಮೂಲದ ಮಧುಶ್ರೀ ಎಂಬ ಯುವತಿ ಇಟಲಿಯಲ್ಲಿ ವಾಸವಾಗಿದ್ದರು. ಕೋವಿಡ್-19 ಹರಡುತ್ತಿರುವ ಕಾರಣ ಇಟಲಿಯಿಂದ ಮಾ.22ರಂದು ಕೊನೆಯ ವಿಮಾನದಲ್ಲಿ ಮಧುಶ್ರೀ ದೆಹಲಿ ತಲುಪಿದ್ದಳು. ಇಟಲಿಯಲ್ಲಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ದೆಹಲಿಯಲ್ಲಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು. ನಂತರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮೊನ್ನೆ ರಾತ್ರಿ ದಿಲ್ಲಿಯಿಂದ ವಿಶೇಷ ಬಸ್ ಮೂಲಕ ಮಧುಶ್ರೀ ಬೆಂಗಳೂರು ತಲುಪಿದ್ದಳು.
ಆದರೆ ಬೆಂಗಳೂರು ತಲುಪಿದ ಮಧುಶ್ರೀಗೆ ಮಂಗಳೂರಿಗೆ ಬರುದಕ್ಕೆ ಬಸ್ ಅಥವಾ ಯಾವುದೇ ವ್ಯವಸ್ಥೆ ಇರಲಿಲ್ಲ. ನಂತರ ವಿಷಯ ತಿಳಿದ ಮಾಜಿ ಸಚಿವ ಯು.ಟಿ ಖಾದರ್, ಯುವತಿಯ ನೆರವಿಗೆ ಧಾವಿಸಿ ತನ್ನ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಕರೆ ತಂದು, ಮಧುಶ್ರೀ ಅವರ ಕುಳಾಯಿಯಲ್ಲಿ ಇರುವ ಮನೆಗೆ ತಲುಪಿಸಿದ್ದಾರೆ. ಖಾದರ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

BJP ಸಂಸದನ ವಿವಾದ ; ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳ ಬಳಕೆ