ಎಲ್ಲೆಡೆ ಹರಡಲಿದೆ ಶ್ರೀಗಂಧ ಪರಿಮಳ

Team Udayavani, Nov 18, 2022, 7:20 AM IST

ಎಲ್ಲೆಡೆ ಹರಡಲಿದೆ ಶ್ರೀಗಂಧ ಪರಿಮಳ

ಬೆಂಗಳೂರು: ರಾಜ್ಯದಲ್ಲಿ ಶ್ರೀಗಂಧ ಮರಗಳನ್ನು ರೈತರು ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಅವಕಾಶ ಕಲ್ಪಿಸುವ‌ “ಕರ್ನಾಟಕ ರಾಜ್ಯ ಶ್ರೀಗಂಧ ನೀತಿ-2022′ ಅನ್ನು ಸಚಿವ ಸಂಪುಟ ಅನುಮೋದಿಸಿದೆ.

“ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಲು ಉತ್ತೇಜನ ನೀಡಲೆಂದೇ ಶ್ರೀಗಂಧದ ಮರಗಳ ಕಡಿತ, ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಸರಳೀಕರಿಸಲು ಶ್ರೀಗಂಧ ನೀತಿಯನ್ನು ರೂಪಿಸ ಲಾಗುವುದು’ ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಅವರು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿ ಗೋಷ್ಠಿ ನಡೆಸಿದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಕ್ಕಂತೆ ಶ್ರೀಗಂಧ ಪೂರೈಸಲು ಹಾಗೂ ರೈತರ ಆರ್ಥಿಕ ಸಶಕ್ತೀಕರಣಕ್ಕಾಗಿ ನೀತಿ ಜಾರಿಗೆ ತರಲಾಗುತ್ತಿದೆ ಎಂದರು.

ಶ್ರೀಗಂಧ ನೀತಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಶ್ರೀಗಂಧ ಕೃಷಿ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಅವರೇ ಮಾರ ಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಶ್ರೀಗಂಧಕ್ಕೆ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಬೇಕಾ ದಷ್ಟು ಶ್ರೀಗಂಧ ಸಿಗದೇ ಆಸ್ಟ್ರೇಲಿಯಾ ದಿಂದ ಆಮದು ಮಾಡಿ ಕೊಳ್ಳ ಲಾಗುತ್ತಿತ್ತು  ಎಂದರು.

ಸರಕಾರಿ ಮತ್ತು ಖಾಸಗಿ ಜಾಗ ಗಳಲ್ಲಿ ಶ್ರೀಗಂಧ ಬೆಳೆಯಲು ಸೂಕ್ತ ಮಾರ್ಗದರ್ಶನ, ಬೆಳೆದ ಮರಗಳ ರಕ್ಷಣೆ, ಕಳವು ಮರಗಳಿಗೆ ಚಿಪ್‌ಗ್ಳನ್ನು ಅಳವಡಿಸಲಾಗುವುದು ಎಂದರು.

ಪ್ರದೇಶಗಳ ಘೋಷಣೆ :

ರಾಜ್ಯದಲ್ಲಿ ಹೊಸದಾಗಿ ಉತ್ತಾರೆ ಗುಡ್ಡ ವನ್ಯಜೀವಿ ಧಾಮ, ಬಂಕಾಪುರ ವನ್ಯಜೀವಿ ಧಾಮ, ಅರಸೀಕೆರೆ ಕರಡಿ ಧಾಮ, ಹಿರೆಸೂಲೇಕೆರೆ ಕರಡಿ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣ ಪ್ರದೇಶ, ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣ ಪ್ರದೇಶ, ಬೋನಾಳ ಪಕ್ಷಿ ಸಂರಕ್ಷಣ ಮೀಸಲು ಪ್ರದೇಶಗಳನ್ನು ಹೊಸ ಸಂರಕ್ಷಿತ ಪ್ರದೇಶಗಳೆಂದು ಘೋಷಿಸುವ ಪ್ರಸ್ತಾವಗಳಿಗೆ ಸಂಪುಟ ಸಮ್ಮತಿಸಿದೆ.

ಡಿ.19ರಿಂದ ಅಧಿವೇಶನ :

ಡಿಸೆಂಬರ್‌ 19ರಿಂದ 30ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಜಿಲ್ಲಾ ವರ್ಗಾವಣೆಗೆ ಒಪ್ಪಿಗೆ: 

ರಾಜ್ಯದ ಎಲ್ಲಾ ಸರಕಾರಿ ಇಲಾಖೆ ಗಳ ಸಿ ಮತ್ತು ಡಿ ದರ್ಜೆ ನೌಕರರು ಒಂದೇ ಕಡೆ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿದ್ದರೆ ಪತಿ- ಪತ್ನಿ ಪ್ರಕರಣದಲ್ಲಿ ಅಂತರ್‌ ಜಿಲ್ಲಾ ವರ್ಗಾ ವಣೆಗೆ ಅವಕಾಶ ಮಾಡಿ ಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿ ಸಿದೆ. ಶಿಕ್ಷಣ ಇಲಾಖೆ ಯಲ್ಲಿ ಕನಿಷ್ಠ 5 ವರ್ಷ, ಗೃಹ ಇಲಾಖೆಯಲ್ಲಿ 7 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಅನಂತರ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾ ವಣೆಗೆ ಅವಕಾಶವಿತ್ತು.

ಟಾಪ್ ನ್ಯೂಸ್

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

politi

ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

ಕೇಡರ್‌ ಬಲವರ್ಧನೆ: ಶಾ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ

ಕೇಡರ್‌ ಬಲವರ್ಧನೆ: ಶಾ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ

ಮೀಸಲು ರಾಜಕೀಯ ಹಗ್ಗಜಗ್ಗಾಟ

ಮೀಸಲು ರಾಜಕೀಯ ಹಗ್ಗಜಗ್ಗಾಟ: ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನೇರ ವಾಗ್ಯುದ್ಧ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.