
Reels Craze: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕನ ದುರಂತ ಅಂತ್ಯ
Team Udayavani, Sep 30, 2023, 4:23 PM IST

ಲಕ್ನೋ: ಇತ್ತೀಚೆಗೆ ಹೆಚ್ಚು, ಹೆಚ್ಚು ಜನರನ್ನು ಸೆಳೆಯಲು ರೀಲ್ಸ್ ವ್ಯಾಮೋಹಕ್ಕೆ ಒಳಗಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಘಟನೆ ನಡೆಯುತ್ತಿದ್ದು, ಅದಕ್ಕೊಂದು ಸೇರ್ಪಡೆ ಎಂಬಂತೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಮುಂದಾದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಬಾಲಕ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಇದನ್ನೂ ಓದಿ:Asian Games; ಭಾರತಕ್ಕೆ ಮತ್ತೆರಡು ಸ್ವರ್ಣ; ಟೆನ್ನಿಸ್- ಸ್ಕ್ವಾಷ್ ನಲ್ಲಿ ಬಂಗಾರದ ಗೌರವ
ಭಯಾನಕ, ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈತ ಸಾಯುವ ಕೊನೆ ಕ್ಷಣದ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ. 14 ವರ್ಷದ ಫಾರ್ಮನ್ ಎಂಬ ಬಾಲಕ ರೀಲ್ಸ್ ಗೆ ಫೋಸು ಕೊಡಲು ರೈಲ್ವೆ ಹಳಿ ಸಮೀಪ ಹಳಿ ಮೇಲೆ ಕಾಲಿಡುತ್ತಿದ್ದಂತೆಯೇ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಫಾರ್ಮನ್ ಗೆಳೆಯ ಈ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದು, ಏಕಾಏಕಿ ಸಂಭವಿಸಿದ ಘಟನೆಯಿಂದ ಆತ ಆಘಾತಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ. ಫಾರ್ಮನ್ ಉತ್ತರಪ್ರದೇಶದ ಜಹಾಂಗೀರ್ ಬಾದ್ ನ ತೇರಾ ದೌಲತ್ ಪುರದ ನಿವಾಸಿ ಮುನ್ನಾ ಎಂಬವರ ಪುತ್ರ ಎಂದು ಗುರುತಿಸಲಾಗಿದೆ.
tw // disturbing
Barabanki: A teenager Farmaan (14) who was purportedly making a video for Instagram reels along the railway tracks was kiIIed when he was struck by a running train. pic.twitter.com/Ysxl895ABD
— زماں (@Delhiite_) September 30, 2023
ವರದಿಯ ಪ್ರಕಾರ, ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದು, ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indore: ಪ್ರೇಯಸಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿ ಗಂಡಾಗಿ ಬದಲಾದ ಮಹಿಳೆ.!

Fake Toll Plaza; ಒಂದೂವರೆ ವರ್ಷದಿಂದ ಜನರಿಂದ ಹಣ ಸಂಗ್ರಹ ಮಾಡುತ್ತಿದೆ ನಕಲಿ ಟೋಲ್ ಗೇಟ್

Video: ಕಾಡಾನೆ ಜೊತೆ ಯುವಕರ ಹುಚ್ಚಾಟ… ಭಯ ಹುಟ್ಟಿಸುವ ವಿಡಿಯೋ ವೈರಲ್

Video: ಬಿಡದ ಛಲ… ದೈತ್ಯ ಮೊಸಳೆಯ ಬಾಯಿಯಿಂದ ತಪ್ಪಿಸಿಕೊಂಡು ಈಜಿ ದಡ ಸೇರಿದ ಜಿಂಕೆ

Video: ಬಿರಿಯಾನಿ ತಿನ್ನುವ ಎಂದು ಆರ್ಡರ್ ಮಾಡಿದರೆ ಬಿರಿಯಾನಿ ಜೊತೆ ಸತ್ತ ಹಲ್ಲಿ ಕೂಡ ಬಂದಿದೆ
MUST WATCH
ಹೊಸ ಸೇರ್ಪಡೆ

Mudalagi:ಯುವಕರು ಗರಡಿ ಮನೆಗಳತ್ತ ಹೆಜ್ಜೆ ಹಾಕಿದ್ರೆ ಕುಸ್ತಿಯ ಗತವೈಭವ ಮತ್ತೆ ಮರುಕಳಿಸುತ್ತೆ

I-T raids;ಬಿಜೆಪಿಯವರ ಮೇಲೇಕೆ ದಾಳಿಗಳಾಗುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ

Hyderabad; ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಯೋಗಕ್ಷೇಮ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ

BSP;ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಉತ್ತರಾಧಿಕಾರಿಯನ್ನು ನೇಮಿಸಿದ ಮಾಯಾವತಿ

Kottigehara: ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ