ಪ್ರತಿಸ್ಪರ್ಧಿಗಳ ಹತ್ತಿಕ್ಕಿದ ಆರೋಪ: ಫೇಸ್ಬುಕ್ ವಿರುದ್ಧ 48 ಪ್ರಾಂತ್ಯಗಳಿಂದ ಕೇಸು
Team Udayavani, Dec 10, 2020, 6:53 PM IST
ವಾಷಿಂಗ್ಟನ್: ಸ್ಪರ್ಧಾತ್ಮಕತೆ ವಿರೋಧಿ ನಡೆ ಪ್ರದರ್ಶಿಸಿದ ಆರೋಪಕ್ಕೆ ಸಂಬಂಧಿಸಿ ಫೇಸ್ಬುಕ್ ವಿರುದ್ಧ ಅಮೆರಿಕ ಸರ್ಕಾರ ಹಾಗೂ 48 ಪ್ರಾಂತ್ಯಗಳು ಪ್ರಕರಣ ದಾಖಲಿಸಿವೆ. ಮಾರುಕಟ್ಟೆಯಲ್ಲಿರುವ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಏಕಸ್ವಾಮ್ಯ ಸಾಧಿಸಲು ಯತ್ನಿಸಿದ ಹಾಗೂ ಸಣ್ಣ ಪುಟ್ಟ ಕಂಪನಿಗಳನ್ನು ಹತ್ತಿಕ್ಕಿದ ಆರೋಪವನ್ನು ಫೇಸ್ಬುಕ್ ಮೇಲೆ ಹೊರಿಸಲಾಗಿದೆ.
ಫೆಡರಲ್ ಟ್ರೇಡ್ ಕಮಿಷನ್(ಎಫ್ಟಿಸಿ) ಮತ್ತು 48 ಪ್ರಾಂತ್ಯಗಳ ಅಟಾರ್ನಿ ಜನರಲ್ಗಳು ಕಂಪನಿ ವಿರುದ್ಧ ಕಾನೂನು ಸಮರ ಆರಂಭಿಸುತ್ತಲೇ, ಫೇಸ್ಬುಕ್ ಷೇರುಗಳು ಭಾರೀ ಪತನ ಕಂಡಿವೆ.
2012ರಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ಇನ್ಸ್ಟಾ ಗ್ರಾಂ ಅನ್ನು ಖರೀದಿಸಿ, 2014ರಲ್ಲಿ ವಾಟ್ಸ್ಆ್ಯಪ್ ಅನ್ನೂ ಫೇಸ್ಬುಕ್ ಸ್ವಾಧೀನಪಡಿಸಿಕೊಂಡಿತು. ಜತೆಗೆ ಸಾಫ್ಟ್ವೇರ್ ಡೆವಲಪರ್ಗಳಿಗೆ ಸ್ಪರ್ಧಾತ್ಮಕತೆ ವಿರೋಧಿ ಷರತ್ತುಗಳನ್ನೂ ವಿಧಿಸತೊಡಗಿತು. ಫೇಸ್ಬುಕ್ನ ಈ ಎಲ್ಲ ನಡೆಗಳೂ ಏಕಸ್ವಾಮ್ಯವನ್ನು ಸಾಧಿಸಲು ನಡೆಸಿದ ವ್ಯವಸ್ಥಿಕ ಕಾರ್ಯತಂತ್ರ ಎಂದು ಅರ್ಜಿಗಳಲ್ಲಿ ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ