ಟಿ. ನಟರಾಜನ್ ಮಹತ್ವ ಈಗ ತಿಳಿಯುತ್ತಿದೆ: ಸೆಹವಾಗ್
Team Udayavani, Dec 3, 2020, 11:46 PM IST
ಹೊಸದಿಲ್ಲಿ: ಟೀಮ್ ಇಂಡಿಯಾದ “ನ್ಯೂ ಬೌಲಿಂಗ್ ಸೆನ್ಸೇಶನ್’ ಟಿ. ನಟರಾಜನ್ ಅವರ ಮಹತ್ವ ಈಗ ತಿಳಿಯುತ್ತಿದೆ ಎಂಬುದಾಗಿ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್ ಹೇಳಿದ್ದಾರೆ.
“2017ರ ಐಪಿಎಲ್ ಹರಾಜಿನ ವೇಳೆ ನಾನು ತಮಿಳುನಾಡಿನ ಈ ವೇಗಿಯನ್ನು 3 ಕೋಟಿ ರೂ. ಕೊಟ್ಟು ಪಂಜಾಬ್ ತಂಡಕ್ಕೆ ಸೇರಿಸಿಕೊಂಡಾಗ ಎಲ್ಲರೂ ಆಕ್ಷೇಪವೆತ್ತಿದ್ದರು. ತಮಿಳುನಾಡು ಪರ ಇನ್ನೂ ದೇಶಿ ಕ್ರಿಕೆಟ್ ಆಡದ ಒಬ್ಬ ಬೌಲರ್‌ನನ್ನು ಇಷ್ಟೊಂದು ದುಬಾರಿ ಮೊತ್ತಕ್ಕೆ ಖರೀದಿಸುವ ಅಗತ್ಯ ಏನಿತ್ತು ಎಂದು ಎಲ್ಲರೂ ನನ್ನನ್ನು ಪ್ರಶ್ನಿಸಿದ್ದರು. ನಟರಾಜನ್ ಈಗ ಐಪಿಎಲ್ ಯಶಸ್ಸಿನ ಮೂಲಕವೇ ಭಾರತ ತಂಡ ಪ್ರವೇಶಿಸಿದ್ದನ್ನು ಮರೆಯಬಾರದು’ ಎಂದು ಸೆಹವಾಗ್ ಟಿವಿ ಶೋ ಒಂದರಲ್ಲಿ ಹೇಳಿದರು.
“ನಟರಾಜನ್ ಅವರ ಬೌಲಿಂಗ್ ವೀಡಿಯೋಗಳನ್ನು ಗಮನಿಸಿದ್ದೆ. ಜತೆಗೆ ತಮಿಳುನಾಡಿನ ಕೆಲವು ಆಟಗಾರರೂ ಅವರ ಖರೀದಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನಟರಾಜನ್ ಈಗ ಯಾರ್ಕರ್ ಮಾಸ್ಟರ್ ಆಗಿದ್ದಾರೆ’ ಎಂದು ಸೆಹವಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444