ಅಫ್ಘಾನ್ ವಿರುದ್ಧದ ಪಂದ್ಯ: ಕಪ್ತಾನ ಕೊಹ್ಲಿಗೆ 25 % ದಂಡ
Team Udayavani, Jun 23, 2019, 3:02 PM IST
ಲಂಡನ್: ಅಫ್ಘಾನಿಸ್ಥಾನ ವಿರುದ್ಧದ ವಿಶ್ವಕಪ್ ಪಂದ್ಯಾವಳಿಯಲ್ಲಿ ಶಿಸ್ತು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಸಂಭಾವನೆಯ 25 ಶೇಕಡಾ ದಂಡ ವಿಧಿಸಲಾಗಿದೆ.
ಕೊಹ್ಲಿ ಪಂದ್ಯದ 29 ನೇ ಓವರ್ನಲ್ಲಿ ಪಂದ್ಯದ ಅಂಪೈರ್ ಅಲೀಂ ದಾರ್ ಅವರಿಗೆ ಆಕ್ರಮಣ ಕಾರಿ ರೀತಿಯಲ್ಲಿ ಎಲ್ಬಿಡಬ್ಲ್ಯೂಗಾಗಿ ಮನವಿ ಮಾಡಿದ್ದರು.ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಕಲಂ 2.1 ರ ಅಡಿ ಐಸಿಸಿ ದಂಡ ವಿಧಿಸಿದೆ. ಇದು ಹಂತ ಒಂದರ ನೀತಿ ಸಂಹಿತಿ ಉಲ್ಲಂಘನೆ ಎಂದು ಐಸಿಸಿ ಹೇಳಿದೆ.
2016 ರ ಬಳಿಕ ಪರಿಷ್ಕೃತ ಕಾನೂನುಗಳನೀತಿ ಸಂಹಿತೆ ಬಂದ ಬಳಿಕ 2 ನೇ ಬಾರಿ ಕೊಹ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.
24 ತಿಂಗಳ ಒಳಗೆ 4 ಕ್ಕಿಂತ ಹೆಚ್ಚು ಬಾರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಡಿಮೆರಿಟ್ ಅಂಕಗಳನ್ನು ಪಡೆದ ಆಟಗಾರ ನಿಷೇಧದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.