- Friday 06 Dec 2019
ಸ್ಥಳೀಯಾಡಳಿತ ಆಯ್ಕೆಗೆ ಇಂದು ಮತ ಚಲಾವಣೆ
ಮಂಗಳೂರು ಸಹಿತ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
Team Udayavani, Nov 12, 2019, 6:30 AM IST
ಬೆಂಗಳೂರು: ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆಗಳ ಸಹಿತ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನ.12ರ ಮಂಗಳವಾರ ಮತದಾನ ನಡೆಯಲಿದೆ. ರಾಜ್ಯ ಚುನಾವಣ ಆಯೋಗ ಮತದಾನಕ್ಕೆ ಸರ್ವಸಿದ್ಧತೆಗಳನ್ನು ಮಾಡಿಕೊಂಡಿದೆ.
ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯತ್‌ಗಳ 418 ವಾರ್ಡ್‌ಗಳ ಪೈಕಿ 409 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ 1,388 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಒಟ್ಟು 13.04 ಲಕ್ಷ ಮತದಾರರು ಮತ ಚಲಾ ಯಿಸಲಿದ್ದಾರೆ. 9 ಅಭ್ಯರ್ಥಿಗಳು ಈಗಾಗಲೇ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. 1,587 ಅಭ್ಯರ್ಥಿಗಳು ಕಣ ದಲ್ಲಿದ್ದಾರೆ. ನ.14ರಂದು ಮತ ಎಣಿಕೆ ನಡೆಯಲಿದೆ.
ವಿವಿಧ ಕಾರಣಗಳಿಂದ ತೆರವಾಗಿರುವ ಹಾಸನ ಜಿಲ್ಲೆ ಹೊಳೆನರಸೀಪುರ ಪುರಸಭೆಯ ವಾರ್ಡ್ ಸಂಖ್ಯೆ 4, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪುರಸಭೆಯ ವಾರ್ಡ್ ಸಂಖ್ಯೆ 19, ವಿಜಯಪುರ ಜಿಲ್ಲೆ ಚಡಚಣ ಪ.ಪಂ.ನ ವಾರ್ಡ್ ಸಂಖ್ಯೆ 5, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆಯ ವಾರ್ಡ್ ಸಂಖ್ಯೆ 17, ಕಲ ಬುರಗಿ ಜಿಲ್ಲೆ ಚಿತ್ತಾಪುರ ಪುರಸಭೆಯ ವಾರ್ಡ್ ಸಂಖ್ಯೆ 10ರ ಉಪ ಚುನಾವಣೆಗೂ ಮತದಾನ ನಡೆಯಲಿದೆ.
ಉಡುಪಿಯ ಬ್ರಹ್ಮಾವರ ತಾಲೂಕಿನ ಬಾಕೂìರು, ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಜಿ.ಪಂ., ಯಳಂದೂರು ತಾಲೂಕಿನ ಯರಿಯೂರು ತಾ.ಪಂ., ಗದಗ ಜಿಲ್ಲೆ ಬಿಂಕದಕಟ್ಟಿ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಮಲಾಪುರ ತಾ.ಪಂ. ಕ್ಷೇತ್ರ ಹಾಗೂ ವಿವಿಧ 213 ಗ್ರಾ.ಪಂ. ಸದಸ್ಯ ಸ್ಥಾನಗಳಿಗೂ ಮಂಗಳವಾರವೇ ಮತದಾನ ನಡೆಯಲಿದೆ.
“ಉದಯವಾಣಿ’ ಮನವಿ
ಸ್ಥಳೀಯಾಡಳಿತಗಳು ನಮಗೆ ಅತ್ಯಂತ ನಿಕಟವಾದ ಸರಕಾರಗಳು. ಅವುಗಳನ್ನು ಸಶಕ್ತವಾಗಿ ರೂಪಿಸುವ ಮತದಾನ ಪ್ರಕ್ರಿಯೆಯಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಉಳಿವಿಗಾಗಿ ಕೈಜೋಡಿಸಿ. ನಿಮ್ಮ ಮತ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಕಾರಣವಾಗಿ, ಅಭಿವೃದ್ಧಿಗೆ ದಾರಿದೀಪವಾಗಬಲ್ಲದು.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು:ಮತದಾನೋತ್ತರ ಸಮೀಕ್ಷೆಗಳಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದ್ದು, ನಮಗೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು...
-
ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯದ ರಾಜಕೀಯದ ಅನಿಶ್ಚಿತತೆ ದೂರವಾಗಲಿದೆ. ಬಿಜೆಪಿ ಸರ್ಕಾರ ಭದ್ರವಾಗಲಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ...
-
ಬೆಂಗಳೂರು: ಬಿಜೆಪಿ ಸರಕಾರ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಸಾಧನಾ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಸರಕಾರಿ...
-
ರಾಯಚೂರು: ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಈರುಳ್ಳಿ ದಾಖಲೆ ನಿರ್ಮಿಸಿದೆ. ಉತ್ಪನ್ನಕ್ಕೆ ವಿಪರೀತ ಬೇಡಿಕೆ ಇದ್ದರೂ ಪೂರೈಸಲು ಈರುಳ್ಳಿಯೇ...
-
ಶಿವಮೊಗ್ಗ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ, ಹಂದಿಗೋಡು, ನಿಫಾ...ಹೀಗೆ ಅನೇಕ ಕಾಯಿಲೆಗಳು ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿವೆ. ನಿಗದಿತ ಔಷಧವಿಲ್ಲದ...
ಹೊಸ ಸೇರ್ಪಡೆ
-
ಮುಂಬಯಿ, ಡಿ. 4: ಹೊರನಾಡ ಕನ್ನಡ ಸಂಘಟನೆಗಳಲ್ಲಿ ಹಿರಿಯರ ದಂಡೇ ಹೆಚ್ಚಾಗಿರುವಾಗ ಯುವಕ-ಯುವತಿಯರೇ ತುಂಬಿದ ಪಲವಾ ಕನ್ನಡಿಗರ ಸಂಘ ಯುವ ಪಡೆಯ ಕನ್ನಡಾಭಿಮಾನವನ್ನು...
-
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 87 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದುರಸ್ತಿಗಾಗಿ ಇದೇ ಪ್ರಥಮ ಬಾರಿಗೆ ಸರ್ಕಾರ 15 ಕೋಟಿ ರೂ....
-
ತೆಲಂಗಾಣ/ಹೈದರಾಬಾದ್: ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ವಿಶ್ವನಾಥ ಸಜ್ಜನರ್ ನೇತೃತ್ವದ...
-
ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್...
-
ಚಿತ್ರದುರ್ಗ: ಹೆಣ್ಣುಮಗು ಬೇಡ ಎನ್ನುವ ಭಾವನೆ ಇಂದು ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವಂತೆ ಮಾಡಿದೆ. ಇದರಿಂದ ಇಂದು ವಧುವಿಗಾಗಿ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ...