ಗುಂಡುಗಳ ಭೋರ್ಗರೆತದ ನಡುವೆ ನಡೆಯಿತು ಮದುವೆ
Team Udayavani, Feb 26, 2022, 8:00 AM IST
ಕೀವ್ ನಗರದ 21 ವರ್ಷದ ಯುವತಿ ಯರಿನಾ ಅರಿಯೆವ ಮತ್ತು 24 ವರ್ಷದ ಸ್ವಾಟೊಸ್ಲಾವ್ ಫರ್ಸಿನ್ ಇವರಿಬ್ಬರು ವಸ್ತುಸ್ಥಿತಿಯಲ್ಲಿ ಮೇ ತಿಂಗಳಲ್ಲಿ ಮದುವೆಯಾಗಬೇಕಿತ್ತು.
ದಿಢೀರನೆ ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸುವ ಸುಳಿವು ಸಿಕ್ಕಾಗ, ಇಬ್ಬರೂ ಮದುವೆಯನ್ನು ಬೇಗ ಮುಗಿಸಿಕೊಳ್ಳಲು ತೀರ್ಮಾನಿಸಿದ್ದರು. ಅಷ್ಟರಲ್ಲಿ ಯುದ್ಧವೇ ಆರಂಭವಾಯಿತು. ಈ ಹೊತ್ತಿಗಾಗಲೇ ಉಕ್ರೇನ್ ರಾಜಧಾನಿ ಕೀವ್ ಅನ್ನು ಬಹುತೇಕರು ತೊರೆದಾಗಿತ್ತು. ತಪ್ಪಿಸಿಕೊಂಡು ಹೋಗಲು ಆಗದವರ ಪೈಕಿ ಈ ಯುವ ಜೋಡಿಯು ಒಂದು.
ಪರಿಸ್ಥಿತಿ ಕೈಮೀರಿದ್ದು ಗೊತ್ತಾಗುತ್ತಲೇ ಇಬ್ಬರೂ ಕೀವ್ನ ಸೇಂಟ್ ಮೈಕೆಲ್ ಚರ್ಚ್ನಲ್ಲಿ ವಿವಾಹವಾಗಿದ್ದಾರೆ. ಆಗ ವಾಹನಗಳ ಸೈರೆನ್ ಸದ್ದು, ಗುಂಡುಗಳ ಭೋರ್ಗರೆತ, ಎಲ್ಲೆಲ್ಲೂ ಆತಂಕವೇ ತುಂಬಿಕೊಂಡಿತ್ತು. ಆರಂಭದಲ್ಲಿ ಈ ಇಬ್ಬರೂ ಕೀವ್ನ ರೆಸ್ಟೋರೆಂಟ್ ಒಂದರ ಟೆರೇಸ್ನಲ್ಲಿ ನಿಂತುಕೊಂಡು, ರಷ್ಯಾದಿಂದ ಹರಿದುಬರುವ ಡ್ನೀಪರ್ ನದಿಗೆ ಮುಖ ಮಾಡಿಕೊಂಡು ವಿವಾಹವಾಗುವ ಲೆಕ್ಕಾಚಾರ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯದ್ದೇ ಇತ್ತು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!