ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್ ಸಡಿಲವಾಗಿ ಧರಿಸಿದ್ದರೂ ದಂಡ!
Team Udayavani, May 22, 2022, 7:45 AM IST
ಹೊಸದಿಲ್ಲಿ: ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಬೈಕ್ ಅಥವಾ ಸ್ಕೂಟರ್ ಏರಿ ಸಾಗುವಾಗ ಹೆಲ್ಮೆಟ್ ಧರಿಸದಿದ್ದರೆ ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ಹಾಕುತ್ತಾರೆಂದು ಭಾವಿಸಿದ್ದರೆ ಅದು ತಪ್ಪು. ಹೆಲ್ಮೆಟ್ ಅನ್ನು ಸಡಿಲವಾಗಿ ಧರಿಸಿದ್ದರೂ ಅದಕ್ಕೆ ತತ್ಕ್ಷಣವೇ ಪಾವತಿಸಬೇಕಾದ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಹೆಲ್ಮೆಟ್ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಹಾಗಾಗಿ ಜನರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
2 ಸಾವಿರ ರೂ.ದಂಡ ಹೇಗೆ?: ಹೆಲ್ಮೆಟ್ ಹಾಕಿದ್ದರೂ ಹೆಲ್ಮೆಟ್ನ ಬಕಲ್ ಹಾಕಿಕೊಳ್ಳದಿದ್ದರೆ 1 ಸಾವಿರ ರೂ. ತೆರಬೇಕಾಗುತ್ತದೆ. ಜತೆಗೆ ಧರಿಸಿರುವ ಹೆಲ್ಮೆಟ್ ಬಿಐಎಸ್ (ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್) ಪ್ರಮಾಣೀಕೃತವಾಗಿರದಿದ್ದರೆ ಅದಕ್ಕೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಾಗಾಗಿ ಒಟ್ಟಾರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಹೆಲ್ಮೆಟ್ ಸರಿಯಾಗಿ ಧರಿಸಿಯೂ ಸಿಗ್ನಲ್ ಜಂಪ್ ಮಾಡಿದರೆ ಅದಕ್ಕೆ 2 ಸಾವಿರ ರೂ. ದಂಡ ದಂಡ ಹಾಗೂ ಮೂರು ವರ್ಷಗಳವರೆಗೆ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ
ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್
ಗೋವಾ ರಾಜ್ಯಾದ್ಯಂತ ಭಾರಿ ಮಳೆ ; ಜನಜೀವನ ಅಸ್ತವ್ಯಸ್ಥ
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪರಾಷ್ಟ್ರಪತಿಯಾಗಿ ಆಯ್ಕೆ?
ಕಾಳಿ ಮಾತೆ ವಿರುದ್ಧ ಹೇಳಿಕೆ:ಟಿಎಂಸಿಯಿಂದ ಮೊಯಿತ್ರಾ ಉಚ್ಛಾಟಿಸಿ: ಮಮತಾಗೆ ಬಿಜೆಪಿ ಗಡುವು