ಕರಾವಳಿಯಲ್ಲಿ ಇಂದಿನಿಂದ ವಾರಾಂತ್ಯ ಕರ್ಫ್ಯೂ : ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಅವಕಾಶ

Team Udayavani, Jan 7, 2022, 8:40 AM IST

ಕರಾವಳಿಯಲ್ಲಿ ಇಂದಿನಿಂದ ವಾರಾಂತ್ಯ ಕರ್ಫ್ಯೂ : ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಅವಕಾಶ

ಮಂಗಳೂರು : ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿಯಿಂದ 10ರಿಂದ ಆರಂಭಗೊಳ್ಳಲಿದ್ದು ಸೋಮವಾರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರುತ್ತದೆ.

ದ. ಕ. ಜಿಲ್ಲೆಯಲ್ಲಿ ಈ ವಾರಾಂತ್ಯ ಕರ್ಫ್ಯೂನಲ್ಲಿ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಮದುವೆ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಮದುವೆ ಹೊರತುಪಡಿಸಿ 100 ಜನರ‌ ಮಿತಿಗೊಳ್ಳಪಟ್ಟು ನಡೆಸಬಹುದಾಗಿದೆ. ಮದುವೆಗೆ ಒಳಾಂಗಣದಲ್ಲಿ 100 ಹಾಗೂ ಹೋರಾಂಗಣದಲ್ಲಿ 200 ಮಂದಿಗೆ ಅವಕಾಶ ನೀಡಲಾಗಿದೆ. ಹರಕೆ ಯಕ್ಷಗಾನವನ್ನು 100 ಜನರಿಗೆ ಸೀಮಿತಗೊಳಿಸಿ ಕೌಟುಂಬಿಕ ಕಾರ್ಯಕ್ರಮವಾಗಿ ನಡೆಸಬಹುದು. ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.

ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವು ವ್ಯವಹಾರ ಅಂಗಡಿಗಳು , ಸಾರ್ವಜನಿಕ ವಿತರಣ ವ್ಯವಸ್ಥೆಯ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗ‌ಳಿಗೆ ಮಾತ್ರ ಅವಕಾಶವಿದೆ. ಎಲ್ಲ ಸಾರ್ವಜನಿಕ ಉದ್ಯಾನವನಗಳನ್ನು ಮುಚ್ಚಲಾಗುತ್ತಿದೆ.

ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಇತ್ಯಾದಿ, ತುರ್ತು ಪರಿಸ್ಥಿತಿಯಲ್ಲಿ ವ್ಯವಹರಿಸಲು ಅವಕಾಶವಿರುತ್ತದೆ. ಅಗತ್ಯ ಸೇವೆಗಳು ಮತ್ತು ಕೋವಿಡ್‌-19 ನಿಯಂತ್ರಣ ಮತ್ತು ನಿರ್ವಹಣ ಕರ್ತವ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ. ಐಟಿ ಕೈಗಾರಿಕೆಗಳು ಸೇರಿದಂತೆ ಎಲ್ಲ ಕೈಗಾರಿಕೆಗಳಿಗೆ ಕರ್ಫ್ಯೂ ನಿರ್ಬಂಧದಿಂದ ವಿನಾಯಿತಿ ನೀಡಿದೆ ಮತ್ತು ಅಂತಹ ಸಂಸ್ಥೆಗಳ ನೌಕರರ ಸಂಚಾರಕ್ಕೆ, ಅವರ ಸಂಬಂಧಪಟ್ಟ ಸಂಸ್ಥೆ/ಕಂಪೆನಿಯು ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡು ಪ್ರಯಾಣಿಸಲು ಅನುಮತಿಸಲಾಗಿದೆ. ರೋಗಿಗಳು ಮತ್ತು ಅವರ ಪರಿಚಾರಕರು/ತುರ್ತು ಅಗತ್ಯತೆಯ ಆವಶ್ಯಕತೆವಿರುವ ವ್ಯಕ್ತಿಗಳು, ಲಸಿಕೆಯನ್ನು ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಬಸ್‌, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸಿಟಿ ಬಸ್‌, ಸರ್ವಿಸ್‌ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್‌ ಟರ್ಮಿನಲ್‌, ಬಸ್‌ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಂತೆ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಶಾಲೆ ಲಾಕ್‌ ಸದ್ಯಕ್ಕಿಲ್ಲ: ಡಿಸಿ
ಮಂಗಳೂರು, ದ.ಕ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದ ಮಕ್ಕಳಿಗೆ ಸಮಸ್ಯೆ ಆಗಿಲ್ಲ; ಹಾಗಾಗಿ ಶಾಲೆಯನ್ನು ಲಾಕ್‌ಡೌನ್‌ ಮಾಡುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಮಕ್ಕಳಲ್ಲಿ ಕೊರೊನಾ ಕ್ಲಸ್ಟರ್‌ ಕಂಡು ಬಂದ‌ರೆ ಹಾಗೂ ಅವರ ಪಾಸಿಟಿವಿಟಿ ರೇಟ್‌ ಹೆಚ್ಚಾಗಿದ್ದರೆ ಮಾತ್ರವೇ ಲಾಕ್‌ ಮಾಡಬಹುದು; ಈಗ ಅಂತಹ ಪರಿಸ್ಥಿತಿ ಇಲ್ಲ ಎಂದವರು ವಿವರಿಸಿದರು.
ಮೊಲು°ಪಿರವಿರ್‌ (MOLNUPIRAVIR) ಎಂಬ ಆ್ಯಂಟಿ ವೈರಲ್‌ ಡ್ರಗ್‌ ಬಂದಿದ್ದು, ಅದು ಕೊರೊನಾಕ್ಕೆ ಪರಿಣಾಮಕಾರಿ ಎನ್ನಲಾಗುತ್ತಿದೆ. ಹಾಗಾಗಿ ಅದನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

vitlaವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

ಕೋಟ : ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟ : ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

ದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

5

ತಿಂಗಳೊಳಗೆ ಹೊಸ ʼಸೆಂಟ್ರಲ್‌ ಮಾರುಕಟ್ಟೆ’ ಕಾಮಗಾರಿ ಆರಂಭ?

3

ನಂದಿನಿ ನದಿಗೆ ಸೇತುವೆಯಾದರೆ ಅಭಿವೃದ್ಧಿಗೆ ವೇಗ

2

ಮೀಸಲಾತಿ ಅಂತಿಮವಾಗದೆ ಚುನಾವಣೆಗೆ ಗ್ರಹಣ

MUST WATCH

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

udayavani youtube

ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

udayavani youtube

ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಹೊಸ ಸೇರ್ಪಡೆ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.