ವಾರ ಭವಿಷ್ಯ: ಈ ಎರಡು ರಾಶಿಯವರಿಗಿದೆ ಈ ವಾರ ಬಂಪರ್ ಅದೃಷ್ಟ

Team Udayavani, Jan 19, 2020, 8:36 AM IST

(19-1-2020 ರಿಂದ 25-1-2020ರ ವರೆಗೆ)

ಮೇಷ: ವೃತ್ತಿರಂಗದಲ್ಲಿ ಯೋಜನಾಬದ್ಧ ಕಾರ್ಯತಂತ್ರಗಳ ರೂಪಣೆ ಸಫ‌ಲವಾಗಲಿದೆ. ಇಚ್ಛಿಸಿದ ನಿರ್ಧಾರಗಳ ಅನುಷ್ಠಾನಕ್ಕೆ ಯತ್ನಿಸಿದರೆ ಸಿದ್ಧಿಯಾಗುತ್ತದೆ. ಆಪ್ತವಲಯದಲ್ಲಿ ಗೌರವ, ಮಾನ್ಯತೆಗಳು ಲಭಿಸಲಿವೆ. ಮಧ್ಯವರ್ತಿಯಾಗಬೇಕಾದ ಸಂದಿಗ್ಧತೆ, ಮನಸ್ಥಿತಿಯಲ್ಲಿ ಉದ್ವೇಗ, ಕಲಹ ಪ್ರೇರಿತವಾಗಲಿದೆ. ಸದಾ ಕಾರ್ಯರಂಗದ ಕುರಿತು ಚಿಂತನೆ ಅವಶ್ಯ. ಉಪಕರಣಗಳ ಖರೀದಿಯ ಸಾಧ್ಯತೆಯು ಇದ್ದು, ನಿಶ್ಚಿತ ಸದುದ್ದೇಶಕ್ಕಾಗಿ ಧನವ್ಯಯ ವಾದೀತು. ಶುಭಶ್ರವಣ ಯೋಗದಿಂದ ಹರುಷ ಮೂಡಲಿದೆ.
ಶುಭವಾರ: ಮಂಗಳ, ಗುರು, ಶುಕ್ರವಾರ

ವೃಷಭ: ಅನಗತ್ಯ ಖರ್ಚುವೆಚ್ಚಗಳು, ಹಣಕಾಸಿನ ಅಡಚಣೆ ಈ ವಾರಾರಂಭದಲ್ಲಿ ಕಂಡುಬರಲಿದೆ. ಅನಿಶ್ಚಿತತೆ, ಸಿಟ್ಟು ಸಿಡುಕಿನ ಮನೋ ಭಾವನೆ ನಿಮ್ಮನ್ನು ಕಾಡಲಿದೆ. ಕಠಿಣ ಶ್ರಮದಿಂದ ಹಣಕಾಸಿನ ವಸೂಲಿ, ಸಲಹೆ, ಸೂಚನೆಗಳಿಗೆ ಆಪ್ತ ವಲಯದಲ್ಲಿ ವಿಶೇಷ ಮನ್ನಣೆ ದೊರಕಲಿದೆ. ಪಾದ, ನರ ದೌರ್ಬಲ್ಯ ನಿಮ್ಮನ್ನು ಕಾಡಲಿದೆ. ಆಶಾದಾಯಕ ಹೊಸ ಬೆಳವಣಿಗೆಯ ಸೂಚನೆ ನಿಮಗೆ ಕಂಡುಬರಲಿದೆ. ಪ್ರಯತ್ನ, ಸಾಧನೆಗೆ ಯಶಸ್ಸು ತೋರಿಬರಲಿದೆ. ಶ್ರೀದೇವರ ಆರಾಧನೆ, ಆರೋಗ್ಯದಲ್ಲಿ ನಿಗಾ ವಹಿಸಿರಿ.
ಶುಭವಾರ: ಗುರು, ಶುಕ್ರ, ಶನಿವಾರ

ಮಿಥುನ: ಇಷ್ಟ ವಿರೋಧಿ ಕಾರ್ಯನಿರ್ವಹಣೆಯ ಅನಿವಾರ್ಯತೆ ನಿಮಗೆ ಬರಬಹುದು. ಖಚಿತ ನಿರ್ಧಾರಕ್ಕೆ ಬರಲಾಗದಂತಹ ಮನಸ್ಥಿತಿ ನಿಮ್ಮನ್ನು ಕಾಡಲಿದೆ. ತುಸು ಕಷ್ಟಕರವೆನಿಸುವ ಮಧ್ಯಸ್ಥಿಕೆ ವಹಿಸುವ ಕಾರ್ಯದಿಂದ ಮನಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲ. ಕ್ರಯ-ವಿಕ್ರಯ ಕಾರ್ಯದಲ್ಲಿ ಪ್ರಗತಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗದ ಶುಭ ಸಮಾಚಾರ. ಗೃಹಿಣಿಗೆ ಇಷ್ಟಕಾರ್ಯ, ಸಂತೋಷ ಸಿಗಲಿದೆ. ಬಾಡಿಗೆದಾರರಿಗೆ ಗೃಹ ಬದಲಾಯಿಸುವಂತಹ ಪರಿಸ್ಥಿತಿಯು ಎದುರಾಗಲಿದೆ.
ಶುಭವಾರ: ಸೋಮ, ಬುಧ, ಗುರುವಾರ

ಕರ್ಕಾ: ದೈಹಿಕ ಶ್ರಮದ ಕಾರ್ಯದಿಂದ ಸಾಧನೆಯಾಗಲಿದೆ. ಗೃಹ ವಿವಾದಕ್ಕೆ ಯಶಸ್ವೀ ಪರಿಹಾರದ ರೂಪಣೆಯಿಂದ ಮುಕ್ತಿ ಸಿಗಲಿದೆ. ಮರೆವು, ಅಜಾಗರೂಕತೆಯಿಂದ ನಷ್ಟ ಸಂಭವಿಸಲಿದೆ. ಮಕ್ಕಳ ಹಿನ್ನಡೆಯಿಂದ ಮನಸ್ಸಲ್ಲಿ ಅಶಾಂತಿ ತುಂಬಲಿದೆ. ತಪ್ಪು ಧೋರಣೆಯಿಂದ ಲಾಭಕರವಾಗಿ ಪರಿವರ್ತನೆಗೊಳ್ಳುವ ಸೂಚನೆಯಿದೆ. ಧನಾರ್ಜನೆಯಲ್ಲಿ ಉತ್ತಮ ಪ್ರಗತಿ ಇದೆ. ಕುಟುಂಬ ಕಾರ್ಯದಲ್ಲಿ ಸಂತೋಷ ಸಿಗಲಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳು ನಿರ್ವಿಘ್ನತೆಯಿಂದ ಆದೀತು.
ಶುಭವಾರ: ಬುಧ, ಗುರು, ಶನಿವಾರ

ಸಿಂಹ: ಯೋಜಿತ ಕಾರ್ಯಗಳ ಅನುಷ್ಠಾನಕ್ಕೆ ಪೂರಕವಾದ ವಾತಾವರಣ ನಿಮಗೆ ಎದುರಾಗಲಿದೆ. ಆತ್ಮೀಯ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸೂಚನೆ. ಸಾಲ ಮರುಪಾತಿಯ ಬಗ್ಗೆ ಒತ್ತಡ ಹೆಚ್ಚಲಿದೆ. ಸ್ನೇಹಿತರೊಂದಿಗೆ ಕಲುಷಿತಗೊಂಡ ಸಂಬಂಧಗಳಲ್ಲಿ ಸುಧಾರಣೆಯಾಗಲಿದೆ. ಗುರು ಹಾಗೂ ಧಾರ್ಮಿಕ ವರಿಷ್ಠರ ಭೇಟಿಯ ಸುವರ್ಣ ಅವಕಾಶ ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ಮಾಡಿರಿ.
ಶುಭವಾರ: ಬುಧ, ಗುರು, ಶುಕ್ರವಾರ

ಕನ್ಯಾ: ಅನಗತ್ಯ ತಪ್ಪು ನಿರ್ಧಾರಗಳಿಂದ ವಿಚಲಿತರಾಗುವ ಸನ್ನಿವೇಶಗಳು ಎದುರಾಗಲಿವೆ. ಅನ್ಯರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸಿರಿ. ಉದ್ಯೋಗದಲ್ಲಿ ಪದೋನ್ನತಿಗಾಗಿ ಒಳ್ಳೆಯ ಅವಕಾಶಗಳು ಬರಲಿವೆ. ಯಂತ್ರೋಪಕರಣಗಳಿಗೆ ಖರ್ಚು ಬರಲಿದೆ. ಕೌಟುಂಬಿಕ ವಾದ-ವಿವಾದಗಳು ಎದುರಾಗುವ ಸಂಭವವಿದೆ. ವಾಹನ ಖರೀದಿಯ ಅವಕಾಶಗಳು ನಿಮಗೆ ಲಭಿಸಲಿದೆ. ಸೇವಕರಿಂದ ಸಹಕಾರ ಲಭಿಸೀತು. ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ.
ಶುಭವಾರ: ಗುರು, ಶುಕ್ರ, ಭಾನುವಾರ

ತುಲಾ: ಬಹುತೇಕ ಕಾರ್ಯಗಳು ಈ ವಾರ ನಿಮ್ಮೆಣಿಕೆಯಂತೆ ಸಾಗಲಿದೆ. ಪಾಲುದಾರಿಕೆ ವ್ಯವಹಾರದ ಆರಂಭದ ಅವಕಾಶಗಳು ನಿಮಗೆ ಲಭಿಸಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತ ಪ್ರವೃತ್ತಿ ನಿಮಗೆ ಅತ್ಯವಶ್ಯಕವಾಗಲಿದೆ. ಮಾತಿನಲ್ಲಿ ತುಂಬಾ ನಿಗಾ ವಹಿಸಿರಿ. ಕಾರ್ಯಕ್ಕಾಗಿ ಸಂದಭೋìಚಿತವಾಗಿ ವರ್ತಿಸಿರಿ. ವೃತ್ತಿರಂಗದಲ್ಲಿ ಮುನ್ನಡೆ ಸಾಧಿಸಲು ಇದು ಒಳ್ಳೆಯ ಸುಸಮಯ. ಕೌಟುಂಬಿಕವಾಗಿ ಅನಾರೋಗ್ಯವು ಕಾಡಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಲಭಿಸಲಿದೆ.
ಶುಭವಾರ: ಗುರು, ಶನಿ, ಭಾನುವಾರ

ವೃಶ್ಚಿಕ: ಒತ್ತಡ, ಪ್ರಭಾವಗಳ ವರ್ತುಲದಲ್ಲಿ ಸ್ವಹಿತ ಕಾಪಾಡಿ ಕೊಳ್ಳಲಾಗದಂತಹ ದುಃಖಕರ ಸನ್ನಿವೇಶವೊಂದು ಎದುರಾಗುವ ಸಂಭವವಿದೆ. ದ್ವಂದ್ವ ನಿಲುವು, ಪ್ರಬಲ ವಿರೋಧ, ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಯೋಜಿತ ಕಾರ್ಯದಲ್ಲಿ ಮುನ್ನಡೆ ಇದೆ. ಸೂಕ್ತ ಮುಂಜಾಗರೂಕತೆಯಿಂದ ಸಂಭವನೀಯ ಆಪತ್ತಿನಿಂದ ಪಾರಾಗುವ ಅಪೂರ್ವ ಸನ್ನಿವೇಶಗಳು. ಯೋಗ, ಧ್ಯಾನದಿಂದ ಮನಸ್ಸನ್ನು ಆದಷ್ಟು ಹಿಡಿತದಲ್ಲಿಟ್ಟು ಕೊಳ್ಳುವುದು ಅಗತ್ಯವಾಗಿದೆ. ಆರೋಗ್ಯದಲ್ಲೂ ಜಾಗ್ರತೆ ವಹಿಸುವುದು.
ಶುಭವಾರ: ಬುಧ, ಗುರು, ಶನಿವಾರ

ಧನು: ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭ್ಯವಾಗಲಿದೆ. ವಿಪರೀತ ಕೆಲಸದ ಒತ್ತಡ, ನಿಂದನೆ, ಟೀಕೆಗಳಿಂದ ಭಾವಾವೇಶಕ್ಕೆ ಒಳಗಾಗುವ ಸನ್ನಿವೇಶ. ಹಣಕಾಸಿನ ವ್ಯವಹಾರವೊಂದು ಅನಿರೀಕ್ಷಿತವಾಗಿ ಎದುರಾಗಲಿದೆ. ದೇಹಾಯಾಸದಿಂದ ಬಳಲಿಕೆ ಕಂಡುಬರಲಿದೆ. ಸಾಲ ಮರುಪಾವತಿಯ ಬಗ್ಗೆ ಚಿಂತೆ ಕಾಡಲಿದೆ. ವಾರಾಂತ್ಯದಲ್ಲಿ ಕಾರ್ಯರಂಗದಲ್ಲಿ ಸುಧಾರಣೆ ಕಂಡುಬರಲಿದೆ. ಆರ್ಥಿಕವಾಗಿ ಚೇತರಿಕೆ ಇದೆ. ಹೊಸ ಅವಕಾಶಗಳ ಬಗ್ಗೆ ಶುಭ ಸೂಚನೆ ತೋರಿಬರಲಿದೆ. ಉಪಯೋಗಿಸಿಕೊಳ್ಳಿರಿ.
ಶುಭವಾರ: ಬುಧ, ಶುಕ್ರ, ಭಾನುವಾರ

ಮಕರ: ಹಣಕಾಸಿಗೆ ಸಂಬಂಧಪಟ್ಟ ಕಠಿಣ ಸಮಸ್ಯೆಯೊಂದು ಮುಕ್ತಾಯಗೊಳ್ಳುವ ಸೂಚನೆಯು ಕಂಡುಬರಲಿದೆ. ಅನಿಶ್ಚಿತತೆ,
ಸಿಟ್ಟು, ಸಿಡುಕಿನ ಮನೋಭಾವನೆ ನಿಮಗೆ ಕಾಡಲಿದೆ. ಕಠಿಣ ಶ್ರಮದಿಂದ ಹಣಕಾಸಿನ ವಸೂಲಿ, ಸಲಹೆ-ಸೂಚನೆಗಳಿಗೆ ಆಪ್ತ ವಲಯದಲ್ಲಿ ವಿಶೇಷ ಮನ್ನಣೆ ಸಿಗಲಿದೆ. ಪಾದದ, ನರದೌರ್ಬಲ್ಯ ನಿಮ್ಮನ್ನು ಕಾಡಲಿದೆ.
ಆಶಾದಾಯಕ ಹೊಸ ಬೆಳವಣಿಗೆಯ ಸೂಚನೆ ಕಂಡುಬರಲಿದೆ. ಪ್ರಯತ್ನ, ಸಾಧನೆಗಳ ಯಶಸ್ಸು ತೋರಿಬರಲಿದೆ. ಶ್ರೀದೇವರ ಆರಾಧನೆ ಮಾಡಿರಿ.
ಶುಭವಾರ: ಸೋಮ, ಮಂಗಳ, ಗುರುವಾರ

ಕುಂಭ: ವಾರದ ಆರಂಭದಲ್ಲಿ ನೀವು ತೆಗೆದುಕೊಳ್ಳಲಿರುವ ಮುಖ್ಯ ನಿರ್ಧಾರವು ನಿಮ್ಮ ಭವಿಷ್ಯತ್ತಿನ ಆಶಾಕಿರಣವಾದೀತು. ಹೆಚ್ಚಿನ ಸಮಯವನ್ನು ಕಾರ್ಯಾನುಕೂಲಕ್ಕೆ ಉಪಯೋಗಿಸಿರಿ. ವದಂತಿಗಳಿಗೆ ಅನಾವಶ್ಯಕ ಕಿವಿಗೊಟ್ಟು ಮನಸ್ಸು ಕೆಡಿಸದಿರಿ. ಇಚ್ಛಿತ ಸ್ಥಾನಪ್ರಾಪ್ತಿಗಾಗಿ ಧನವ್ಯಯದ ಸಾಧ್ಯತೆ ಇದೆ. ಒತ್ತಡದ ಕೆಲಸಕಾರ್ಯಗಳಿಂದ ವಿಪರೀತ ದೇಹಾಯಾಸ ತೋರಿಬರಲಿದೆ. ಆದರೂ ಸ್ನೇಹ, ಸಹಕಾರ ನಿಮಗೆ ಮುನ್ನಡೆ ಸಾಧಿಸಲು ಪೂರಕವಾದೀತು. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.
ಶುಭವಾರ: ಬುಧ, ಗುರು, ಶುಕ್ರವಾರ.

ಮೀನ: ಉದ್ಯೋಗ, ವ್ಯವಹಾರಗಳಲ್ಲಿ ತುಂಬಾ ಮುನ್ನಡೆ ಸಾಧಿಸಲಿರುವಿರಿ. ವಿಶೇಷವಾದ ಕಾರ್ಯಪ್ರವೃತ್ತಿಯಿಂದ ಆರ್ಥಿಕ ಕಾರ್ಯವನ್ನು ಮುನ್ನಡೆಸಲು ಯತ್ನಿಸಿದಲ್ಲಿ ಜಯ. ಅಧಿಕಾರದಲ್ಲಿರುವ ಮಿತ್ರರಿಂದ ಉಪಯುಕ್ತ ಕೊಡುಗೆ ಲಭಿಸಲಿದೆ. ಪ್ರಶಂಸನೀಯ ನಿರ್ಧಾರಗಳು, ಪಾಲುದಾರಿಕೆಯಲ್ಲಿ ವಿರಸ, ಮೋಸ ಕಾಣಲಿದ್ದೀರಿ. ದುರಾಲೋಚನೆಗಳು ಮನಸ್ಸನ್ನು ಕೆಡಿಸಲಿವೆ. ಮನಸ್ಸಿನ ಹಿಡಿತವಿರಲಿ. ದುಡುಕಿನ ವರ್ತನೆ, ವಂಚನೆಗೆ ಒಳಗಾಗುವ ಭೀತಿಯಿಂದ ನಿದ್ರಾಭಂಗವಾದೀತು.
ಶುಭವಾರ: ಸೋಮ, ಗುರು, ಶನಿವಾರ

 

ಎನ್‌. ಎಸ್‌. ಭಟ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ