Udayavni Special

ವಾರ ಭವಿಷ್ಯ: ಯಾರಿಗಿದೆ ಈ ವಾರ ಅದೃಷ್ಟ ಬಲ


Team Udayavani, Feb 16, 2020, 8:57 AM IST

h

(16-2-2020 ರಿಂದ 22-2-2020ರ ವರೆಗೆ)
ಮೇಷ: ವೃತ್ತಿರಂಗದಲ್ಲಿ ವಿಚಾರಗಳನ್ನು ಅವಲೋಕಿಸಿಯೇ ಮುಂದಿನ ಹೆಜ್ಜೆಯನ್ನು ಇಡಬೇಕಾದೀತು. ಆರ್ಥಿಕ ವಿಚಾರದಲ್ಲಿ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಬಲ ತಂದೀತು. ಸಾಂಸಾರಿಕವಾಗಿ ನೆಮ್ಮದಿ ತೋರಿ ಬಂದು ಒಳ್ಳೆಯ ವಾತಾವರಣ ನಿಮ್ಮನ್ನು ಶಾಂತಚಿತ್ತರನ್ನಾಗಿಸುತ್ತದೆ. ವಿದ್ಯಾರ್ಥಿಗಳಿಗೆ ಹೊರಗಿನ ವಾತಾವರಣ ವಿದ್ಯಾಭ್ಯಾಸದಲ್ಲಿ ಹಿನ್ನಡೆ ತಂದುಕೊಡಲಿದೆ. ಅವಿವಾಹಿತರಿಗೆ ನಿರೀಕ್ಷಿತ ಸಂಬಂಧಗಳು ಗಟ್ಟಿಯಾಗಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಭದ್ರತೆಯನ್ನು ತಂದೀತು.
ಶುಭವಾರ: ಮಂಗಳ, ಗುರು, ಶುಕ್ರವಾರ

ವೃಷಭ: ಕಾರ್ಯರಂಗದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ಆದರೂ ಸ್ಪಷ್ಟ ನಿರ್ಧಾರದ ಮೂಲಕ ಮುಂದುವರಿದಲ್ಲಿ ಅಡಚಣೆಗಳು ಕಡಿಮೆಯಾಗುತ್ತವೆ. ನಿಮ್ಮ ಕುಟುಂಬ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಯಾಗಿರಿಸಿರಿ. ಸಾಂಸಾರಿಕವಾಗಿ ಹಿರಿಯರ ಸಲಹೆ ಅಗತ್ಯವಿರುತ್ತದೆ. ಮದುವೆಯಾಗ ಬಯಸುವವರು ಹೆಚ್ಚಿನ ಪ್ರಯತ್ನಕ್ಕೆ ಒತ್ತು ನೀಡಿದಲ್ಲಿ ಕಂಕಣ ಬಲದ ಸಾಧ್ಯತೆ ತಂದೀತು.
ಶುಭವಾರ: ಬುಧ, ಶುಕ್ರ, ಶನಿವಾರ

ಮಿಥುನ: ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ. ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಲೆಕ್ಕಾಚಾರ ಸರಿಯಾಗಲಿದೆ. ಒತ್ತಡಗಳೇ ನಿಮ್ಮನ್ನು ಚುರುಕಾಗಿಸಲಿವೆ. ನಿಮ್ಮ ಮನೋಕಾಮನೆಗಳು ಸದ್ಯದಲ್ಲೇ ಒಂದೊಂದಾಗಿ ನೆರವೇರಲಿವೆ. ಕಾರ್ಯ ಒತ್ತಡದಿಂದ ಸಂಗಾತಿಯ ಕಡೆ ಗಮನಹರಿಸಲು ಅವಕಾಶ ಇಲ್ಲವೇನೋ ಎಂಬಂತಾದೀತು. ಹೂಡಿಕೆಗಳು ಲಾಭದಾಯಕವಾಗಿ ಆರ್ಥಿಕ ಉನ್ನತಿಯನ್ನು ನೀಡಲಿವೆ. ವಾರಾಂತ್ಯದಲ್ಲಿ ಆತ್ಮೀಯರ ಆಗಮನ ನಿಮ್ಮ ಕಾರ್ಯಾನುಕೂಲಕ್ಕೆ ಇಂಬು ಕೊಡಲಿದೆ.
ಶುಭವಾರ: ಸೋಮ, ಗುರು, ಶನಿವಾರ

ಕರ್ಕಾ: ವೃತ್ತಿರಂಗದಲ್ಲಿ ಎಷ್ಟೋ ಬಾರಿ ಅನುಭವಕ್ಕೆ ನಿಲುಕದ ಸಂಗತಿಗಳು ಎದುರಾಗಲಿವೆ. ಇದು ನಿಮ್ಮ ಸ್ವಂತ ಅಸ್ತಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪೂರಕವಾದೀತು. ಸಾಂಸಾರಿಕವಾಗಿ ನಿಮ್ಮವರ ಪ್ರೀತಿ, ವಿಶ್ವಾಸ, ಸಹಕಾರಗಳು ಮುನ್ನಡೆಗೆ ಸಾಧಕವಾಗಲಿವೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನ ಧೈರ್ಯ ಕೊಡಲಿದೆ. ಹಾಗೇ ಆರ್ಥಿಕವಾಗಿ ಋಣ ಪರಿಹಾರ ನಿಮ್ಮ ಸ್ವಾಭಿಮಾನವನ್ನು ಉಳಿಸಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿವೆ.
ಶುಭವಾರ: ಗುರು, ಶನಿ, ಭಾನುವಾರ

ಸಿಂಹ: ನಿರೀಕ್ಷಿಸಿದಂತೆ ಆರ್ಥಿಕ ಸ್ಥಿತಿಯು ಉತ್ತಮಗೊಂಡು ಸಂಸಾರ ರಥ ಸರಿದೂಗಿಸಬಹುದಾಗಿದೆ. ವೃತ್ತಿರಂಗದಲ್ಲಿ ಇತರರ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾಗದು. ಕೆಲವೊಂದು ಸಮಸ್ಯೆಗಳನ್ನು ನೀವೇ ನಿಭಾಯಿಸಬೇಕಾದೀತು ಹಾಗೂ ಆತ್ಮವಿಮರ್ಶೆಗೂ ಇದು ಸಕಾಲ. ಕೌಟುಂಬಿಕವಾಗಿ ಹೆಚ್ಚಿನ ಸಹಕಾರವಿಲ್ಲವಾದರೂ ಉತ್ಸಾಹದ ಪ್ರತಿಕ್ರಿಯೆ ಕೂಡ ಸಿಗಲಾರದು. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕುದುರಿ ಮಾಂಗಲ್ಯ ಕಾರ್ಯಕ್ಕೆ ನಾಂದಿ ಹಾಡಲಿವೆ.
ಶುಭವಾರ: ಮಂಗಳ, ಗುರು, ಶನಿವಾರ

ಕನ್ಯಾ: ಸ್ಪಷ್ಟ ನಿರ್ಧಾರಗಳು ವೃತ್ತಿರಂಗದಲ್ಲಿ ಹೆಚ್ಚಿನ ಭದ್ರತೆಯನ್ನು ತಂದುಕೊಡಲಿವೆ. ಮುಖ್ಯವಾಗಿ ವೈಯಕ್ತಿಕ ಜೀವನದತ್ತ ಮನಸ್ಸನ್ನು ತಿರುಗಿಸುವುದು ಒಳಿತು. ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೊಂದಾಣಿಕೆ ತೋರಿಸಿದಲ್ಲಿ ಕಂಕಣಬಲದ ಭಾಗ್ಯ ಲಭಿಸಲಿದೆ. ದುಃಖ-ಸುಖಾನುಪಾತದಲ್ಲಿ ಸುಖಾಂಶ ಅಧಿಕವಾದೀತು. ವಿದ್ಯಾರ್ಥಿಗಳು ಶ್ರದ್ಧೆ ತೋರಿಸಬೇಕಾದೀತು. ಕೆಲವೊಮ್ಮೆ ಒತ್ತಡಗಳೇ ನಿಮ್ಮನ್ನು ಚುರುಕಾಗಿಸಲಿವೆ.
ಶುಭವಾರ: ಸೋಮ, ಗುರು, ಶುಕ್ರವಾರ

ತುಲಾ: ನಿರ್ಧಾರಗಳು ಅಚಲವಾಗಿರದೆ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿವೆ. ಇದಕ್ಕಾಗಿ ಸ್ಪಷ್ಟ ನಿರ್ಧಾರವನ್ನು ಕೈ ಗೊಳ್ಳಲು ಮನಸ್ಸು ಮಾಡಬೇಕಾದೀತು. ಭವಿಷ್ಯ ನಿಮ್ಮನ್ನು ಕಾಯಲಿದೆ. ಸದುಪಯೋಗಿಸಿಕೊಳ್ಳಿ. ಸಾಮಾಜಿಕವಾಗಿ ಪ್ರತಿಷ್ಠಿತರ ಒಡನಾಟ ಕಾರ್ಯಾನುಕೂಲಕ್ಕೆ ಸಾಧಕವಾದೀತು. ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಆಗಾಗ ಸಂಚಾರ ದೇಹಾಯಾಸಕ್ಕೆ ಕಾರಣವಾಗಿ ಪ್ರತಿಕೂಲತೆಯನ್ನು ತೋರಿಸಲಿದೆ. ಕಾಳಜಿ ವಹಿಸಿರಿ.
ಶುಭವಾರ: ಸೋಮ, ಮಂಗಳ, ಬುಧವಾರ

ವೃಶ್ಚಿಕ: ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ನಿಮ್ಮ ಮನಸ್ಸಿನಾಳದ ಸುಪ್ತ ಬಯಕೆಗಳು ಸದ್ಯದಲ್ಲೇ ಪ್ರಕಟವಾಗಲಿವೆ. ಯಾವುದೇ ವಾದ-ವಿವಾದಗಳಿಗೆ ಸಿಲುಕದೆ ಮಂದುವರಿಯಿರಿ. ಅಸಾಧ್ಯವಾದದ್ದು ಸಾಧ್ಯವಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯೋಚಿಸಿ ಚಿಂತಿಸಿ ಮುಂದುವರಿಯಿರಿ. ಸಾಂಸಾರಿಕವಾಗಿ ಆಗಾಗ ಒಣಜಗಳ, ಅವಮಾನ, ಮುಜುಗರವನ್ನು ಅನುಭವಿಸುವಂತಾದೀತು. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಲಿದೆ.
ಶುಭವಾರ: ಸೋಮ, ಗುರು, ಶನಿವಾರ

ಧನು: ನಿವೃತ್ತರು ಪ್ರವೃತ್ತಿಯಲ್ಲಿ ತೊಡಗುವುದು ಉತ್ತಮವೆನಿಸಲಿದೆ. ರಾಜಕೀಯ ವರ್ಗದಲ್ಲಿ ಚಾಣಾಕ್ಷತನ ಇರುವವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬಹುದು. ಸಾಮಾಜಿಕವಾಗಿ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಬರಲಿದೆ. ಬೇಸಾಯ, ಕೃಷಿ ಅಭಿರುಚಿ ಮೈಗೂಡಿಸಿಕೊಂಡು ಮುಂದುವರಿದಲ್ಲಿ ಬೇಸಾಯಗಾರರಿಗೆ ಹೆಚ್ಚಿನ ಲಾಭದಾಯಕ ಆದಾಯವು ತೋರಿಬರುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಮರ್ಪಣಾಭಾವ ಸಾರ್ಥಕ್ಯ ತಂದುಕೊಡಲಿದೆ.
ಶುಭವಾರ: ಗುರು, ಶುಕ್ರ, ಶನಿವಾರ

ಮಕರ: ವೃತ್ತಿರಂಗದಲ್ಲಿ ಜವಾಬ್ದಾರಿಯಿಂದ ದುಡಿಯುವ ನಿಮಗೆ ತಡವಾಗಿಯಾದರೂ ಪ್ರತಿಫ‌ಲವು ನಿಶ್ಚಿತ. ನಿರ್ವಹಿಸುವ ಕೆಲಸಕಾರ್ಯಗಳು ಹಂತಹಂತವಾಗಿ ಚಾಲ್ತಿಗೆ ಭದ್ರತೆಯನ್ನು ನೀಡಲಿವೆ. ಕೆಲವೊಮ್ಮೆ ಯಾಂತ್ರಿಕ ಕ್ರಿಯೆಗಳಿಂದಾಗಿ ಉತ್ಸಾಹ ಕುಗ್ಗಲಿದೆ. ಅವಿವಾಹಿತರು ಯೋಗ್ಯ ವೈವಾಹಿಕ ಸಂಬಂಧಗಳ ಕುದುರುವಿಕೆ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ. ನಿರುದ್ಯೋಗಿಗಳು ಪ್ರಯತ್ನ ಬಲವನ್ನು ಮುಂದುವರಿಸಿದಲ್ಲಿ ಯಶಸ್ಸು ಸಿಗಲಿದೆ.
ಶುಭವಾರ: ಸೋಮ, ಗುರು, ಶನಿವಾರ

ಕುಂಭ: ವೃತ್ತಿರಂಗದಲ್ಲಿ ಅಭಿವೃದ್ಧಿಯು ತೋರಿಬಂದರೂ ತುಸು ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ಹೊಸತನ ಕಾರ್ಯಸಾಧನೆಗೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕವಾದರೂ ಕಳಂಕಿತರೊಡನೆ ವ್ಯವಹರಿಸಬೇಕಾದ ಸಂದಿಗ್ಧತೆ, ಆತಂಕ ಉಂಟಾದೀತು. ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆ ಮಾನಸಿಕ ನೆಮ್ಮದಿಗೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಫ‌ಲ ಮುನ್ನಡೆಗೆ ಪೂರಕವಾದೀತು. ನಿರುದ್ಯೋಗಿಗಳಿಗೆ ಅನುಕೂಲವಾದ ಅವಕಾಶಗಳು ಒದಗಿಬಂದು ಇಷ್ಟಾರ್ಥ ಸಿದ್ಧಿಸಲಿದೆ.
ಶುಭವಾರ: ಗುರು, ಶನಿ, ಭಾನುವಾರ.

ಮೀನ: ವೃತ್ತಿರಂಗದಲ್ಲಿ ಬದಲಾವಣೆಗೆ ಸಿದ್ಧರಾಗಿರಿ. ಇದು ಕಾರ್ಯ ಸಾಧನೆಗೆ ಸಾಧಕವಾದೀತು. ಹಾಗೇ ಸಮಸ್ಯೆಗಳು, ವಿವಾದಗಳು ತಮ್ಮಿಂದ ತಾವೇ ಉಪಶಮನವಾಗಲಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಭಾವೋದ್ವೇಗಕ್ಕೆ ಈಡಾಗದಂತೆ ಕಾಳಜಿ ವಹಿಸುವುದು ಉತ್ತಮ. ಆರ್ಥಿಕವಾಗಿ ಚೇತರಿಕೆ ತೋರಿಬಂದರೂ ಖರ್ಚುವೆಚ್ಚಗಳ ಲೆಕ್ಕಾಚಾರ ತಪ್ಪಾದೀತು. ಹಾಗೇ ಹೂಡಿಕೆಯಲ್ಲಿ ಯೋಚಿಸಿ ಮುನ್ನಡೆಯಿರಿ. ವೈವಾಹಿಕ ಅನ್ವೇಷಣಾ ಕಾರ್ಯಗಳು ಹಿನ್ನಡೆಯನ್ನು ಅನುಭವಿಸಿ, ಅವಿವಾಹಿತರಿಗೆ ಉತ್ಸಾಹ ಕುಗ್ಗಲಿದೆ.
ಶುಭವಾರ: ಬುಧ, ಶುಕ್ರ, ಭಾನುವಾರ

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆ ತೇರ್ಗಡೆಗೆ ಐದು ಕೃಪಾಂಕ?

ಎಸೆಸೆಲ್ಸಿ ಪರೀಕ್ಷೆ ತೇರ್ಗಡೆಗೆ ಐದು ಕೃಪಾಂಕ?

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

raashi

ಅವಿವಾಹಿತರಿಗೆ ಕಂಕಣಬಲ, ಉದ್ಯೋಗಿ ಮಹಿಳೆಯರಿಗೆ ಭಡ್ತಿ: ಹೇಗಿದೆ ಇಂದಿನ ನಿಮ್ಮ ರಾಶಿ ಭವಿಷ್ಯ !

ಈ ವಾರ ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

h

ವಾರ ಭವಿಷ್ಯ: ಈ ರಾಶಿಯ ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ

h

ವಾರ ಭವಿಷ್ಯ: ಈ ವಾರ ಈ ಎರಡು ರಾಶಿಯವರಿಗಿದೆ ಆರ್ಥಿಕ ಅದೃಷ್ಟ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಹಲವು ಸೌಲಭ್ಯ

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಹಲವು ಸೌಲಭ್ಯ

ನೀಟ್‌: ಆಯ್ಕೆ ಪ್ರಶ್ನೆ ಸಂಬಂಧ ಎನ್‌ಟಿಎ ಸ್ಪಷ್ಟನೆ

ನೀಟ್‌: ಆಯ್ಕೆ ಪ್ರಶ್ನೆ ಸಂಬಂಧ ಎನ್‌ಟಿಎ ಸ್ಪಷ್ಟನೆ

ಎಸೆಸೆಲ್ಸಿ ಪರೀಕ್ಷೆ ತೇರ್ಗಡೆಗೆ ಐದು ಕೃಪಾಂಕ?

ಎಸೆಸೆಲ್ಸಿ ಪರೀಕ್ಷೆ ತೇರ್ಗಡೆಗೆ ಐದು ಕೃಪಾಂಕ?

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.