ಖಾಸಗಿ ಸಂದೇಶ ಹಂಚಿಕೊಳ್ಳುವುದಿಲ್ಲ: ವಾಟ್ಸ್ ಆ್ಯಪ್ ಸ್ಪಷ್ಟನೆ
Team Udayavani, Jan 12, 2021, 7:43 PM IST
ನವದೆಹಲಿ: ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಸೇರಿದಂತೆ ಇತರೆ ಅಂಗ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತೇನೆಂದು ನವನಿಯಮ ರೂಪಿಸಿ ವಿವಾದಕ್ಕೀಡಾಗಿದ್ದ ವಾಟ್ಸ್ ಆ್ಯಪ್ ಕೆಲ ವಿಚಾರಗಳ ಬಗ್ಗೆ ಈಗ ಸ್ಪಷ್ಟನೆ ನೀಡಿದೆ.
ವಾಟ್ಸ್ ಆ್ಯಪ್ ಬಳಕೆದಾರರ ಖಾಸಗಿ ಮೆಸೇಜ್‌ಗಳನ್ನು ಯಾವ ಕಾರಣಕ್ಕೂ ಹಂಚಿಕೊಳ್ಳುವುದಿಲ್ಲ ಎಂದು ಹೇಳಿರುವ ವಾಟ್ಸ್‌ಆ್ಯಪ್, ಈ ಕುರಿತು ಎದ್ದಿರುವ ಊಹಾಪೋಹಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಅದರ ಪ್ರಕಾರ…
1)ಬಳಕೆದಾರರ ಮೆಸೇಜ್‌ಗಳನ್ನು ನೋಡಲು ಅಥವಾ ಕರೆಗಳನ್ನು ಕೇಳಲು ವಾಟ್ಸ್ ಆ್ಯಪ್ ಅಥವಾ ಫೇಸ್ ಬುಕ್‌ಗೆ ಸಾಧ್ಯವಿಲ್ಲ.
2) ಬಳಕೆದಾರರು ಯಾರಿಗೆ ಕರೆ ಅಥವಾ ಸಂದೇಶ ಕಳುಹಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ.
3) ಜನರ ಕಾಂಟ್ಯಾಕ್ಟ್ ವಿವರವನ್ನು ಫೇಸ್ ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ.
ಇದರ ಜತೆಗೇ ವಾಟ್ಸ್ ಆ್ಯಪ್, ತನ್ನ ಬಳಕೆದಾರರ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಆಗಿರುವುದರಿಂದ ಅವರ ಸಂದೇಶಗಳನ್ನು ನಮಗೆ ಗಮನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ವಿಜಯಪುರ : ಸಾಲಕ್ಕೆ ಹೆದರಿ ನವವಿವಾಹಿತ ಯುವ ರೈತ ಆತ್ಮಹತ್ಯೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444