Udayavni Special

ಮತ್ತೊಬ್ಬರ ಫೋನ್‌ಗೆ ಎ‍ಚ್ಡಿಕೆ ಕಿವಿ?


Team Udayavani, Aug 15, 2019, 6:00 AM IST

HDK

ಬೆಂಗಳೂರು: ಜೆಡಿಎಸ್‌ – ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಾದದ ಸ್ವರೂಪ ಪಡೆದಿದ್ದ ದೂರವಾಣಿ ಕದ್ದಾಲಿಕೆ ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಶಾಸಕರು, ಬಿಜೆಪಿ ನಾಯಕರ ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅತೃಪ್ತರ ಫೋನ್‌ ಟ್ಯಾಪ್‌ ಮಾಡಿ ಬ್ಲಾಕ್‌ವೆುೕಲ್ ಮಾಡ ಲಾಗುತ್ತಿತ್ತು ಎಂಬ ಆರೋಪ ಮಾಡಲಾಗಿದೆ. ಆದರೆ ಈ ಆರೋಪವನ್ನು ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕರು ಹಾಗೂ ಕೆಲವು ಪತ್ರಕರ್ತರದು ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿತ್ತು. ಆಗಲೇ ನಾನು ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ದೂರವಾಣಿ ಕದ್ದಾಲಿಕೆ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆವರಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದ್ದಾರೆ.

ನನ್ನ ಫೋನ್‌ ಕೂಡ ಕದ್ದಾಲಿಕೆ: ಮತ್ತೂಂದೆಡೆ ಮೈಸೂ ರಿನಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ವಿಶ್ವನಾಥ್‌, ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ನನ್ನ ಫೋನ್‌ ಕೂಡಾ ಕದ್ದಾಲಿಕೆ ಮಾಡಿಸಿದ್ದರು. ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ ದ್ದರೂ ನನ್ನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ನಾನು ನನ್ನ ಕುಟುಂಬದವರ ಜತೆ ಮಾತನಾಡಿದ್ದನ್ನು ಕದ್ದಾಲಿಕೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಕಾರ್ಯವೈಖರಿ ಬಗ್ಗೆ ಅತೃಪ್ತಿ ಹೊಂದಿದ್ದ ಶಾಸಕರ ಫೋನ್‌ ಕದ್ದಾಲಿಕೆ ಮಾಡಿ ಬ್ಲಾಕ್‌ವೆುೕಲ್ ಮಾಡಲು ಬಳಕೆ ಮಾಡಲಾಗಿತ್ತು. ಇದರ ಬಗ್ಗೆ ಕಠಿಣ ಕ್ರಮ ಆಗಬೇಕು, ತನಿಖೆಯೂ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಚರ್ಚಿಸಿ ಕ್ರಮ: ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ , ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ದೂರವಾಣಿ ಕದ್ದಾಲಿಕೆ ಕುರಿತ ಆರೋಪ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದರು.

ಕದ್ದಾಲಿಕೆ ಮಾಡಿಸಿರಲಿಲ್ಲ: ಫೋನ್‌ ಟ್ಯಾಪಿಂಗ್‌ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು. ಕುರ್ಚಿಗಾಗಿ ಟೆಲಿಫೋನ್‌ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಸ್ಥಾನಕ್ಕೆ ಐಪಿಎಸ್‌ ಅಧಿಕಾರಿ ಭಾಸ್ಕರ್‌ರಾವ್‌ ಲಾಬಿ ಮಾಡಿದ್ದರು. ಅದಕ್ಕಾಗಿ ರಾಜಕೀಯ ನಾಯಕರ ಜತೆ ಮಾತುಕತೆ ನಡೆಸಿದ್ದರು ಎಂದು ಹೇಳಲಾದ ದೂರವಾಣಿ ಸಂಭಾಷಣೆಯ ಆಡಿಯೋ ಬಯಲಾಗಿತ್ತು. ಅದರ ಬಗ್ಗೆ ತನಿಖೆ ನಡೆಸಲು ಅಧಿಕಾರಿಯನ್ನೂ ನೇಮಿಸಲಾಗಿತ್ತು. ಹಿಂದಿನ ಪೊಲೀಸ್‌ ಆಯುಕ್ತರೇ ದೂರವಾಣಿ ಕದ್ದಾಲಿಕೆ ಮಾಡಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈ ಪ್ರಕರಣವು ಇದೀಗ ರಾಜಕೀಯ ನಾಯಕರ ದೂರವಾಣಿ ಕದ್ದಾಲಿ ಕೆಯೂ ಮಾಡಲಾಗಿತ್ತು ಎಂಬ ವಿಚಾರ ಬಯಲಾಗಲು ಕಾರಣವಾಗಿದೆ.

ಉದಯವಾಣಿ ವರದಿ ಮಾಡಿತ್ತು
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕರ ಫೋನ್‌ ಟ್ಯಾಪಿಂಗ್‌ ಬಗ್ಗೆ ‘ಉದಯವಾಣಿ’ 2018ರ ಆ. 29 ರಂದು ವಿಶೇಷ ವರದಿ ಮಾಡಿತ್ತು. ಆ ನಂತರ ಆಗ ಪ್ರತಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರು ತಮ್ಮ ದೂರವಾಣಿ ಸಹ ಕದ್ದಾಲಿಕೆ ಮಾಡಲಾಗುತ್ತಿದೆ, ಫೋನ್‌ ಟ್ಯಾಪಿಂಗ್‌ ಅನುಭವ ತಮಗೂ ಆಗಿದೆ ಎಂದು ಹೇಳಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ

ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ

ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ

ಹುಬ್ಬಳ್ಳಿ- ಧಾರವಾಡ ಹೆದ್ದಾರಿಯಲ್ಲಿ ನಡೆದ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಖೇಣಿ

11 ಜನರನ್ನು ಬಲಿತೆಗೆದುಕೊಂಡ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಅಶೋಕ್ ಖೇಣಿ

ಮಹಾರಾಷ್ಟ್ರ:  400 ಅಡಿ ಕಮರಿಗೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ

ಮಹಾರಾಷ್ಟ್ರ:  ಖಾಡ್ಕಿ ಘಾಟ್‌ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

ಹುಬ್ಬಳ್ಳಿ- ಧಾರವಾಡ ಹೆದ್ದಾರಿಯಲ್ಲಿ ನಡೆದ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಖೇಣಿ

11 ಜನರನ್ನು ಬಲಿತೆಗೆದುಕೊಂಡ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಅಶೋಕ್ ಖೇಣಿ

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ BSY ಕುಮ್ಮಕ್ಕು : ಸಿದ್ದರಾಮಯ್ಯ ಆರೋಪ

BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ashwath

ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

There should be no garbage disposal among the village

ಗ್ರಾಮದ ಮಧ್ಯೆ ಕಸ ವಿಲೇವಾರಿ ಬೇಡ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

Let the  utilize the government facility

ಸರ್ಕಾರದ ಸೌಲಭ್ಯ ಬಳಸಿಕೊಳ್ಳಲಿ

Minister’s visit to the etthinhole works place

ಎತ್ತಿನಹೊಳೆ ಕಾಮಗಾರಿ ಸ್ಥಳಕ್ಕೆ ಸಚಿವದ್ವಯರ ಭೇಟಿ

ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.