ಸಂಪುಟ ವಿಸ್ತರಣೆ ಆಗಲಿ ಯಾರು ಸಿಡಿಯುತ್ತಾರೋ ಗೊತ್ತಾಗುತ್ತೆ: ಡಾ.ಜಿ.ಪರಮೇಶ್ವರ್‌

Team Udayavani, Jan 29, 2020, 7:39 PM IST

ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ನಂತರ ಕಾದು ನೋಡಿ ಯಾರು ಏನು ಹೇಳ್ತಾರೆ, ಯಾರು ಸಿಡಿಯುತ್ತಾರೆ ಗೊತ್ತಾಗುತ್ತದೆ ಎಂದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಿನ ಸ್ಥಿತಿಯಲ್ಲಿ ಯಡಿಯೂರಪ್ಪ ಯಾರನ್ನೂ ಸಮಾಧಾನ ಮಾಡೋಕೆ ಆಗಲ್ಲ. ಅದಕ್ಕೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಗೊಂದಲ ಇದೆ ಎನ್ನುವುದಕ್ಕೆ ಸಂಪುಟ ವಿಸ್ತರಣೆ ವಿಳಂಬವೇ ಸಾಕ್ಷಿ. ಅವರು ಒಂದು ಬಾರಿ ಸಂಪುಟ ವಿಸ್ತರಣೆ ಮಾಡಲಿ ಆಗ ಎಲ್ಲವೂ ಗೊತ್ತಾಗುತ್ತದೆ ಎಂದರು.

ಕೆಲವರು ಉಪ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. 17 ಜನರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಇದೆ. ವಿಸ್ತರಣೆ ನಂತರ ಯಾರು ಏನಾಗುತ್ತಾರೋ ನೋಡಬೇಕು. ನಾವು ಅದಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದರು.

ಬೇಗ ಆದರೆ ಒಳ್ಳೆಯದು
ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಆದಷ್ಟು ಬೇಗ ಮಾಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಮತ್ತೂಮ್ಮೆ ಆ ಬಗ್ಗೆ ಒತ್ತಡ ತರಲಾಗುವುದು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗಿದೆ. ದೆಹಲಿ ಚುನಾವಣೆಯಲ್ಲಿ ಹೈಕಮಾಂಡ್‌ ನಾಯಕರು ಬ್ಯುಸಿ ಇರುವುದರಿಂದ ತಡವಾಗಿರಬಹುದು. ಮತ್ತೂಮ್ಮೆ ಹೈಕಮಾಂಡ್‌ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರ ನಿಷ್ಕ್ರಿಯವಾಗಿದೆ. ಆಡಳಿತ ಯಂತ್ರ ಕುಸಿದಿದ್ದು ಯಾವುದೇ ಅಭಿವೃದ್ಧಿ ಕೆಲಗಳು ಆಗುತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನ ತಡೆಹಿಡಿಯಲಾಗಿದೆ. ಫೆ.17 ರಿಂದ ಅಧಿವೇಶನ ನಡೆಯಲಿದೆ. ಇದೆಲ್ಲದರ ವಿರುದ್ಧವೂ ಅಧಿವೇಶನದಲ್ಲಿ ಧ್ವನಿ ಎತ್ತಬೇಕಾಗಿದೆ.

ನಮಗೆ ವಿಪಕ್ಷವಾಗಿ ಸರ್ಕಾರವನ್ನು ಎಚ್ಚರಿಸಲು ಅವಕಾಶವಿದೆ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಿಸಿದರೆ ಒಳ್ಳೆಯದು ಎಂದು ತಿಳಿಸಿದರು.
ನಮ್ಮಲ್ಲಿ ಕೆಲ ಭಿನ್ನಾಭಿಪ್ರಾಯ ಇರಬಹುದು. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕು. ನಮ್ಮ ಮನೆಯಲ್ಲೂ ಸಭೆ ಮಾಡಿದ್ದೆ. ಆಗಲೂ ಭಿನ್ನಾಭಿಪ್ರಾಯ ಬಿಟ್ಟು ಹೋಗೋಣ ಎಂದಿದ್ದೆ. ಎಲ್ಲರೂ ಅದಕ್ಕೆ ಒಪ್ಪಿಕೊಂಡಿದ್ದರು ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೊರೊನಾ ವೈರಸ್‌ ಭಯಕ್ಕೆ ಇಡೀ ಜಗತ್ತು ತತ್ತರಿಸಿದೆ. ಕೆಮ್ಮು/ ಸೀನಿನಿಂದ ಈ ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬುದು ಈ ಆತಂಕಕ್ಕೆ ಕಾರಣ. ಜನರ...

  • ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಎಂದಾಗ ಲ್ಯಾಬ್‌ ಕೋಟ್‌, ದಪ್ಪ ಪ್ರೇಮ್‌ನ ಕನ್ನಡಕ, ಏಪ್ರನ್‌, ಕೈಗೆ ಗ್ಲೌಸ್‌ ನೆನಪಿಗೆ ಬರುತ್ತದೆ. ಸಿನಿಮಾಗಳಲ್ಲಿ,...

  • ನೂರು ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಅಥವಾ ಶಿಲ್ಪದ ಮೂಲಕ ಹೇಳಿ ಬಿಡಬಹುದು. ಅದು ಕಲೆಗೆ ಇರುವ ತಾಕತ್ತು. ಕಲಾವಿದನಿಗೆ ಇರುವ ಜವಾಬ್ದಾರಿ ಕೂಡಾ ಹೌದು. ಆ ಬಗೆಯ...

  • ವಿದೇಶದಲ್ಲಿ ಕಲಿಯುವ ಆಲೋಚನೆ ನಿಮ್ಮದೇ? ಹಾಗಿದ್ದರೆ ನೀವು ಟೋಫೆಲ್‌ (Test of English as a Foreign Language or TOEFL) ತೇರ್ಗಡೆಯಾಗಬೇಕು. ಇದು ಇಂಗ್ಲಿಷ್‌ ಭಾಷೆಯಲ್ಲಿ ನಿಮಗಿರುವ ಜ್ಞಾನವನ್ನು...

  • ಸೀರೆ ಸಿಂಪಲ್‌ ಆಗಿದ್ದರೂ, ಬ್ಲೌಸ್‌ ಗ್ರ್ಯಾಂಡ್‌ ಆಗಿ ಹೊಲಿಸಬೇಕು- ಇದು ಈಗಿನವರು ಹೇಳುವ ಮಾತು. ಅದಕ್ಕಾಗಿಯೇ ಇರಬೇಕು, ಬ್ಲೌಸ್‌ನ ಹೊಲಿಗೆಯಲ್ಲಿ ಥರಹೇವಾರಿ ಡಿಸೈನ್‌ಗಳು...