ವಿಂಬಲ್ಡನ್-2021 : ಫೈನಲ್ಗೆ ನೆಗೆದ ಬೆರೆಟಿನಿ
Team Udayavani, Jul 10, 2021, 12:40 AM IST
ಲಂಡನ್: ಇಟಲಿಯ 7ನೇ ಶ್ರೇಯಾಂಕದ ಮ್ಯಾಟೊ ಬೆರೆಟಿನಿ ಮೊದಲ ಸಲ ಗ್ರ್ಯಾನ್ಸ್ಲಾಮ್ ಫೈನಲ್ಗೆ ಲಗ್ಗೆಯಿರಿಸಿ ಇತಿ ಹಾಸವೊಂದನ್ನು ಬರೆಯುವ ಕನಸು ಕಾಣಲಾರಂಭಿಸಿದ್ದಾರೆ. ಶುಕ್ರವಾರ ನಡೆದ ವಿಂಬಲ್ಡನ್ ಸೆಮಿಫೈನಲ್ ಕಾಳಗದಲ್ಲಿ ಅವರು ಪೋಲೆಂಡ್ನ “ದೈತ್ಯ ಸಂಹಾರಿ’ ಹ್ಯೂಬರ್ಟ್ ಹುರ್ಕಾಜ್ ಅವರ ಕನಸಿನ ಓಟಕ್ಕೆ 6-3, 6-0, 6-7 (3-7), 6-4 ಅಂತರದಿಂದ ತೆರೆ ಎಳೆದರು. ಇಟಲಿಯ ಟೆನಿಸಿಗನೋರ್ವ ವಿಂಬ ಲ್ಡನ್ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ನಿದರ್ಶನ ಇದಾಗಿದೆ.
ಕಳೆದೆರಡು ಬಾರಿಯ ಚಾಂಪಿ ಯನ್ ನೊವಾಕ್ ಜೊಕೋವಿಕ್ ಮತ್ತು ಕೆನಡಾದ ಡೆನ್ನಿಸ್ ಶಪೊವ ಲೋವ್ ನಡುವಿನ ದ್ವಿತೀಯ ಸೆಮಿ ಫೈನಲ್ ವಿಜೇತರನ್ನು ಬೆರೆಟಿನಿ ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ಎದುರಿಸಲಿದ್ದಾರೆ.
ಇದನ್ನೂ ಓದಿ :ಚಹಾ ಮಾರುತ್ತಿರುವ ಮಾಜಿ ಕ್ರಿಕೆಟಿಗ!
ಮ್ಯಾಟೊ ಬೆರೆಟಿನಿ ಮೊದಲೆರಡು ಸೆಟ್ಗಳನ್ನು ಸುಲಭದಲ್ಲಿ ವಶಪಡಿಸಿ ಕೊಂಡರು. ಅದರಲ್ಲೂ ದ್ವಿತೀಯ ಸೆಟ್ನಲ್ಲಿ ಒಂದೂ ಅಂಕ ಬಿಟ್ಟುಕೊಡದೇ ಮುನ್ನುಗ್ಗಿದರು. ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಹುರ್ಕಾಜ್ ನೇರ ಸೆಟ್ಗಳಲ್ಲಿ ಸೋಲನುಭವಿ ಸುವ ಎಲ್ಲ ಸಾಧ್ಯತೆ ಇತ್ತು. ಆದರೆ ತೃತೀಯ ಸೆಟ್ನಲ್ಲಿ ತಿರುಗಿ ಬಿದ್ದರು. ಇದನ್ನು ಟೈ-ಬ್ರೇಕರ್ನಲ್ಲಿ ವಶಪಡಿಸಿಕೊಂಡರು. ಆದರೆ 4ನೇ ಸೆಟ್ನಲ್ಲಿ ಬೆರೆಟಿನಿ ಮತ್ತೆ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ