Udayavni Special

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ


Team Udayavani, Jun 16, 2021, 7:20 AM IST

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಬ್ರಿಸ್ಟಲ್‌: ಅತ್ತ ವಿರಾಟ್‌ ಕೊಹ್ಲಿ ಪಡೆ ಇಂಗ್ಲೆಂಡ್‌ ನೆಲದಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕಾರ್ಯತಂತ್ರ ರೂಪಿಸುತ್ತಿದ್ದರೆ, ಇತ್ತ ಮಿಥಾಲಿ ಬಳಗ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವಾಡಲು ಕ್ಷಣಗಣನೆ ಆರಂಭಿಸಿದೆ. ಬುಧವಾರದಿಂದ 4 ದಿನಗಳ ಕಾಲ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಬ್ರಿಸ್ಟಲ್‌ನಲ್ಲಿ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ಇದು 7 ವರ್ಷಗಳ ಬಳಿಕ ಭಾರತದ ವನಿತೆಯರು ಆಡಲಿರುವ ಮೊದಲ ಟೆಸ್ಟ್‌ ಎಂಬ ಕಾರಣಕ್ಕೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಭಾರತ 2014ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ತನ್ನ ಕೊನೆಯ ಟೆಸ್ಟ್‌ ಆಡಿತ್ತು. ಅಂದು ಕೂಡ ಮಿಥಾಲಿ ಅವರೇ ಭಾರತದ ನಾಯಕಿ ಆಗಿದ್ದರು. ಜತೆಗೆ ಮಿಥಾಲಿ ಸೇರಿದಂತೆ ಅಂದಿನ ಇನ್ನಿಂಗ್ಸ್‌ ಗೆಲುವಿಗೆ ಸಾಕ್ಷಿಯಾದ 7 ಆಟಗಾರ್ತಿಯರು ಈಗಿನ ತಂಡದಲ್ಲಿರುವುದೊಂದು ವಿಶೇಷ. ಹೀಗಾಗಿ ಇಂಗ್ಲೆಂಡಿಗೆ ಹೋಲಿಸಿದರೆ ಭಾರತ ಹೆಚ್ಚು ಅನುಭವಿ ಎನ್ನಲಡ್ಡಿಯಿಲ್ಲ. 7 ವರ್ಷಗಳಿಂದ ಟೆಸ್ಟ್‌ ಆಡಿಲ್ಲ ಎಂಬುದಷ್ಟೇ ಒಂದು ಕೊರತೆ.

ಯುವ ಆಟಗಾರ್ತಿಯರಿಗೆ ಸವಾಲು
ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ, ವೇಗಿ ಜೂಲನ್‌ ಗೋಸ್ವಾಮಿ ಮೊದಲಾದ ಅನು
ಭವಿಗಳಿಂದ ಭಾರತ ತಂಡ ಸದೃಢವಾಗಿದೆ. ಆದರೆ ಯುವ ಆಟಗಾರ್ತಿಯರಿಗೆ ಈ ಪಂದ್ಯ ದೊಡ್ಡ ಸವಾಲಾಗಬಹುದು. ಇವರೆಲ್ಲ ಸೀಮಿತ ಓವರ್‌ಗಳ ಪಂದ್ಯವನ್ನೇ ಆಡುತ್ತ ಬಂದವರಾದ್ದರಿಂದ ನಾಲ್ಕು ದಿನಗಳ ಮುಖಾಮುಖೀಗೆ ಹೊಂದಿಕೊಳ್ಳುವರೇ ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಕಾಡುತ್ತಿದೆ. ಆದರೆ ಇವರೆಲ್ಲ ಪ್ರತಿಭಾವಂತರು ಹಾಗೂ ನಿರ್ಭೀತ ಆಟಗಾರ್ತಿಯರು ಎಂಬುದರಲ್ಲಿ ಎರಡು ಮಾತಿಲ್ಲ.

“ಲೇಡಿ ಸೆಹವಾಗ್‌’ ಎಂದೇ ಗುರುತಿಸಲ್ಪಡುವ 17 ವರ್ಷದ ಶಫಾಲಿ ವರ್ಮ ಆಡುವ ಬಳಗದಲ್ಲಿ ಸ್ಥಾನ ಪಡೆಯುವರೇ ಎಂಬು ದೊಂದು ಕುತೂಹಲ. ಅವರಿಗೆ ಸಚಿನ್‌ ಶುಭ ಹಾರೈಸಿದ್ದಾರೆ.

ದಾಖಲೆ ಭಾರತದ ಪರ
ಇಂಗ್ಲೆಂಡ್‌ ನೆಲದಲ್ಲಿ ಭಾರತೀಯರ ಟೆಸ್ಟ್‌ ದಾಖಲೆ ಅತ್ಯುತ್ತಮ ವಾಗಿದೆ ಎಂಬುದೊಂದು ಪ್ಲಸ್‌ ಪಾಯಿಂಟ್‌. ಇಲ್ಲಿ ಆಡಿದ ಕಳೆದೆರಡೂ ಟೆಸ್ಟ್‌ಗಳಲ್ಲಿ ಭಾರತ ಜಯ ಸಾಧಿಸಿರುವುದನ್ನು ಮರೆಯುವಂತಿಲ್ಲ.

ಇಂಗ್ಲೆಂಡ್‌ ನೆಚ್ಚಿನ ತಂಡವಾಗಿ ಗೋಚರಿಸಿದರೂ ಭಾರತದ ಅನುಭವಿ ಹಾಗೂ ಯುವ ಆಟಗಾರರ ಸಮ್ಮಿಶ್ರ ಪಡೆಯ ಬಗ್ಗೆ ಆತಿಥೇಯರಿಗೆ ಭೀತಿ ಇದ್ದೇ ಇದೆ. ಹೊಸಬರು ಹಾಗೂ ಪ್ರತಿಭಾನ್ವಿತರ ಪಡೆ ಯಾವತ್ತೂ ಹೆದರಿಕೆ ಇಲ್ಲದೆ ಆಡುತ್ತದೆ ಎಂಬುದಾಗಿ ಆತಿಥೇಯ ತಂಡದ ಉಪನಾಯಕಿ ನ್ಯಾಟ್‌ ಶಿವರ್‌ ಹೇಳಿರುವುದು ಭಾರತಕ್ಕೊಂದು ಸ್ಫೂರ್ತಿ!

ಟಾಪ್ ನ್ಯೂಸ್

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಜಪಾನ್‌ ಟೆನಿಸ್‌ ತಾರೆ ಒಸಾಕಾ ನಿರ್ಗಮನ

ಜಪಾನ್‌ ಟೆನಿಸ್‌ ತಾರೆ ಒಸಾಕಾ ನಿರ್ಗಮನ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ವಿನೇಶ್‌ಗೆ ಟೋಕ್ಯೊ ವಿಮಾನ ಮಿಸ್‌!

ವಿನೇಶ್‌ಗೆ ಟೋಕ್ಯೊ ವಿಮಾನ ಮಿಸ್‌!

ಭಾರತೀಯ ಆಟಗಾರನಿಗೆ ಕೋವಿಡ್ ಪಾಸಿಟಿವ್: ಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯ ರದ್ದು

ಭಾರತೀಯ ಆಟಗಾರನಿಗೆ ಕೋವಿಡ್ ಪಾಸಿಟಿವ್: ಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯ ರದ್ದು

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

ಆರೋಗ್ಯದ ಮೇಲೆ ಪರಿಣಾಮ…ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.