ಚುನಾವಣೆ ಸೋತರೆ ಸಚಿವ ಸ್ಥಾನಕ್ಕೇ ಕತ್ತರಿ

ಗೆಲ್ಲಲು ಶ್ರಮಿಸಿ: ಸಚಿವರಿಗೆ ಬಿಎಸ್‌ವೈ ಕರೆ

Team Udayavani, Nov 21, 2019, 6:30 AM IST

ಬೆಂಗಳೂರು: ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸೋಲು- ಗೆಲುವಿಗೆ ಆಯಾ ಕ್ಷೇತ್ರಗಳ ಉಸ್ತುವಾರಿ ಹೊತ್ತಿರುವ ಸಚಿವರೇ ಹೊಣೆ… ಒಂದೊಮ್ಮೆ ಹಿನ್ನಡೆಯಾದರೆ ಆ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಸಚಿವರ ತಲೆದಂಡ ಖಚಿತ…

-ಇದು ಮುಖ್ಯಮಂತ್ರಿ ಯಡಿಯೂರಪ್ಪ ಉಪ ಚುನಾವಣೆ ನಡೆಯುತ್ತಿ ರುವ ಕ್ಷೇತ್ರಗಳ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನೀಡಿರುವ ಖಡಕ್‌ ಎಚ್ಚರಿಕೆ. ಕ್ಷೇತ್ರವಾರು ನಿಯೋಜಿಸಿ ರುವ ಉಸ್ತುವಾರಿಗಳು ಕ್ಷೇತ್ರದಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂಬ ಎಚ್ಚರಿಕೆಯನ್ನೂ ಬಿಎಸ್‌ವೈ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ಚುನಾವಣೆ ಕುರಿತಂತೆ ವಿಸ್ತೃತ ಚರ್ಚೆ ನಡೆದಿದ್ದು ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಉಪ ಚುನಾವಣೆ ಗೆಲುವಿನ ಸಂಬಂಧ ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಎಲ್ಲ ಮಾಹಿತಿ ಗೊತ್ತಾಗುತ್ತೆ
ಸಚಿವರು ಎಲ್ಲಿರುತ್ತೀರಿ, ಏನೆಲ್ಲ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಿದ್ದೀರಿ, ಯಾವ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೀರಿ ಎಂಬುದು ಸಹಿತ ನಿಮ್ಮ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ.

ತ್ಯಾಗ ಮಾಡಿದವರ ಹಿತ ಕಾಪಾಡಬೇಕು
ಅನರ್ಹರು ಅಧಿಕಾರ, ಪಕ್ಷ, ಶಾಸಕ ಸ್ಥಾನ ಬಿಟ್ಟು ಬಂದಿದ್ದಾರೆ. ಅವರು ಮತ್ತೆ ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡುವುದು ನಮ್ಮ ಬದ್ಧತೆ. ಹಾಗಾಗಿ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಸಚಿವರೆಲ್ಲ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಆ ಮೂಲಕ ಸರಕಾರವನ್ನು ಸುಸ್ಥಿರಗೊಳಿಸಲು ಗಮನ ಹರಿಸಬೇಕು ಎಂದಿದ್ದಾರೆ ಎನ್ನಲಾಗಿದೆ.

ಕೆಲವೆಡೆ ಸಮಸ್ಯೆ ಇರುವ ಬಗ್ಗೆ ಕೆಲವು ಸಚಿವರು ತಿಳಿಸಿದಾಗ, ಕಾರಣ ಹೇಳಬೇಡಿ. ಧನಾತ್ಮಕ ಫ‌ಲಿತಾಂಶ ಬೇಕು. ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಹಿನ್ನಡೆ ಯಾಗಲೇಬಾರದು ಎಂದಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಶೆಟ್ಟರ್‌ ಹೆಗಲಿಗೆ !
ಅಥಣಿ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆ.ಎಸ್‌. ಈಶ್ವರಪ್ಪ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಿದೆ. ಆದರೆ ಲಕ್ಷ್ಮಣ ಸವದಿಯವರ ಕಾರ್ಯ ನಿರ್ವಹಣೆ ಬಗ್ಗೆಯೂ ಮಾಹಿತಿ ಪಡೆಯು ತ್ತಿರುವ ಬಿಎಸ್‌ವೈ, ಬೆಳಗಾವಿ ವ್ಯಾಪ್ತಿಯ ಅಥಣಿ, ಕಾಗವಾಡ, ಗೋಕಾಕ್‌ ಕ್ಷೇತ್ರಗಳ ಸಮನ್ವಯದತ್ತಲೂ ಗಮನಹರಿಸುವಂತೆ ಶೆಟ್ಟರ್‌ಗೆ ಸೂಚಿಸಿದ್ದಾರೆ.

ಡಿಸಿಎಂಗೆ ಕೆ.ಆರ್‌.ಪೇಟೆ
ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಹೊಸಕೋಟೆ ಬದಲಾಗಿ ಕೆ.ಆರ್‌.ಪೇಟೆಯ ಉಸ್ತುವಾರಿ ವಹಿಸಲಾಗಿದೆ. ಈ ಕ್ಷೇತ್ರದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಜತೆಗೆ ಅಶ್ವತ್ಥನಾರಾಯಣ ಅವರಿಗೆ ಹೆಚ್ಚುವರಿಯಾಗಿ ಹೊಣೆ ನೀಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ