ಡಿಸೆಂಬರ್ 3 ರಂದು ಕಂಠೀರವದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ
Team Udayavani, Dec 1, 2022, 1:27 PM IST
ಬೆಂಗಳೂರು: ಇದೇ ಡಿಸೆಂಬರ್ 3ರಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ವಿಶ್ವ ವಿಕಲಚೇತನ ದಿನಾಚರಣೆಯನ್ನು ಆಯೋಜಿಸಲಾಗಿದೆ.
ಎಲ್ಲರನ್ನೂ ಒಳಗೊಂಡ ಸಮಾಜದ ನಿರ್ಮಾಣಕ್ಕೆ ಪರಿವರ್ತಕ ಪರಿಹಾರಗಳು ಸುಗಮ್ಯ ಮತ್ತು ಸಮಾನ ಜಗತ್ತನ್ನು ಉತ್ತೇಜಿಸುವಲ್ಲಿ ಅವಿಷ್ಕಾರದ ಪಾತ್ರ ಎನ್ನುವ ಘೋಷವಾಕ್ಯದ ಹಿನ್ನಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಎಂ. ರಾಜೀವ್ ಚಂದ್ರಶೇಖರ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ವಿಕಲ ಚೇತನ ಬಾಂಧವರು, ವಿಕಲ ಚೇತನ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!
ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ