ಕೊರೊನಾ ವೈರಸ್ ಎಫೆಕ್ಟ್; ವುಹಾನ್ ಆಸ್ಪತ್ರೆಯ ನಿರ್ದೇಶಕ ಲಿಯು ಸಾವು
ಈ ವೈರಸ್ ಗೆ ಈವರೆಗೆ 1900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್ ಗೆ ತುತ್ತಾಗಿದ್ದಾರೆ
Team Udayavani, Feb 18, 2020, 4:56 PM IST
ಬೀಜಿಂಗ್: ಚೀನಾದ ವುಹಾನ್ ಆಸ್ಪತ್ರೆಯ ನಿರ್ದೇಶಕ ಲಿಯು ಝಿಮಿಂಗ್ ಕೊರೊನಾ ವೈರಸ್ ಗೆ ಸಾವನ್ನೊಪ್ಪಿರುವ ಘಟನೆ ನಡೆದಿದೆ ಎಂದು ರಾಜ್ಯ ಸರ್ಕಾರ ಸ್ವಾಮಿತ್ವದ ವರದಿ ಹೇಳೀದೆ.
ಚೀನಾದ ವುಹಾನ್ ಕೊರೊನಾ ವೈರಸ್ ನ ಮೂಲ ಸ್ಥಳವಾಗಿದ್ದು, ದೇಶಾದ್ಯಂತ ಮರಣಮೃದಂಗ ಬಾರಿಸುತ್ತಿರುವ ನೂತನ ವೈರಸ್ ದಾಳಿಗೆ ನಿರ್ದೇಶಕ ಲಿಯು ಸಾವನ್ನಪ್ಪಿದ್ದಾರೆ. ಕೋವಿಡ್ 19 ವೈರಸ್ ಕಳೆದ ವರ್ಷ ವುಹಾನ್ ನಲ್ಲಿ ಮೊದಲು ಪತ್ತೆಯಾಗಿರುವುದಾಗಿ ನಂಬಲಾಗಿದೆ.
ಈ ವೈರಸ್ ಗೆ ಈವರೆಗೆ 1900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್ ಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ. ಲಿಯು ಝೀಮಿಂಗ್ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾಗಿದ್ದು, ಅವರನ್ನು ರಕ್ಷಿಸುವ ಎಲ್ಲಾ ಪ್ರಯತ್ನವು ವಿಫಲವಾಗಿರುವುದಾಗಿ ಸ್ಟೇಟ್ ಬ್ರಾಡ್ ಕಾಸ್ಟರ್ ಸಿಸಿಟಿವಿ ವರದಿ ಮಾಡಿದೆ.
ಈವರೆಗೆ ಕೊರೊನಾ ವೈರಸ್ ಗೆ ಆರು ಮಂದಿ ವೈದ್ಯಕೀಯ ಕ್ಷೇತ್ರದ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿಗೆ ವೈರಾಣು ಸೋಂಕು ತಲುಲಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ