ಯೋಗ ನಡಿಗೆ : ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಒತ್ತಡಮುಕ್ತ

Team Udayavani, Jun 14, 2021, 6:40 AM IST

ಯೋಗ ನಡಿಗೆ : ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಒತ್ತಡಮುಕ್ತ

ನಾವು ಮುಂಜಾನೆ ಅಥವಾ ಸಂಜೆ ವೇಳೆ ಏನನ್ನಾದರೂ ಯೋಚನೆ ಮಾಡಿಕೊಂಡು ವಾಕಿಂಗ್‌ ಮಾಡುತ್ತೇವೆ. ಇದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವುದರ ಬದಲಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸುವ ಉದ್ದೇಶದೊಂದಿಗೆ ಇತ್ತೀಚಿನ ದಿನಗಳಲ್ಲಿ ಯೋಗ ನಡಿಗೆ ಹೆಚ್ಚು ಪ್ರಚಲಿತದಲ್ಲಿದೆ. ದೇಹ, ಉಸಿರು, ಮನಸ್ಸಿನ ಸಂಯೋಜನೆಯೇ ಯೋಗ. ಉಸಿರಾಟದ ಮೇಲೆ ಹೆಚ್ಚು ಗಮನಕೊಟ್ಟು ಮನಸ್ಸಿನ ಮೇಲಾಗುವ ಒತ್ತಡವನ್ನು ತಗ್ಗಿಸಲು ಮಾಡುವ ವ್ಯಾಯಾಮವೇ ಯೋಗ ನಡಿಗೆ.

ತಂಪಾದ ಮತ್ತು ಶಾಂತವಾದ ಸಮಯದಲ್ಲಿ ಯೋಗ ನಡಿಗೆ ಮಾಡುವುದು ಉತ್ತಮ. ನಡಿಗೆಯ ಮೂಲಕ ಮನಸ್ಸಿನ ಗಮನವನ್ನು ದೇಹದ ಮೇಲೆ ಇರಿಸಿ ದೇಹ ದೊಂದಿಗೆ ನಾವು ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಉಸಿ ರಾಟವನ್ನು ನಮ್ಮ ಕಾಲುಗಳ ಚಲನೆಯ ಮೇಲೆ ಜೋಡಿಸುವು ದರಿಂದ ಮನಸ್ಸು ಶಾಂತ ಸ್ಥಿತಿಗೆ ತಲುಪಲು ಪ್ರೇರಣೆಯಾಗುತ್ತದೆ. ಇದರಿಂದ ಆಲೋಚನೆಗಳು, ಚಿಂತೆಗಳು, ನಕಾ ರಾತ್ಮಕತೆಯು ದೂರವಾಗಿ ನಾವು ಒತ್ತಡಮುಕ್ತ ರಾಗಲು ಸಾಧ್ಯ. ನಿಯಮಿತವಾಗಿ ಯೋಗ ನಡಿಗೆ ಯನ್ನು ಅಭ್ಯಾಸ ಮಾಡಿದರೆ ದೇಹದ ತೂಕ ಇಳಿ ಯುತ್ತದೆ, ರೋಗಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.ಯೋಗದ ಮುಖ್ಯ ಉದ್ದೇಶವೇ ಚಿತ್ತವೃತ್ತಿ ಯನ್ನು ಕಡಿಮೆ ಮಾಡುವುದು. ಯೋಗ ನಡಿಗೆಯಿಂದ ದೇಹದ ಎಲ್ಲ ಚಟುವಟಿಕೆಗಳನ್ನೂ ಸರಿ ಯಾಗಿರಿಸಲು ಸಾಧ್ಯವಾಗುತ್ತದೆ. ಕೆಲವರು ವಾಕಿಂಗ್‌ ಮಾಡಿದ ಮೇಲೆ ಏದುಸಿರು ಬಿಡುತ್ತಾರೆ. ಇದು ಹೃದಯದ ಕಾರ್ಯದಲ್ಲಾಗಿ ರುವ ವ್ಯತ್ಯಾಸದ ಸೂಚಕವಾಗಿದೆ. ವಾಕಿಂಗ್‌ ಮಾಡಿದ ಮೇಲೂ ಹೃದಯದ ಕಾರ್ಯ ಸ್ಥಿರವಾಗಿರಬೇಕಾದರೆ ಮನ ಸ್ಸನ್ನು ಶಾಂತವಾಗಿರಿಸುವುದು ಬಹುಮುಖ್ಯವಾಗು ತ್ತದೆ. ಯೋಗ ನಡಿಗೆಯಿಂದ ಹೃದಯ, ಶ್ವಾಸಕೋ ಶದ ದಕ್ಷತೆ ಹೆಚ್ಚಾಗುತ್ತದೆ. ಮನಸ್ಸು ಸಂಪೂರ್ಣ ಶಾಂತವಾಗಿ ಯೋಗಾಭ್ಯಾಸಕ್ಕೆ ಪೂರಕವಾಗುತ್ತದೆ.

ಆರೋಗ್ಯದ ಗುಟ್ಟು
ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಬೇಕು, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳ ಬೇಕು ಎಂಬುದು ಎಲ್ಲರ ಧ್ಯೇಯವಾಗಿ ಬಿಟ್ಟಿದೆ. ಇದಕ್ಕಾಗಿ ನಾವು ಮೂರು ಮುಖ್ಯ ವಿಷಯಗಳನ್ನು ಅರಿತಿರಬೇಕು. 1- ಅಷ್ಟಾಂಗದಲ್ಲಿ ಶೌಚಾದಿಕ್ರಿಯೆ ಗಳನ್ನು ಪಾಲಿಸಬೇಕು. 2- ಮನಸ್ಸು ಶಾಂತವಾಗಿ ರಬೇಕು. 3- ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಮುಖ್ಯ ಕಾರಣವೇ ಜೀರ್ಣ ಕ್ರಿಯೆಯಲ್ಲಿನ ಸಮಸ್ಯೆ. ಯೋಗ ನಡಿಗೆ, ಆಸನ, ಪ್ರಾಣಾಯಾಮದ ಮೂಲಕ ಇದನ್ನು ಸುಸ್ಥಿತಿಯ ಲ್ಲಿಟ್ಟು ಕೊಳ್ಳಬಹುದು. ಯೋಗ ನಡಿಗೆಯು ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉಳಿದ ಕ್ರಿಯೆಗಳೂ ಉತ್ತಮವಾಗಿರುತ್ತವೆ. ಶ್ವಾಸಕೋಶದ ಸಾಮರ್ಥ್ಯ ಕುಗ್ಗಿದಾಗ ಕಫ‌, ಜ್ವರ, ನೆಗಡಿ ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರಾಟ ಪ್ರಕ್ರಿಯೆ ಸರಿಯಾಗಿ ಆಗದೇ ಇರುವುದು. ಇದನ್ನು ಅನುಲೋಮ, ವಿಲೋಮ, ಉಜ್ರಾಯಿ, ಭಾÅಮರಿ ಪ್ರಾಣಾಯಾಮದ ಮೂಲಕ ಸರಿಪಡಿಸಿಕೊಳ್ಳ ಬಹುದು. ಜತೆಗೆ ಧ್ಯಾನ ಮಾಡುವುದರಿಂದಲೂ ಸ್ವಯಂ ಜಾಗೃತಿ ಉಂಟಾಗಿ ಮನಸ್ಸನ್ನು ಶಾಂತವಾ ಗಿರಿಸಿಕೊಳ್ಳಲು ಸಾಧ್ಯವಿದೆ.

ಪ್ರತಿ ಸಾರ ನಡಿಗೆ (ಹಿಂದಕ್ಕೆ ನಡೆಯುವುದು)
ಯೋಗ ನಡಿಗೆಯಲ್ಲಿ ಇದು ಬರುವುದಿಲ್ಲ. ಇದು ಇತ್ತೀಚಿನ ಕಲ್ಪನೆಯಷ್ಟೇ. ಇದರ ಪ್ರಯೋಜನ ಒಂದೇ ರೀತಿ ಆಗಿರುತ್ತದೆ. ವ್ಯಾಯಾಮದಲ್ಲಾಗುವ ಬೇಸರವನ್ನು ತಪ್ಪಿಸಲು ಇಂಥ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದು ನಿಧಾನ ನಡಿಗೆಯಾದ್ದರಿಂದ ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಪ್ರಯೋಜನಕಾರಿಯಾಗಿದೆ ಮಾತ್ರವಲ್ಲದೆ ಉತ್ತಮ ನಿದ್ರೆಗೂ ಸಹಕಾರಿ. ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಇದು ಪೂರಕ.

ಪ್ರಾರಂಭದಲ್ಲಿ ಆಳವಾದ ಉಸಿರನ್ನು ತೆಗೆದು ಕೊಂಡು ನಿಧಾನಗತಿಯಲ್ಲಿ ನಡೆಯಲು ಪ್ರಾರಂಭಿಸಿ. ಇದರಿಂದ ಮನಸ್ಸು ಶಾಂತಗೊ ಳ್ಳಲು ಆರಂಭಗೊಳ್ಳುತ್ತದೆ. ಹೆಜ್ಜೆಯು ಲಯ ಬದ್ಧವಾಗಿ ಭೂಮಿಯೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತದೆ ಎಂಬುದನ್ನು ಗಮನಿಸಿ. ನಡೆಯುವಾಗ ಭುಜ, ಸೊಂಟದ ವ್ಯಾಯಾಮವೂ ಆಗುವುದರಿಂದ ಭುಜ, ಕುತ್ತಿಗೆ, ಬೆನ್ನು, ಸೊಂಟದ ಭಾಗಗಳಲ್ಲಿರುವ ಒತ್ತಡಗಳು ನಿವಾರಣೆಯಾಗುತ್ತವೆ. ಇನ್ನು ನಡೆಯುತ್ತಿ ರುವಾಗ ಪ್ರಕೃತಿಯ ವಿವಿಧ ಬಣ್ಣಗಳನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ. ಒಂದು ವೇಳೆ ಈ ನಡುವೆ ಮನಸ್ಸು ಬೇರೆಡೆಗೆ ಸೆಳೆಯುತ್ತಿದ್ದರೆ ಆಳವಾದ 3- 4 ದೀರ್ಘ‌ ಉಸಿರು ಬಿಟ್ಟು, ತೆಗೆದುಕೊಳ್ಳುವು ದರಿಂದ ಮನಸ್ಸನ್ನು ಮತ್ತೆ ನಮ್ಮ ನಡಿಗೆಯ ಮೇಲೆ ಕೇಂದ್ರೀಕರಿಸಬಹುದು. ಒಟ್ಟಿನಲ್ಲಿ ಯೋಗ ನಡಿಗೆ ಎಂದರೆ ನಿಮಗೆ ಯಾವುದು ಇಷ್ಟವೋ ಅದನ್ನು ಮಾಡುವುದು. ಈ ಮೂಲಕ ಮನಸ್ಸನ್ನು ಸಕಾರಾತ್ಮಕ ಚಿಂತನೆಗೆ ಪ್ರೇರೇಪಿಸುವುದಾಗಿದೆ.

– ಕುಶಾಲಪ್ಪ ಗೌಡ ಎನ್‌., ಯೋಗ ಚಿಕಿತ್ಸಕ, ಆವಿಷ್ಕಾರ ಯೋಗ/ ಯೋಗ ವಿಜ್ಞಾನ ಜೂನಿಯರ್‌ ರಿಸರ್ಚ್‌ ಫೆಲೋ, ಯೇನಪೊಯ ಡೀಮ್ಡ್ ಯುನಿವರ್ಸಿಟಿ, ಮಂಗಳೂರು

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.