26/11 ದಾಳಿ ನಾಳೆಗೆ 12 ವರ್ಷ ಪೂರ್ಣ: ಗಣ್ಯರಿಂದ ಹುತಾತ್ಮರಿಗೆ ಗೌರವ ಸಮರ್ಪಣೆ
Team Udayavani, Nov 25, 2020, 7:10 PM IST
ಮುಂಬೈ: ಪಾಕಿಸ್ತಾನ ಪ್ರೇರಿತ ಉಗ್ರರು ಮುಂಬೈ ದಾಳಿ ನಡೆಸಿ ಗುರುವಾರಕ್ಕೆ ಸರಿಯಾಗಿ 12 ವರ್ಷ. ಜಗತ್ತಿನಾದ್ಯಂತ 26/11 ದಾಳಿ ಎಂದು ಬಿಂಬಿತವಾಗಿರುವ ಭೀಕರ ಘಟನೆಯಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಆಯೋಜಿಸಿದೆ. ದಕ್ಷಿಣ ಮುಂಬೈನಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ.
ಇದರ ಜತೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶ್‌ಮುಖ್, ಡಿಜಿಪಿ ಸುಭೋದ್ ಕುಮಾರ್ ಜೈಸ್ವಾಲ್, ಮುಂಬೈ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಹುತಾತ್ಮರಿಗೆ ಗೌರವ ಸಲ್ಲಿಸಲಿದ್ದಾರೆ.
26/11 ಘಟನೆಯಲ್ಲಿ ಹುತಾತ್ಮರಾದವರಿಗೆ ಸ್ಮಾರಕ ನಿರ್ಮಿಸುವ ಯೋಜನೆಯೂ ಇದೆ. ಅದಕ್ಕಾಗಿ ಮುಂಬೈನ ಮರೀನ್ ಡ್ರೈವ್ಸ್‌ನ ಪೊಲೀಸ್ ಇಲಾಖೆಗೆ ಸೇರಿದ ಮೈದಾನದಲ್ಲಿ ಸ್ಥಳ ಗುರುತಿಸಲಾಗಿದೆ.
ಇದನ್ನೂ ಓದಿ:ತನ್ನ ಸಹೋದರನ ಸಾವಿಗೆ ಪತಿ ಮಾಡಿದ ಮಾಟವೇ ಕಾರಣ ಎಂದು ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಪತ್ನಿ
2008 ನ.26ರಂದು ಉಗ್ರ ಅಜ್ಮಲ್ ಕಸಬ್ ಸೇರಿದಂತೆ ಹತ್ತು ಮಂದಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿಯನ್ನು ಕೊಂದಿದ್ದರು. ಒಟ್ಟು 60 ಗಂಟೆಗಳ ಕಾಲ ಈ ಹೋರಾಟ ನಡೆದಿತ್ತು. ಕಮಾಂಡೋ ಪಡೆ 9 ಮಂದಿ ಉಗ್ರರನ್ನು ಕೊಂದಿತ್ತು.
ಈ ಕಾರ್ಯಾಚರಣೆಯಲ್ಲಿ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ, ಮೇ.ಸಂದೀಪ್ ಉಣ್ಣಿಕೃಷ್ಣನ್, ಪೊಲೀಸ್ ಇನ್ಸ್ ಪೆಕ್ಟರ್ ವಿಜಯ ಸಾಲಸ್ಕರ್ ಹುತಾತ್ಮರಾಗಿದ್ದರು. ಉಗ್ರ ಕಸಬ್‌ನನ್ನು 2012ರ ನ.21ರಂದು ಗಲ್ಲಿಗೇರಿಸಲಾಗಿತ್ತು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು
ರೈತರು ಕೃಷಿ ಕಾನೂನುಗಳನ್ನು ಮುರಿಯುತ್ತಾರೆ : ಶರದ್ ಪವಾರ್
ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ
ಉತ್ತರ ಭಾರತದಲ್ಲಿ ಮುಂದುವರಿದ ಹಿಮಪಾತ; ಕೆಲವೆಡೆ ಆರೆಂಜ್ ಅಲರ್ಟ್
ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ “AAP” ಅಖಾಡಕ್ಕೆ; 160 ಅಭ್ಯರ್ಥಿ ಹೆಸರು ಘೋಷಣೆ