ಹೈದ್ರಾಬಾದ್ ಟು ಗಂಗಾವತಿ: ಬಸ್ ಪ್ರಯಾಣದಲ್ಲಿ ಕೋಳಿಗೂ 463 ರೂ. ಟಿಕೆಟ್!
Team Udayavani, Nov 29, 2021, 11:03 AM IST
ಕುಷ್ಟಗಿ: ಹೈದ್ರಾಬಾದ್ ನಿಂದ ಗಂಗಾವತಿಗೆ ಬಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕೋಳಿಯೊಂದು ಅರ್ಧ ಟಿಕೆಟ್ ನಲ್ಲಿ ಪ್ರಯಾಣಿಸಿದ್ದು, ಇದಕ್ಕೆ ಕೋಳಿ ಮಾಲೀಕ 463 ಪ್ರಯಾಣ ವೆಚ್ಚ ಭರಿಸಿದ್ದಾನೆ.
ಹೈದ್ರಾಬಾದ್ ನಿಂದ ಗಂಗಾವತಿಗೆ ವ್ಯಕ್ತಿಯೋರ್ವ ಸಾಕು ಕೋಳಿಯೊಂದಿಗೆ ಪ್ರಯಾಣಿಸಿದ್ದು, ನಿರ್ವಾಹಕ ಕೋಳಿ ಪ್ರಯಾಣಕ್ಕೆ ಅರ್ಧ ಟಿಕೆಟ್ ನೀಡಿದ್ದಾನೆ.
ಸಾಕು ಪ್ರಾಣಿಗಳು ಬಸ್ಸಿನಲ್ಲಿ ಪ್ರಯಾಣಿದರೆ ಅರ್ಧ ಟಿಕೆಟ್ ಚಾರ್ಜ್ ಮಾಡುವ ಆದೇಶವಿದೆ ಎನ್ನಲಾಗುತ್ತಿದೆ. ಕೋಳಿ ದರ 500-600 ರೂ. ಇದ್ದು ಕೋಳಿ ಮಾಲೀಕ 463 ರೂ. ಪ್ರಯಾಣ ವೆಚ್ಚ ಭರಿಸಿರುವುದು ವಿಶೇಷವಾಗಿದೆ.