ಗ್ರೇಟ್‌ ಗಾವಸ್ಕರ್‌ ಟೆಸ್ಟ್‌ 50 :Little Master‌ ಟೆಸ್ಟ್‌ ಪ್ರವೇಶಕ್ಕೆ ತುಂಬಿತು 50 ವರ್ಷ

Team Udayavani, Mar 6, 2021, 7:00 AM IST

ಗ್ರೇಟ್‌ ಗಾವಸ್ಕರ್‌ ಟೆಸ್ಟ್‌ 50 :Little Master‌ ಟೆಸ್ಟ್‌ ಪ್ರವೇಶಕ್ಕೆ ತುಂಬಿತು 50 ವರ್ಷ

ಕಳೆದ 70ರ ದಶಕ ಭಾರತೀಯ ಕ್ರಿಕೆಟಿನ “ಸುವರ್ಣ ಯುಗ’ವಾಗಿ ದಾಖಲಾಗಿದೆ. ಸುನೀಲ್‌ ಗಾವಸ್ಕರ್‌ ಎಂಬ ಅಸಾಮಾನ್ಯ ಬ್ಯಾಟ್ಸ್‌ಮನ್‌ ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ದಶಕವದು. ದಾಖಲೆಗಳ ಮೇಲೆ ದಾಖಲೆ ಪೇರಿಸುತ್ತ, ಅದೆಷ್ಟೋ ವಿಶ್ವದಾಖಲೆಗಳನ್ನು ಪೋಣಿಸುತ್ತ ಜಾಗತಿಕ ಕ್ರಿಕೆಟಿನ ಸಾರ್ವಭೌಮನಾಗಿ ಮೆರೆದ ಹೆಗ್ಗಳಿಕೆ ಈ “ಲಿಟ್ಲ ಮಾಸ್ಟರ್‌’ನದ್ದು. ಗಾವಸ್ಕರ್‌ ಸಾಧನೆಯಿಂದ ಭಾರತದ ಕ್ರಿಕೆಟ್‌ ಕೂಡ ಶ್ರೀಮಂತಗೊಂಡಿತು. ಇವರ ವರ್ಣರಂಜಿತ ಟೆಸ್ಟ್‌ ಬದುಕಿಗೆ ಶನಿವಾರ 50 ವರ್ಷ ತುಂಬಲಿದೆ. 1971ರ ಮಾರ್ಚ್‌ 6ರಂದು ಇವರ ಕ್ರಿಕೆಟ್‌ ರಂಗಪ್ರವೇಶವಾಗಿತ್ತು.

ವಿಂಡೀಸ್‌ ದೈತ್ಯರೇ ಗಢಗಢ!
ಆ ಕಾಲದಲ್ಲಿ ವೆಸ್ಟ್‌ ಇಂಡೀಸ್‌ ದೈತ್ಯ ತಂಡ. ಬ್ಯಾಟ್ಸ್‌ ಮನ್‌ಗಳ ದೇಹವನ್ನೇ ಗುರಿಯಾಗಿಸಿ ಚೆಂಡನ್ನೆಸೆಯುವ ಘಾತಕ ವೇಗಿಗಳಿಂದ ವಿಂಡೀಸ್‌ ಅತ್ಯಂತ ಅಪಾಯಕಾರಿಯಾಗಿ ಬೆಳೆದು ನಿಂತಿತ್ತು. ಈ ಕ್ರಿಕೆಟ್‌ ದೈತ್ಯರ ನಾಡಿಗೆ 1971ರಲ್ಲಿ ಭಾರತ ಪ್ರವಾಸ ಹೊರಟಾಗ “ವಾಮನಮೂರ್ತಿ’ ಸುನೀಲ್‌ ಮನೋಹರ್‌ ಗಾವಸ್ಕರ್‌ ಕೂಡ ಆಯ್ಕೆಯಾಗಿದ್ದರು. ಆಗ ಅಜಿತ್‌ ವಾಡೇಕರ್‌ ಸಾರಥ್ಯದ ಭಾರತ ಅಲ್ಲಿ ಸರಣಿ ಗೆಲ್ಲಲಿದೆ, ಗಾವಸ್ಕರ್‌ ರನ್‌ ಪ್ರವಾಹ ಹರಿಸಲಿದ್ದಾರೆ ಎಂಬುದೆಲ್ಲ ಊಹಿಸಲೂ ಆಗದ ಸಂಗತಿಗಳಾಗಿದ್ದವು.

4 ಪಂದ್ಯಗಳಿಂದ 774 ರನ್‌!
ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಾವಸ್ಕರ್‌ ಆಡುವ ಬಳಗದಲ್ಲಿರಲಿಲ್ಲ. ಪೋರ್ಟ್‌ ಆಫ್ ಸ್ಪೇನ್‌ನ 2ನೇ ಪಂದ್ಯ ದಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಿದರು. ಅಲ್ಲಿಗೆ ಅದೃಷ್ಟವೊಂದು ಭಾರತ ತಂಡಕ್ಕೆ ಒಲಿದು ಬಂತು. ಅಶೋಕ್‌ ಮಂಕಡ್‌ ಜತೆ ಇನ್ನಿಂಗ್ಸ್‌ ಆರಂಭಿಸಿದ ಗಾವಸ್ಕರ್‌ 65 ಮತ್ತು ಅಜೇಯ 67 ರನ್‌ ಬಾರಿಸಿ ಪರಾಕ್ರಮ ತೋರಲಾರಂಭಿಸಿದರು. ಭಾರತ ಈ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದಿತು. ಇದು ಕೆರಿಬಿಯನ್‌ ನಾಡಿನಲ್ಲಿ ಭಾರತಕ್ಕೆ ಒಲಿದ ಮೊದಲ ಜಯ. ಮುಂದೆ 5 ಪಂದ್ಯಗಳ ಸರಣಿ ಕೂಡ 1-0 ಅಂತರದಿಂದ ಭಾರತದ ವಶವಾಯಿತು. ವಿಂಡೀಸ್‌ ನೆಲದಲ್ಲಿ ಭಾರತ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿತ್ತು.
ಈ ಯಶಸ್ಸಿಗೆಲ್ಲ ಕಾರಣ ಸುನೀಲ್‌ ಗಾವಸ್ಕರ್‌. ಆಡಿದ 4 ಟೆಸ್ಟ್‌ಗಳಲ್ಲಿ 3 ಶತಕ, ಒಂದು ದ್ವಿಶತಕ ಸಹಿತ 774 ರನ್‌ (ಸರಾಸರಿ 154.80) ಪೇರಿಸಿದ ಅಮೋಘ ಸಾಧನೆ ಈ ಮುಂಬೈಕರ್‌ನದ್ದಾಗಿತ್ತು. ಮುಂದಿನ 17 ವರ್ಷಗಳ ಕಾಲ ಅವರು ಜಾಗತಿಕ ಟೆಸ್ಟ್‌ ಕ್ರಿಕೆಟಿನ ಅನಭಿಷಕ್ತ ಸಾಮ್ರಾಟನಾಗಿ ಮೆರೆದರು.

ಆ ಕಾಲದಲ್ಲಿ ಯಾವುದೇ ಅಂಗರಕ್ಷಕ ಸಾಧನಗಳಿರಲಿ, ಹೆಲ್ಮೆಟ್‌ ಕೂಡ ಇರಲಿಲ್ಲ. ಹೋಲ್ಡರ್‌, ಗಾರ್ನರ್‌, ರಾಬಟ್ಸ್‌, ಮಾರ್ಷಲ್‌, ಹೋಲ್ಡಿಂಗ್‌ ಅವರಂಥ ವೇಗಿಗಳ ಎಸೆತಗಳನ್ನು ತಡೆದು ನಿಲ್ಲುವುದು ಸುಲಭದ ಮಾತಾಗಿರಲಿಲ್ಲ. ಕೇವಲ ದೊಡ್ಡ ಟೊಪ್ಪಿಯೊಂದನ್ನೇ ಧರಿಸಿದ ಗಾವಸ್ಕರ್‌ ಜಗತ್ತಿನ ಎಲ್ಲ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ ಸಾಹಸಗಾಥೆ ಇಂದಿನ ಪೀಳಿಗೆಗೂ ರೋಮಾಂಚನ ಮೂಡಿ ಸುತ್ತದೆ. ನಾಯಕನಾಗಿ, ವೀಕ್ಷಕ ವಿವರಣಕಾರನಾಗಿ, ಕ್ರಿಕೆಟ್‌ ವಿಶ್ಲೇಷಕ ನಾಗಿಯೂ ಗಾವಸ್ಕರ್‌ ಬಹಳ ಎತ್ತರ ತಲುಪಿದ್ದಾರೆ.

ಪುಟಾಣಿ ಕಂದ ಅದಲು ಬದಲಾದಾಗ…!
ಗಾವಸ್ಕರ್‌ ಹುಟ್ಟಿನಿಂದಲೇ ಸುದ್ದಿಯಾದ ಕಥನ ಬಹಳ ಕುತೂಹಲಕರ. 1949ರ ಜುಲೈ 10ರಂದು ಮುಂಬಯಿಯ ಆಸ್ಪತ್ರೆಯಲ್ಲಿ ಗಾವಸ್ಕರ್‌ ಜನನವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರ ಕುಟುಂಬದವರು ಬಂದು ನೋಡುವಾಗ ಏನೋ ಅನುಮಾನ. ತಾಯಿಯ ಪಕ್ಕದಲ್ಲಿದ್ದ ಮಗು ತಮ್ಮದಲ್ಲ ಎಂಬ ಶಂಕೆ ಮೂಡಿತು. ಅದು ನಿಜವೂ ಆಯಿತು. ಹುಡುಕುವಾಗ ಪುಟಾಣಿ ಗಾವಸ್ಕರ್‌ ಮೀನುಗಾರ ತಾಯಿಯೊಬ್ಬರ ಪಕ್ಕ ಇದ್ದದ್ದು ಕಂಡುಬಂತು. ಮೈಮೇಲಿನ ಮಚ್ಚೆಯೊಂದರಿಂದ ಇದನ್ನು ಪತ್ತೆಹಚ್ಚಲಾಯಿತು. ದಾದಿ ಮಕ್ಕಳಿಗೆ ಸ್ನಾನ ಮಾಡಿಸಿ ತರುವಾಗ ಈ ಎಡವಟ್ಟು ಸಂಭವಿಸಿತ್ತು! ಅಕಸ್ಮಾತ್‌ಇದು ಅರಿಯದೇ ಹೋಗಿದ್ದರೆ?!

70ರ ದಶಕದ ಆರಂಭದಲ್ಲಿ ನಟನೆಗೆ ಅಮಿತಾಬ್‌, ಗಾಯನಕ್ಕೆ ಕಿಶೋರ್‌ ಕುಮಾರ್‌ ಖ್ಯಾತರಾಗಿದ್ದರು. ಇವರ ಶ್ರೇಣಿಯಲ್ಲಿ ನಾನೂ ಇದ್ದೇನೆ ಎಂದು ವಿನೀತನಾಗಿ ಭಾವಿಸುತ್ತೇನೆ.
– ಗಾವಸ್ಕರ್‌

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.