ಅಮೆರಿಕದಲ್ಲಿ ಶೂಟೌಟ್: ಭಾರತೀಯ ಮಹಿಳೆ ಸೇರಿ ಎಂಟು ಮಂದಿ ಸಾವು
Team Udayavani, Apr 16, 2021, 11:03 PM IST
ಇಂಡಿಯಾನಾಪೊಲೀಸ್/ನ್ಯೂಯಾರ್ಕ್: ಅಮೆರಿಕದ ಇಂಡಿಯಾನಾ ಪ್ರಾಂತ್ಯದ ಇಂಡಿಯಾನಾಪೊಲೀಸ್ ನಗರದಲ್ಲಿ ಗುರುವಾರ ತಡರಾತ್ರಿ ನಡೆದ ಶೂಟೌಟ್ನಲ್ಲಿ ಎಂಟು ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ ಭಾರತೀಯ ಮೂಲದ ಮಹಿಳೆ ಕೂಡ ಅಸುನೀಗಿದ್ದಾರೆ ಎಂದು ಅವರ ಬಂಧು ನ್ಯೂಯಾರ್ಕ್ನಲ್ಲಿ ತಿಳಿಸಿದ್ದಾರೆ.
“”ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ವಕ್ತಾರ ಘಟನೆ ಬಗ್ಗೆ ಮಾತನಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿಯೇ ಇರುವ ಫೆಡ್ಎಕ್ಸ್ ಕಂಪನಿಯ ಆವರಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಕನಿಷ್ಠ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ. “”ಯಾವ ಕಾರಣಕ್ಕಾಗಿ ಗುಂಡಿನ ಹಾರಾಟ ನಡೆದಿದೆ ಮತ್ತು ಕೃತ್ಯ ನಡೆಸಿದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ
ಈ ಘಟನೆಯಲ್ಲಿ ಭಾರತೀಯ ಮೂಲದ ಮಹಿಳೆ ಅಸುನೀಗಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್ನಲ್ಲಿರುವ ಅವರ ಬಂಧು ಪರ್ಮಿಂದರ್ ಸಿಂಗ್ ಮಾತನಾಡಿ ನಮ್ಮ ಬಂಧು ಕಾರ್ನಲ್ಲಿ ಕುಳಿತಿದ್ದ ವೇಳೆ ಫೋನ್ ಮಾಡಿದ್ದಳು. ನಿದ್ರೆಯಲ್ಲಿದ್ದ ಕಾರಣ ಫೋನ್ ಬಂದದ್ದು ಗೊತ್ತಾಗಲಿಲ್ಲ. ಘಟನೆ ನಡೆದಾಗ ಆಕೆ ಅಲ್ಲಿಯೇ ಇದ್ದಳು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ