ಉಜಿರೆ: ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ: ಪೊಲೀಸರಿಂದ ಶೋಧ ಕಾರ್ಯ
Team Udayavani, Dec 17, 2020, 7:48 PM IST
ಬೆಳ್ತಂಗಡಿ: ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಅಪಹರಣ ನಡೆಸಿದ ಘಟನೆ ಉಜಿರೆಯಲ್ಲಿ ನಡೆದಿದೆ.
ಉಜಿರೆ ಉದ್ಯಮಿಯೋರ್ವರ 8 ವರ್ಷದ ಮಗು ಸಂಜೆ 6.30ರ ಸುಮಾರಿಗೆ ಉಜಿರೆ ರಥಬೀದಿ ಸಮೀಪ ಆಟವಾಡುತ್ತಿರುವ ಸಂದರ್ಭ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿದ ಕುರಿತು ಮಾಹಿತಿ ಲಭ್ಯವಾಗಿದೆ.
ಸ್ಥಳೀಯರ ಹೇಳಿಕೆಯಂತೆ ಅಪಹರಣಕಾರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ಹೇಳಲಾಗಿದೆ ಅಲ್ಲದೆ ಚಾರ್ಮಾಡಿ ರಸ್ತೆಯಾಗಿ ತೆರಳಿರುವ ಕುರಿತು ಮಾಹಿತಿ ರವಾನೆಯಾಗುತ್ತಿದೆ.
ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಮಗು ಅಪಹರಣ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಲಾರಂಬಿಸಿದೆ.
ಇದನ್ನೂ ಓದಿ:ಕೋವಿಡ್ ಸಲಹಾ ಸಮಿತಿಯ ವರದಿ ಆಧರಿಸಿ ಶಾಲಾರಂಭಕ್ಕೆ ಕ್ರಮ : ಸುರೇಶ್ ಕುಮಾರ್