ಬಂಡಾಯ; ಠಾಕ್ರೆ ಸರ್ಕಾರ ಪತನವಾಗಲಿದೆಯೇ? ಎಂವಿಎಸ್ V/s ಬಿಜೆಪಿ ನಂಬರ್ ಗೇಮ್ ಲೆಕ್ಕಾಚಾರವೇನು
ವಿಧಾನಸಭೆಯಲ್ಲೂ ಮಹಾ ವಿಕಾಸ್ ಅಘಾಡಿ ಸರ್ಕಾರದ ಬಲ 131ಕ್ಕೆ ಇಳಿಕೆಯಾಗಲಿದೆ.
Team Udayavani, Jun 21, 2022, 3:56 PM IST
ಮುಂಬಯಿ: ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಹಾಲಿ 21 ಶಿವಸೇನಾ ಶಾಸಕರೊಂದಿಗೆ ಸಚಿವ ಏಕನಾಥ ಶಿಂಧೆ ಗುಜರಾತ್ ನ ಸೂರತ್ ನಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಪತನದ ಭೀತಿ ಎದುರಾಗಿದೆ.
ನಂಬರ್ ಗೇಮ್!
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ, ಓರ್ವ ಶಾಸಕರು ನಿಧನರಾಗಿದ್ದಾರೆ. ಇದರೊಂದಿಗೆ ವಿಧಾನಸಭೆ ಶಾಸಕರ ಸಂಖ್ಯೆ 287ಕ್ಕೆ ಇಳಿಕೆಯಾಗಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 144 ಶಾಸಕರ ಬೆಂಬಲದ ಅಗತ್ಯವಿದೆ.
ಇದನ್ನೂ ಓದಿ:ಪ್ರಧಾನಿ ಮೇಲೆ ನಂಬಿಕೆ ಇಡಿ-ಅಗ್ನಿಪಥ್ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ:NSA ಅಜಿತ್ ದೋವಲ್
ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸೇರಿ 152 ಶಾಸಕರನ್ನು ಹೊಂದಿದೆ. ಶಿವಸೇನಾದಲ್ಲಿ 55 ಶಾಸಕರಿದ್ದು, ಇದರಲ್ಲಿ 21 ಮಂದಿ ಶಾಸಕರು ಹಾಗೂ ಪಕ್ಷೇತರ ಶಾಸಕರು ಸೂರತ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಂದು ವೇಳೆ 21 ಶಾಸಕರು ಹಾಗೂ ಸಚಿವ ಶಿಂಧೆ ರಾಜೀನಾಮೆ ನೀಡಿದಲ್ಲಿ ಶಿವಸೇನಾದ ಶಾಸಕರ ಸಂಖ್ಯಾ ಬಲ 34ಕ್ಕೆ ಕುಸಿಯಲಿದೆ.
ವಿಧಾನಸಭೆಯಲ್ಲೂ ಮಹಾ ವಿಕಾಸ್ ಅಘಾಡಿ ಸರ್ಕಾರದ ಬಲ 131ಕ್ಕೆ ಇಳಿಕೆಯಾಗಲಿದೆ. 22 ಶಾಸಕರು ರಾಜೀನಾಮೆ ನೀಡಿದಲ್ಲಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 133 ಶಾಸಕರ ಬೆಂಬಲದ ಅಗತ್ಯವಿದೆ.
ಈ ಬೆಳವಣಿಗೆ ನಂತರ ಬಿಜೆಪಿ ಶಾಸಕರ ಬೆಂಬಲಿಗರ ಸಂಖ್ಯೆ 135ಕ್ಕೆ ಏರಿಕೆಯಾಗಲಿದೆ. ಇದು ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯಾಗಿದೆ. ಆದರೆ ಒಂದು ವೇಳೆ ಶಿವಸೇನಾದ 21 ಶಾಸಕರು ಪಕ್ಷಾಂತರ ಮಾಡಲು ಬಯಸಿದರೆ ಆಗ ಪಕ್ಷಾಂತರ ನಿಗ್ರಹ ಕಾಯ್ದೆಯಡಿ ರಾಜೀನಾಮೆ ನೀಡಬೇಕಾಗುತ್ತದೆ. ನಂತರ 21 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದು ಪುನರಾಯ್ಕೆಗೊಳ್ಳಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!
ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ
ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣವಚನ ಸ್ವೀಕಾರ
ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!