
ವಾಹನ ಜಪ್ತಿಗೆ ರಿಕವರಿ ಏಜೆಂಟ್ ಬಳಸುವಂತಿಲ್ಲ
Team Udayavani, May 26, 2023, 7:48 AM IST

ಪಾಟ್ನಾ: ತಿಂಗಳ ಕಂತಿನಲ್ಲಿ ಬ್ಯಾಂಕ್‌ಗಳಿಂದ ವಾಹನ ಸಾಲ ಪಡೆದ ಗ್ರಾಹಕರು ಸರಿಯಾಗಿ ಕಂತಿನ ಹಣ ಪಾವತಿಸಿಲ್ಲವೆಂದು ರಿಕವರಿ ಏಜೆಂಟ್‌ಗಳ ಮೂಲಕ ಅವರ ವಾಹನ, ಕಾರುಗಳನ್ನು ಜಪ್ತಿಗೊಳಿಸುವ ಹಕ್ಕು ಬ್ಯಾಂಕ್‌ಗಳಿಗೆ ಅಥವಾ ಯಾವುದೇ ಹಣಕಾಸು ಸಂಸ್ಥೆಗೆ ಇಲ್ಲ.
ಇದು ಕಾನೂನು ಬಾಹಿರವೆಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಅಲ್ಲದೇ, ಈ ರೀತಿ ವರ್ತಿಸಿದ್ದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ತಲಾ 50,000 ರೂ.ಗಳ ದಂಡವನ್ನೂ ವಿಧಿಸಿದೆ. ಹಣಕಾಸು ಸಂಸ್ಥೆಗಳ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗ್ರಾಹಕರ ವಾಹನ ಜಪ್ತಿಗೆ ರಿಕವರಿ ಏಜೆಂಟ್‌ಗಳನ್ನು ಬಳಸುವುದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಸ್ಥಿ ಸಾಲ ಮರುಪಾವತಿಗಾಗಿಯೇ ಇರುವ ನಿಯಮಗಳ ಅನ್ವಯವಷ್ಟೇ ಬ್ಯಾಂಕ್‌ಗಳು ವಸೂಲಾತಿ ನಡೆಸಬೇಕು ಎಂದಿದ್ದಾರೆ. ಜತೆಗೆ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಜತಗೆ ಈ ರೀತಿ ವ್ಯವಹರಿಸುವ ರಿಕವರಿ ಏಜೆಂಟ್‌ಗಳ ವಿರುದ್ಧವೂ ಕೇಸು ದಾಖಲಿಸಲು ನ್ಯಾಯಪೀಠ ಪೊಲೀಸರಿಗೆ ಆದೇಶಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ

Madhya Pradesh: ಜೀಪ್ ಮೇಲೆ ಉರುಳಿ ಬಿದ್ದ ಸಿಮೆಂಟ್ ಬಲ್ಕರ್ ವಾಹನ; 7 ಮಂದಿ ಮೃತ್ಯು

500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
