ಪೋಟ್ಯಾಷ್ ರಸಗೊಬ್ಬರದ ದರದಲ್ಲಿ ಕೊಂಚ ಏರಿಕೆ : ಕೃಷಿ ಇಲಾಖೆ
Team Udayavani, Jan 10, 2022, 6:53 PM IST
ಬೆಂಗಳೂರು:ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಬಂದರಿನಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣ ಪೋಟ್ಯಾಷ್ ರಸಗೊಬ್ಬರದ ಬೆಲೆ ಕೊಂಚ ಏರಿಕೆಯಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಎಮ್.ಒ.ಪಿ ರಸಗೊಬ್ಬರದ ಪರಿಷ್ಕೃತ ಗರಿಷ್ಕೃ ಮಾರಾಟ ಬೆಲೆ ಪ್ರತಿ ಚೀಲಕ್ಕೆ ರೂ .1700. ದೇಶದಲ್ಲಿ ಶೇಕಡ 100 ರಷ್ಟು ಎಮ್.ಒ.ಪಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದ್ದು ರಸಗೊಬ್ಬರದ ಗರಿಷ್ಠ ಮಾರಾಟ ದರವನ್ನು ಸರಬರಾಜು ಸಂಸ್ಥೆಗಳಿಂದಲೇ ನಿಗಧಿ ಪಡಿಸಲಾಗುತ್ತದೆ . ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಎಮ್.ಒ.ಪಿ ರಸಗೊಬ್ಬರದ ಬೆಲೆಯು ಸಹ ಏರಿಕೆಯಾಗಿರುತ್ತದೆ.ಇದರಿಂದ ಎಮ್.ಒ.ಪಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯವಾಗಿರುತ್ತದೆ . ಆದಾಗ್ಯೂ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸರಬರಾಜುದಾರರೊಂದಿಗೆ ಎಮ್.ಒ.ಪಿ ರಸಗೊಬ್ಬರ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತದೆ . ಪ್ರಸ್ತುತವಿರುವ ರಸಗೊಬ್ಬರದ ವಿನಿಮಯ ದರ , ಹೊಸ ಆಮದು ಬೆಲೆ , ಕಸ್ಟಮ್ಸ್ ಸುಂಕ ಹಾಗೂ ಜಿ.ಎಸ್.ಟಿ , ಬಂದರಿನಲ್ಲಿ ರಸಗೊಬ್ಬರದ ನಿರ್ವಹಣೆಯ ಇತರ ವೆಚ್ಚಗಳು ಸೇರಿ ಒಟ್ಟು ದರವು ಪ್ರತಿ ಟನ್ ಗೆ ರೂ . 40,147 ಎಂದು ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರವು ಪುತಿ ಟನ್ ಎಂ.ಒ.ಪಿ ಗೆ ನೀಡುವ ರಿಯಾಯಿತಿ ದರ ರೂ . 6,070 ಹೊರತು ಪಡಿಸಿದಲ್ಲಿ ಪ್ರತಿ ಟನ್ನಿನ ಮಾರಾಟ ದರವು ರೂ . 34,000 ಆಗುತ್ತದೆ ಹಾಗಾಗಿ ಪ್ರತಿ ಚೀಲದ ದರವು ರೂ . 1700 ಆಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು