ಒಎಲ್‌ಎಕ್ಸ್ ನಲ್ಲಿ ಹಾಕಿದ ವಾಹನ ಕದಿಯುತ್ತಿದ್ದ ಭೂಪ
ಮಾಲೀಕರನ್ನು ಯಾಮಾರಿಸಿ ವಾಹನ ಸಮೇತ ಪರಾರಿ
Team Udayavani, Jun 17, 2022, 9:53 AM IST
ಬೆಂಗಳೂರು: ಒಎಲ್‌ಎಕ್ಸ್ ಆ್ಯಪ್‌ನಲ್ಲಿ ಜಾಹೀರಾತು ನೀಡುವ ವಾಹನ ಮಾಲೀಕರನ್ನು ವಂಚಿಸಿ ವಾಹನ ಸಮೇತ ಪರಾರಿಯಾಗುತ್ತಿದ್ದ ಆರೋಪಿಯೊಬ್ಬ ವಿದ್ಯಾರಣ್ಯ ಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕನಕಪುರ ತಾಲೂಕಿನ ಮಂಜುನಾಥ್ ಅಲಿಯಾಸ್ ಒಎಲ್‌ಎಕ್ಸ್ ಮಂಜ (30) ಬಂಧಿತ. ಆರೋಪಿಯಿಂದ 3 ಕಾರುಗಳು, 1 ಬೈಕ್, 5 ಮೊಬೈಲ್‌ಗಳು, ನಕಲಿ ನಂಬರ್ ಪ್ಲೇಟ್‌ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ವಿದ್ಯಾರಣ್ಯಪುರ ನಿವಾಸಿ ಆದರ್ಶ್ ಎಂಬವರು ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಾಟದ ಬಗ್ಗೆ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ ಆರೋಪಿ, ಮಾಲೀಕರನ್ನು ಸಂಪರ್ಕಿಸಿ ಟೆಸ್ಟ್ ಡ್ರೈವ್‌ಗೆಂದು ಕೊಂಡೊಯ್ದು ಪರಾರಿಯಾಗಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಂಚನೆ ಹೇಗೆ?: ಅಪಾರ್ಟ್‌ಮೆಂಟ್‌ಗಳ ಹಾಗೂ ಇತರೆಡೆ ಭದ್ರತಾ ಸಿಬ್ಬಂದಿ, ನಿರುದ್ಯೋಗಿಗಳನ್ನು ಸಂಪರ್ಕಿಸಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, ಅವರ ಆಧಾರ್ ಕಾರ್ಡ್ ಪಡೆದುಕೊಳ್ಳುತ್ತಿದ್ದು, ಅವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದ. ಬಳಿಕ ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳನ್ನು ಖರೀದಿಸಿ ವಂಚನೆ ಎಸಗುತ್ತಿದ್ದ ಎಂಬುದು ಗೊತ್ತಾಗಿದೆ. ಇನ್ನು ಒಎಲ್‌ಎಕ್ಸ್ ಆ್ಯಪ್‌ನಲ್ಲಿ ಕಾರು, ಬೈಕ್‌ಗಳ ಮಾರುವ ಜಾಹಿರಾತು ಹಾಕುವವರನ್ನು ಸಂಪರ್ಕಿಸಿ, ತಾನೂ ವಾಹನ ಮಾರಾಟ ಡೀಲರ್ ಆಗಿದ್ದು, ಉತ್ತಮ ಬೆಲೆಗೆ ಮಾರಾಟ ಮಾಡಿಸುತ್ತೇನೆ ಎಂದು ನಂಬಿಸಿ, ವಾಹನ ದಾಖಲೆಗಳನ್ನು ಪಡೆದುಕೊಂಡು ಮುಂಗಡ ಹಣ ಕೊಡುತ್ತಿದ್ದ. ಅಲ್ಲದೆ, ಆ್ಯಪ್‌ನಲ್ಲಿ ಹಾಕಿರುವ ಜಾಹೀರಾತು ಡೀಲಿಟ್ ಮಾಡಿಸುತ್ತಿದ್ದ. ಅನಂತರ ಅದೇ ಮಾಲೀಕರ ಹೆಸರಿನಲ್ಲಿ ಒಎಲ್‌ಎಕ್ಸ್‌ನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ. ಅದನ್ನು ಕಂಡ ಗ್ರಾಹಕರು ಆರೋಪಿಯನ್ನು ಸಂಪರ್ಕಿಸಿದಾಗ ತುರ್ತು ಕಾರಣಕ್ಕೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದು ಹಣ ಪಡೆದು, ಫಾರಂ ನಂ 29,30 ತರುವುದಾಗಿ ಹೇಳಿ ಗಮನ ಬೇರೆಡೆ ಹಣದ ಸಮೇತ ಪರಾರಿಯಾಗುತ್ತಿದ್ದ.
ಇದನ್ನೂ ಓದಿ:ಬಸ್ ಗಳನ್ನು ಸುಡುವ ಜನರು ಸಶಸ್ತ್ರ ಪಡೆಗಳಿಗೆ ಯೋಗ್ಯರಲ್ಲ: ಮಾಜಿ ಸೇನಾ ಮುಖ್ಯಸ್ಥ
ಈತನ ವಿಚಾರಣೆಯಲ್ಲಿ ಇದೇ ರೀತಿ ಒಎಲ್‌ಎಕ್ಸ್ ಗ್ರಾಹಕರನ್ನು ಈ ಹಿಂದೆಯೂ ಹತ್ತಾರು ಬಾರಿ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ, ಜಯನಗರ, ಮಹದೇಶ್ವರ, ಕೋಣನಕುಂಟೆ, ಬೇಗೂರು, ರಾಜರಾಜೇಶ್ವರಿನಗರ, ಹೆಬ್ಬಗೋಡಿ ಮೈಸೂರಿನ ಲಕ್ಷ್ಮೀಪುರ, ಚನ್ನರಾಯ ಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಆರೋಪಿ ಈ ರೀತಿಯ ವಂಚಿಸಿದ ವಾಹನಗಳಲ್ಲಿ ಕಳ್ಳತನ, ದರೋಡೆ ಕೂಡ ಮಾಡಿದ್ದಾನೆ. ವಂಚಿಸಿದ ಹಣದಲ್ಲಿ ಕಾರುಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ಬೈಕ್‌ಗಳನ್ನು ಖರೀದಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೇಗುಲದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಮತ್ತೆರಡು ದೇವಸ್ಥಾನದಲ್ಲಿ ಕಳವುಗೈದಿದ್ದನಂತೆ
ಉಳ್ಳಾಲ : ಕಿಂಡರ್ ಗಾರ್ಟನ್ ಶಿಕ್ಷಕಿ ಮೃತದೇಹ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆ
ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!
ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ
ಕುಷ್ಟಗಿ : ಬೆಳ್ಳಂಬೆಳಗ್ಗೆ ಡೀಸಲ್ ಟ್ಯಾಂಕರ್ ಢಿಕ್ಕಿ : ಕುರಿಗಾಹಿ ಸೇರಿ 18 ಕುರಿಗಳು ಸಾವು