ಆತ್ಮಹತ್ಯೆಗೆ ನಿರ್ಧರಿಸಿದ್ದ ಆರೋಪಿ ಆ್ಯಸಿಡ್‌ ದಾಳಿಕೋರ

7 ವರ್ಷಗಳಿಂದ ಪ್ರೀತಿಸುತ್ತಿದ್ದೇನೆ, ವಿವಾಹಕ್ಕೆ ಯುವತಿಯ ಒಪ್ಪಿಸಿ ಎಂದ ಆ್ಯಸಿಡ್‌ ನಾಗೇಶ!

Team Udayavani, May 15, 2022, 10:04 AM IST

1nagesh

ಬೆಂಗಳೂರು: ಏಪ್ರಿಲ್ 28 ರಂದು ಆ್ಯಸಿಡ್‌ ದಾಳಿ ನಡೆಸಿ ಪರಾರಿಯಾಗಿದ್ದ ನಾಗೇಶ್‌ 16 ದಿನಗಳ ನಂತರ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ನಾಗೇಶ್‌ನನ್ನು ವಿಚಾರಣೆಗೊಳಪಸಿರುವ ವೇಳೆ ಒಂದೊಂದೆ ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ.

ಈ ಹಿಂದೆ ಆರೋಪಿಯು ಗೃಹ ಕೆಲಸಗಳ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಯೊಂದರಲ್ಲಿ ನಾಗೇಶ್‌ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಆದರೆ, ಆ ಸಂಸ್ಥೆಯ ಲೆಟರ್‌ಹೆಡ್‌ನ್ನು ದುರ್ಬಳಕೆ ಮಾಡಿಕೊಂಡು ಪೀಣ್ಯದಲ್ಲಿರುವ ಲ್ಯಾಬೊರೇಟರಿಯಿಂದ 10 ಲೀಟರ್‌ ಆ್ಯಸಿಡ್‌ ಖರೀದಿಸಿದ್ದ ಎಂದು ತಿಳಿದು ಬಂದಿದೆ.

ವಿವಾಹಕ್ಕೆ ಯುವತಿಯ ಒಪ್ಪಿಸಿ ಎಂದ ಪಾಗಲ್‌!

ಗುಂಡೇಟು ತಿಂದರೂ ಬುದ್ಧಿ ಕಲಿಯದ ಆರೋಪಿಯು “ನೀವಾದರೂ ಯುವತಿಯನ್ನು ಒಪ್ಪಿಸಿಕೊಡಿ ಸಾರ್‌. ಮದುವೆ ಆಗುತ್ತೇನೆ. ಆಕೆಯನ್ನು ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದರೂ ಸಾಧ್ಯವಾಗಲಿಲ್ಲ’ ಎಂದು ಪೊಲೀಸರ ಮುಂದೆಯೇ ನಾಗೇಶ್‌ ಹೇಳಿದ್ದಾನೆ.

ಕಳೆದ ಏಳು ವರ್ಷಗಳಿಂದ ನಾನು ಪ್ರೀತಿಸುತ್ತಿದ್ದೇನೆ. “ನಾನು ಆ್ಯಸಿಡ್‌ ಹಾಕಬಾರದು ಅಂತಲೇ ಇದ್ದೆ. ಪ್ರಕರಣ ನಡೆದ ಹಿಂದಿನ ದಿನ ಯುವತಿಯ ಬಳಿ ಬಾಯಿ ಮಾತಿಗೆ ಆ್ಯಸಿಡ್‌ ಹಾಕುತ್ತೇನೆ ಎಂದಿದ್ದೆ. ಆದರೆ, ಆಕೆ ಅದನ್ನು ಅವರ ತಂದೆಗೆ ಹೇಳಿದ್ದಳು. ಅವರ ತಂದೆ ನನ್ನ ಅಣ್ಣನಿಗೆ ಹೇಳಿದ್ದರು. ನನ್ನ ಅಣ್ಣ ನನಗೆ ಬೈದಿದ್ದ’. ಇದರಿಂದ ಆಕ್ರೋಶಗೊಂಡು ಆ್ಯಸಿಡ್‌ ಹಾಕಿದ್ದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ಸಂತ್ರಸ್ತ ಯುವತಿಯ ಆರೋಗ್ಯ ವಿಚಾರಿಸಲು ಬಂದಿದ್ದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮುಂದೆ “ನನ್ನ ಕಣ್ಣ ಮುಂದೆಯೇ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಯುವತಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ:ಯುವತಿಗೆ ಅಶ್ಲೀಲ ಮೆಸೇಜ್; ಯುವಕನಿಗೆ ಥಳಿಸಿ ಊರಲ್ಲಿ ಅರೆಬೆತ್ತಲೆ ಮೆರವಣಿಗೆ!

ಆತ್ಮ ಹತ್ಯೆಗೆ ನಿರ್ಧರಿಸಿದ್ದ ಆರೋಪಿ

ಆ್ಯಸಿಡ್‌ ದಾಳಿ ನಡೆಸಿದ ನಂತರ ಆರೋಪಿ ನಾಗೇಶ್‌ ತನ್ನ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಬೈಕ್‌ನಲ್ಲಿ ನ್ಯಾಯಾಲಯದ ಬಳಿ ಹೋಗಿ ವಕೀಲರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ವಿವರಿಸಿದ್ದ. ವಕೀಲರು ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ, ನಾಗೇಶ್‌ ಬೈಕನ್ನು ಅಲ್ಲೇ ಬಿಟ್ಟು ಬಸ್‌ನಲ್ಲಿ ಹೊಸಕೋಟೆಗೆ ಹೋಗಿದ್ದ. ಅಲ್ಲಿಯ ಕೆರೆಯೊಂದಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಬಳಿಕ ಮನಸ್ಸು ಬದಲಿಸಿಕೊಂಡು ತಿರುಪತಿಗೆ ಹೋಗಲು ಮುಂದಾಗಿದ್ದ.

ತನ್ನ ಬಳಿ ಮೊಬೈಲ್‌ ಇದ್ದರೆ ಸಿಕ್ಕಿಬೀಳುತ್ತೇನೆಂದು ತಿಳಿದು ಆ ಮೊಬೈಲ್‌  ಅನ್ನು ಕೆರೆಗೆ ಎಸೆದಿದ್ದ. ತಿರುಪತಿಯಲ್ಲಿ ಪೊಲೀಸರು ಹುಡುಕಾಟ ನಡೆಸಬಹುದು ಎಂದು ಭಾವಿಸಿ ಹೊಸಕೋಟೆಯಿಂದ ಮಾಲೂರು ಮೂಲಕ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣ ಆಶ್ರಮಕ್ಕೆ ಹೋಗಿದ್ದ. ಅನಾಥನಾಗಿ ನಾನೊಬ್ಬನೇ ಜೀವಿಸುತ್ತಿದ್ದೇನೆ. ಆಶ್ರಮದಲ್ಲಿ ಯಾವ ಕೆಲಸ ಬೇಕಾದರೂ ಮಾಡುತ್ತೇನೆ ಎಂದು ಅನುಕಂಪ ಗಿಟ್ಟಿಸಿಕೊಂಡು 15 ದಿನದಿಂದ ಅಲ್ಲೇ ನೆಲೆಸಿದ್ದ. ಖಾವಿ ವಸ್ತ್ರ ಖರೀದಿಸಿ ಸನ್ಯಾಸಿಯಂತೆ ವೇಷ ಧರಿಸಿ ಧ್ಯಾನ, ಇನ್ನಿತರ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಆ್ಯಸಿಡ್‌ ದಾಳಿ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ಆದಷ್ಟು ಬೇಗ ಚಾರ್ಜ್‌ಶೀಟ್‌ ಸಲ್ಲಿಸುತ್ತೇವೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಲೆಟರ್‌ ಹೆಡ್‌ ದುರ್ಬಳಕೆ ಮಾಡಿಕೊಂಡು ಆರೋಪಿ 2020ರಲ್ಲಿಯೂ ಪ್ರಯೋಗಾಲಯಕ್ಕೆ ಇ-ಮೇಲ್‌ ಕಳುಹಿಸಿ ಇಷ್ಟೇ ಪ್ರಮಾಣದಲ್ಲಿ ಆ್ಯಸಿಡ್‌ ಖರೀದಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕಮಲ್ಪಂತ್‌, ನಗರ ಪೊಲೀಸ್ಆಯುಕ್ತ

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.