Udayavni Special

ಶೀರೂರು ಮಠಕ್ಕೆ ನೂತನ ಯತಿ ಸ್ವೀಕಾರ : ಮಠದ ಭಕ್ತ ಸಮಿತಿ ವಿರೋಧ


Team Udayavani, Apr 21, 2021, 1:58 AM IST

ಶೀರೂರು ಮಠಕ್ಕೆ ನೂತನ ಯತಿ ಸ್ವೀಕಾರ : ಮಠದ ಭಕ್ತ ಸಮಿತಿ ವಿರೋಧ

ಉಡುಪಿ : ಶೀರೂರು ಮಠದ ಉತ್ತರಾಧಿಕಾರಿಗಳ ಘೋಷಣೆ ಪ್ರಕ್ರಿಯೆಗೆ ಶ್ರೀ ಶೀರೂರು ಮಠ ಭಕ್ತ ಸಮಿತಿ ವಿರೋಧ ವ್ಯಕ್ತಪಡಿಸಿದ್ದು, ಮಠಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿರುವಾಗ ಯಾವುದೇ ಚಟುವಟಿಕೆ ಸರಿಯಲ್ಲ ಎಂದು ತಿಳಿಸಿದೆ.

ಮಂಗಳವಾರ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರು ಈ ಬಗ್ಗೆ ಮಾಹಿತಿ ನೀಡಿದರು.

ಶ್ರೀಗಳು ಕಾಲವಾದ ಬಳಿಕ ಆಸ್ತಿ-ಪಾಸ್ತಿ ವಿಚಾರ, ತೆರಿಗೆ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ತಕರಾರು, ಅಪವಾದಗಳು ಕೇಳಿ ಬಂದಿದ್ದವು. ಈ ಎಲ್ಲ ನೋವುಗಳನ್ನು ಸಹಿಸಿಕೊಂಡಿದ್ದ ನಾವು ಆಸ್ತಿ-ಪಾಸ್ತಿಯ ಪಾರದರ್ಶಕತೆ ನಿಟ್ಟಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಹಾಗಿರುವಾಗ ಯಾವುದೇ ಚಟುವಟಿಕೆ ಸರಿಯಲ್ಲ. ಸೂಕ್ತ ಉತ್ತರಾಧಿಕಾರಿ ಸಿಗದೇ ಹೋದರೆ ಮತ್ತೆ ಕೋರ್ಟ್‌ ಮೆಟ್ಟಿಲು ಏರುತ್ತೇವೆ ಎಂದು ಎಚ್ಚರಿಸಿದರು.

ಬಾಲ ಸನ್ಯಾಸಕ್ಕೆ ವಿರೋಧ
ಪಿ. ಲಾತವ್ಯ ಆಚಾರ್ಯ ಮಾತನಾಡಿ, ಅಷ್ಟ ಮಠ ಪರಂಪರೆಯಲ್ಲಿ ಬಾಲ ಸನ್ಯಾಸಿ ಸ್ವೀಕಾರ ರದ್ದಾಗಿದೆ. ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀ ವರತೀರ್ಥರು ಕಾಲವಾದ ಎರಡೂವರೆ ವರ್ಷಗಳ ಬಳಿಕ ಅಪ್ರಾಪ್ತ ವಯಸ್ಸಿನ ವಟುವನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತಿದೆ. ಮಠಕ್ಕೆ ಪ್ರಬುದ್ಧ ಉತ್ತರಾಧಿಕಾರಿಯ ಅಗತ್ಯವಿದ್ದು, ಈ ಬಾಲ ಸನ್ಯಾಸಿಯ ಸ್ವೀಕಾರಕ್ಕೆ ಮುಂದಾದರೆ ಕೋರ್ಟ್‌ ಮೆಟ್ಟಿಲು ಏರುವುದು ಅನಿವಾರ್ಯವಾಗುತ್ತದೆ ಎಂದರು.

ಕಳೆದ ಮೂರು ವರ್ಷಗಳ ಹಿಂದೆ ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಕಠಿನ 10 ವರ್ಷ ವೇದಾಂತ ಜ್ಞಾನ ಹಾಗೂ 21 ವರ್ಷ ಪೂರೈಸಿರುವ ಯೋಗ್ಯ ವಟುವನ್ನು ಅಷ್ಟ ಮಠಕ್ಕೆ ಶಿಷ್ಯರಾಗಿ ಸ್ವೀಕರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಎಲ್ಲ ಮಠಾಧೀಶರು ಮಾತುಕತೆ ನಡೆಸಿದ್ದರು. ಈಗ ಶಿರೂರು ಮಠಕ್ಕೆ 16, 17 ವರ್ಷದ ಯತಿಯನ್ನು ನಿಯೋಜಿಸುವುದು ಸರಿಯಲ್ಲ ಎಂದು ತಿಳಿಸಿದರು.

ವಾದಿರಾಜ ಆಚಾರ್ಯ ಮಾತನಾಡಿ, 700 ವರ್ಷಗಳಿಗೂ ಮಿಕ್ಕಿ ಇತಿಹಾಸವುಳ್ಳ ಅಷ್ಟ ಮಠಗಳ ಪರಂಪರೆಯಲ್ಲಿ ಶೀರೂರು ಮಠವು ಎರಡೂವರೆ ವರ್ಷಗಳಿಂದ ಮಠಾಧೀಶರಿಲ್ಲದೆ ಖಾಲಿ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಹ್ಲಾದ ಆಚಾರ್ಯ, ಅಕ್ಷೋಬ್ಯ ಆಚಾರ್ಯ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ಬೇಡುವ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್‌!:108 ಆ್ಯಂಬುಲೆನ್ಸ್‌ ಸಿಬಂದಿಗೆ ದೊರಕಿಲ್ಲ ವೇತನ

ಬೇಡುವ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್‌!:108 ಆ್ಯಂಬುಲೆನ್ಸ್‌ ಸಿಬಂದಿಗೆ ದೊರಕಿಲ್ಲ ವೇತನ

ಉಡುಪಿ ಜಿಲ್ಲಾಸ್ಪತ್ರೆ 80-90 ಜಂಬೋ ಸಿಲಿಂಡರ್‌ ಮೀಸಲು, 25 ಹೆಚ್ಚುವರಿ ಬೆಡ್‌

ಉಡುಪಿ ಜಿಲ್ಲಾಸ್ಪತ್ರೆ 80-90 ಜಂಬೋ ಸಿಲಿಂಡರ್‌ ಮೀಸಲು, 25 ಹೆಚ್ಚುವರಿ ಬೆಡ್‌

Covid Death

ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ ನಿಧನ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.