
ಫೆ. 13-17: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
Team Udayavani, Nov 28, 2022, 7:05 AM IST

ಬೆಂಗಳೂರು: ದೇಶದ ಸೇನಾ ಶಕ್ತಿಯನ್ನು ಪ್ರದರ್ಶಿಸುವ, ರಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಆಹ್ವಾನಿಸುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023ರ ಫೆ. 13ರಿಂದ 17ರ ವರೆಗೆ ಯಲಹಂಕ ವೈಮಾನಿಕ ನೆಲೆಯಲ್ಲಿ ನಡೆಯಲಿದೆ.
ಕೊರೊನಾ ಸೋಂಕಿನ ತೀವ್ರತೆ ನಡುವೆಯೂ 2021ರಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜನೆಗೊಂಡಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ಆಮೂಲಕ ದೇಶದ ರಕ್ಷಣ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆ, ಹೊಸ ಸಂಶೋಧನೆ, ಉತ್ಪನ್ನಗಳ ಅನಾವರಣಗೊಳ್ಳಲಿದೆ. ಪ್ರಮುಖವಾಗಿ ದೇಶೀಯ ಸಂಸ್ಥೆಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ.
ಹೈಬ್ರಿಡ್ ಏರೋ ಇಂಡಿಯಾ?
ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ಭೌತಿಕ ಮತ್ತು ವರ್ಚುವಲ್ ಆಗಿ ಏರೋ ಇಂಡಿಯಾ ಆಯೋಜಿಸಲಾಗಿತ್ತು. ಪ್ರದರ್ಶನಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆಗೊಂಡಿತ್ತು. ಅದರಲ್ಲಿ ಸಾಕಷ್ಟು ಯಶಸ್ವಿಯೂ ಗಳಿಸಿತ್ತು. ಈ ಬಾರಿ ಭೌತಿಕ ಹಾಗೂ ವರ್ಚುವಲ್ ವಿಧಾನದಲ್ಲೂ ವೈಮಾನಿಕ ಪ್ರದರ್ಶನ ಆಯೋಜನೆಗೊಳ್ಳುವ ಸಾಧ್ಯತೆಗಳಿವೆ.
ಈ ಬಾರಿ ಹೊಸ ರೀತಿಯಲ್ಲಿ ಭಾರತಕ್ಕೆ ಸಂಬಂಧಿಸಿದ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಸುವಂತಹ ಸಮಾವೇಶ ಅಥವಾ ಕಾರ್ಯಕ್ರಮ ಆಯೋಜನೆಗೂ ಏರೋ ಇಂಡಿಯಾ ಆಯೋಜಕರು ನಿರ್ಧರಿಸಿದ್ದಾರೆ.
ಪ್ರದರ್ಶಕರ ನೋಂದಣಿ ಶೀಘ್ರ ಆರಂಭ
ಏರೋ ಇಂಡಿಯಾದಲ್ಲಿ ತಮ್ಮ ಉತ್ಪನ್ನಗಳ, ಸಂಶೋಧನೆಯ ಪ್ರದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುತ್ತದೆ. ಅದಕ್ಕಾಗಿ ಏರೋ ಇಂಡಿಯಾ ವೆಬ್‌ಸೈಟ್‌ನಲ್ಲಿಯೇ ಸೂಚನೆಗಳನ್ನು ನೀಡಲಾಗುತ್ತದೆ.
ಸ್ಥಳಾಂತರ ಚರ್ಚೆ ಈಗಿಲ್ಲ
ಬೆಂಗಳೂರಿನ ಸಂಚಾರ ದಟ್ಟಣೆ ಸೇರಿ ಇನ್ನಿತರ ಕಾರಣಗಳಿಂದಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉತ್ತರ ಪ್ರದೇಸದ ಲಖೊ°à ಅಥವಾ ಗೋವಾಕ್ಕೆ ಸ್ಥಳಾಂತರಿಸುವ ಕುರಿತಂತೆ ಕಳೆದ ನಾಲ್ಕೈದು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಅದರಲ್ಲೂ 12ನೇ ಆವೃತ್ತಿಯ ಏರೋ ಇಂಡಿಯಾ ವೇಳೆ 13ನೇ ಆವೃತ್ತಿ ಲಖೊ°àದಲ್ಲಿ ನಡೆಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಲಖೊ°à ಅಥವಾ ಗೋವಾದಲ್ಲಿ ಯಲಹಂಕ ವೈಮಾನಿಕ ನೆಲೆಯಲ್ಲಿನ ಸೌಲಭ್ಯ, ಇಲ್ಲಿರುವಂತಹ ದೊಡ್ಡ ಪ್ರಮಾಣದ ರನ್‌ವೇ ವ್ಯವಸ್ಥೆಯಿರದ ಕಾರಣ ಏರೋ ಇಂಡಿಯಾ ಸ್ಥಳಾಂತರದ ಚರ್ಚೆ ಹಾಗೆಯೇ ನಿಲ್ಲುವಂತಾಯಿತು.
2021ರ ಏರೋ ಇಂಡಿಯಾದ ವಿವರ
– 523 ಭಾರತೀಯ, 78 ವಿದೇಶಿ ಪ್ರದರ್ಶಕರು
– 14 ದೇಶಗಳ ಪ್ರದರ್ಶಕರು ಭಾಗಿ
– ಇಂಡಿಜೀನಿಸ್ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಲಾದ ರಕ್ಷಣಾ ಸಾಮಗ್ರಿಗಳ ಪ್ರದರ್ಶನ
– ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಆಯೋಜನೆಗೊಂಡಿದ್ದ ಏರೋ ಇಂಡಿಯಾ
– ರಫೆಲ್, ಸುಖೋಯ್, ತೇಜಸ್, ಮಿಗ್ ಸೇರಿ ಹಲವು ಮಾದರಿಯ ಫೈಟರ್ ಜೆಟ್‌ಗಳು ಭಾಗಿ
– ಸೂರ್ಯಕಿರಣ್, ಸಾರಂಗ್ ಸೇರಿ ಇನ್ನಿತರ ಏರೋ ಬ್ಯಾಟಿಕ್ ತಂಡಗಳಿಂದ ವೈಮಾನಿಕ ಪ್ರದರ್ಶನ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ಜೂನ್- ಜುಲೈನಲ್ಲಿ ಇಸ್ರೋದಿಂದ ಸೂರ್ಯನ ಅಧ್ಯಯನ? ಪೇ ಲೋಡ್ ಸ್ವೀಕರಿಸಿದ ಬಾಹ್ಯಾಕಾಶ ಸಂಸ್ಥೆ

ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ: ತಿ.ನರಸೀಪುರದಲ್ಲಿ ಕೊನೆಗೂ ಸೆರೆ ಸಿಕ್ಕ ಚಿರತೆ

ಗ್ರಾಹಕರ ಮನ ಗೆದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆ: ಸಿಎಂ ಬೊಮ್ಮಾಯಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
