ಮತ್ತೊಂದು ದಾಖಲೆ ಬರೆದ ಬುಟ್ಟ ಬೊಮ್ಮಾ ಹಾಡು: ಸಂಗೀತ ನಿರ್ದೇಶಕ ಧಮನ್ ಹೇಳಿದ್ದೇನು ?
Team Udayavani, Aug 2, 2020, 2:05 PM IST
ತೆಲಂಗಾಣ: ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಈ ಚಿತ್ರದ ಬುಟ್ಟ ಬೊಮ್ಮ ಹಾಡು ಯೂಟ್ಯೂಬ್ನಲ್ಲಿ 30 ಕೋಟಿ ವೀಕ್ಷಣೆ ಪಡೆದಿದ್ದು, 150 ಕೋಟಿಗೂ ಅಧಿಕ ಶೇರ್ ಆಗಿ ದಾಖಲೆ ಬರೆದಿದೆ.
ಥಮನ್ ಸಂಗೀತ ನಿರ್ದೇಶನದ ಈ ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ವಿಶ್ವದಾದ್ಯಂತ ಖ್ಯಾತಿ ಪಡೆದ ನೂರು ವಿಡಿಯೋ ಹಾಡುಗಳಲ್ಲಿ ಬುಟ್ಟ ಬೊಮ್ಮ 15ನೇ ಸ್ಥಾನದಲ್ಲಿದ್ದು, ಈ ಬಗ್ಗೆ ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ. ಈ ಬಗ್ಗೆ ಸಂಗೀತ ನೀರ್ದೇಶಕ ಥಮನ್ ಈ ಹಿಂದೆ ಟ್ವೀಟ್ ಮಾಡಿದ್ದರು.
ಅಲಾ ವೈಕುಂಠಪುರಂಲೋ ಸಿನಿಮಾದ ಹಾಡುಗಳಲ್ಲಿ ರಾಮುಲೊ ರಾಮುಲಾ ಹಾಗೂ ಬುಟ್ಟ ಬೊಮ್ಮ ಹೆಚ್ಚು ಖ್ಯಾತಿ ಪಡೆದವು. ಅದರಲ್ಲೂ ಅಲ್ಲು ಅರ್ಜುನ್ ಸಖತ್ ಸ್ಟೆಪ್ ಹಾಕಿರುವ ಬುಟ್ಟ ಬೊಮ್ಮ ವಿಡಿಯೋ ಹಾಡು ಬಿಡುಗೆಯಾದಾಗಲೇ ಯೂಟ್ಯೂಬ್ನಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿತ್ತು. ಇದೇ ಹಾಡಿಗೆ ಮಾರ್ಚ್ ತಿಂಗಳಿನಿಲ್ಲಿ ಯೂಟ್ಯೂಬ್ನಲ್ಲಿ 19 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿತ್ತು.
ಇನ್ನು ಈ ಸಿನಿಮಾದ ಆಲ್ಬಂನಲ್ಲಿರುವ ವಿಡಿಯೋ ಹಾಡುಗಳು ಯೂಟ್ಯೂಬ್ನಲ್ಲಿ ಒಟ್ಟಾರೆ ನೂರು ಕೋಟಿ ವೀಕ್ಷಣೆ ಪಡೆದಿವೆ. ಕಲೆಕ್ಷನ್ ವಿಷಯದಲ್ಲಿ ಈಗಾಗಲೇ ದಾಖಲೆ ಮಾಡಿರುವ ಈ ಸಿನಿಮಾ, ಈಗ ಹಾಡಿನ ವಿಷಯದಲ್ಲಿ ಮತ್ತೊಂದು ಹೊಸ ರೆಕಾರ್ಡ್ ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು