ಬಿಜೆಪಿ ವಿರೋಧಿಗಳೆಲ್ಲರೂ ಪರ್ರಿಕರ್ ಮಗನನ್ನು ಬೆಂಬಲಿಸಿ : ಸಂಜಯ್ ರಾವುತ್
Team Udayavani, Jan 17, 2022, 5:55 PM IST
ಪಣಜಿ: ಮಾಜಿ ರಕ್ಷಣಾ ಸಚಿವ ದಿ. ಮನೋಹರ್ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ಪರ ಶಿವಸೇನೆ ನಾಯಕ ಸಂಜಯ ರಾವುತ್ ಅಖಾಡಕ್ಕಿಳಿದಿದ್ದು, ಬಿಜೆಪಿಯೇತರರೆಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.
ಉತ್ಪಲ್ ಪರೀಕರ್ ರವರು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿಯಿಂದ ಬಿಜೆಪಿಯಿಂದ ಟಿಕೇಟ್ ಸಿಗದೆಯೇ ಪಕ್ಷೇತರರಾಗಿ ಸ್ಫರ್ಧಿಸಿದರೆ ಅವರನ್ನು ಬೆಂಬಲಿಸುವಂತೆ ಸಂಜಯ ರಾವುತ್ ರವರು ಎಲ್ಲಾ ಬಿಜೆಪಿ ವಿರೋಧಿಗಳಲ್ಲಿ ಮನವಿ ಮಾಡಿದ್ದಾರೆ.
ಉತ್ಪಲ್ ಪಣಜಿ ಕ್ಷೇತ್ರದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಉತ್ಸುಕರಾಗಿದ್ದರು. ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಅವರು ಭೇಟಿ ಮಾಡಿದ್ದರು ಎಂಬ ವದಂತಿಯೂ ಹಬ್ಬಿತ್ತು.
ಮನೋಹರ್ ಪರ್ರಿಕರ್ ರವರ ಪುತ್ರ ಎಂಬ ಕಾರಣಕ್ಕೆ ಉತ್ಪಲ್‍ಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಗೋವಾ ಬಿಜೆಪಿ ಚುನಾವಣಾ ಉತ್ಸುವಾರಿ ದೇವೇಂದ್ರ ಫಡ್ನವೀಸ್ ಹೇಳಿದ್ದರು. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೂಡ ಪಣಜಿ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಟಿಕೇಟ್ ನೀಡುವ ಸುಳಿವು ನೀಡಿದ್ದರು. ಇದೀಗ ಶಿವಸೇನೆಯ ಸಂಜಯ ರಾವುತ್ ಉತ್ಪಲ್‍ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಜಿತೇಂದ್ರ ತ್ಯಾಗಿಗೆ ಜಾಮೀನು