ಅಹಿತಕರ ಘಟನೆಗಳ ನಂತರ ಬಿಹಾರದ ಅಮಿತ್ ಶಾ ಅವರ ಕಾರ್ಯಕ್ರಮ ರದ್ದು

ಎಲ್ಲಾ ಘಟನೆಗಳಿಗೆ ಆರ್ ಜೆಡಿ ಕಾರಣ ಎಂದು ಆರೋಪಿಸಿದ ಬಿಜೆಪಿ

Team Udayavani, Apr 1, 2023, 2:22 PM IST

police crime

ಪಾಟ್ನಾ : ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೆಕ್ಷನ್ 144 ವಿಧಿಸಿರುವುದರಿಂದ ಬಿಹಾರದ ಸಸಾರಂನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ರಾಮ ನವಮಿ ಸಂದರ್ಭದಲ್ಲಿ ನಳಂದಾ ಮತ್ತು ಸಸಾರಾಮ್‌ನಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಾಗಿ ಒಟ್ಟು 45 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ, “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮವೊಂದಕ್ಕೆ ಸಸಾರಂಗೆ ಬರಬೇಕಿತ್ತು. ಬಿಹಾರ ಸರ್ಕಾರ ಸೆಕ್ಷನ್ 144 ವಿಧಿಸಿರುವುದರಿಂದ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿದೆ. ಎಂದು ಹೇಳಿದ್ದಾರೆ.

ಎರಡು ಕೋಮುಗಳ ಗುಂಪುಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ನಳಂದಾದಲ್ಲಿ ಭಾರೀ ಭದ್ರತಾ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ನಳಂದಾ ಮತ್ತು ರೋಹ್ತಾಸ್‌ನಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಸಮಾಜ ವಿರೋಧಿ ಅಂಶಗಳನ್ನು ಗುರುತಿಸಿ ಕ್ರಮವಾಗಿ 27 ಮತ್ತು 18 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಿಹಾರ ಷರೀಫ್ ಮತ್ತು ಸಸಾರಾಮ್‌ನಲ್ಲಿ ರಾಮನವಮಿ ಮೆರವಣಿಗೆ ಪೂರ್ಣಗೊಂಡಿದ್ದು. ಎರಡೂ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಪಡೆ ಮತ್ತು ಮ್ಯಾಜಿಸ್ಟ್ರೇಟ್ ನಿಯೋಜನೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗಿದೆ.” ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ರೀತಿಯ ವದಂತಿಗಳನ್ನು ನಂಬದಂತೆ ಪೊಲೀಸರು ನಿವಾಸಿಗಳಿಗೆ ಮನವಿ ಮಾಡಿದ್ದು “ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಆಡಳಿತದೊಂದಿಗೆ ಸಹಕರಿಸಿ” ಎಂದು ಟ್ವೀಟ್‌ ಮಾಡಲಾಗಿದೆ.

ಆರೋಪ- ಪ್ರತ್ಯಾರೋಪ

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಂದ ಆರೋಪ ಮತ್ತು ಪ್ರತ್ಯಾರೋಪಗಳ ಸುತ್ತು ಪ್ರಾರಂಭವಾಗಿದೆ. ಬಿಜೆಪಿ ಗಲಭೆಗಳನ್ನು ಹರಡುತ್ತಿದೆ ಎಂದು ಆಡಳಿತಾರೂಢ ಆರ್‌ಜೆಡಿ ಆರೋಪಿಸಿದೆ. ಮತ್ತೊಂದೆಡೆ, ಆರ್‌ಜೆಡಿ ಹಿರಿಯ ನಾಯಕ ಮತ್ತು ಶಾಸಕ ಭಾಯಿ ವೀರೇಂದ್ರ ಮಾತನಾಡಿ, ದೇಶ ಅಥವಾ ರಾಜ್ಯಗಳಲ್ಲಿ ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿ ಗಲಭೆಯಲ್ಲಿ ತೊಡಗುತ್ತದೆ ಎಂದಿದ್ದಾರೆ.

ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲಾ ಘಟನೆಗಳಿಗೆ ಆರ್ ಜೆಡಿ ನೇರ ಹೊಣೆ ಎಂದು ಆರೋಪಿಸಿದೆ.

ಟಾಪ್ ನ್ಯೂಸ್

lok adalat

ನ್ಯಾಯಾಧೀಶರ ಘನತೆ, ಗೌರವಕ್ಕೆ ಧಕ್ಕೆ ಸರಿಯಲ್ಲ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

1-sadasd

Gyanvapi Case: ಮಸೀದಿ ಸಮಿತಿಯ ಸವಾಲು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

lok adalat

ನ್ಯಾಯಾಧೀಶರ ಘನತೆ, ಗೌರವಕ್ಕೆ ಧಕ್ಕೆ ಸರಿಯಲ್ಲ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್