ದಾಳಿ ಬಗ್ಗೆ ಸುಳಿವು : ಮುಖೇಶ್ ಅಂಬಾನಿ ನಿವಾಸದ ಭದ್ರತೆ ಹೆಚ್ಚಳ
Team Udayavani, Nov 8, 2021, 6:51 PM IST
ಮುಂಬಯಿ : ಟ್ಯಾಕ್ಸಿ ಚಾಲಕರೊಬ್ಬರು ಮುಂಬೈ ಪೊಲೀಸರಿಗೆ ಸಂಭವನೀಯ ದಾಳಿಯ ಬಗ್ಗೆ ಸುಳಿವು ನೀಡಿದ ಬಳಿಕ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಹೆಸರಿನ ಮನೆಯ ಹೊರಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುಂಬೈ ಪೊಲೀಸರ ಪ್ರಕಾರ, ನವೆಂಬರ್ 8 ರ ಸೋಮವಾರ ನಿಯಂತ್ರಣ ಕೊಠಡಿಗೆ ಬಂದ ಕರೆಯು ಆಂಟಿಲಿಯಾ ಬಳಿ ಹೆಚ್ಚುವರಿ ಪೋಲೀಸರ ನಿಯೋಜನೆಗೆ ಕಾರಣವಾಗಿದೆ.
ತನ್ನ ಪ್ರವಾಸಿ ಟ್ಯಾಕ್ಸಿಯಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ವಿಳಾಸವನ್ನು ಕೇಳಿದರು ಎಂದು ಕರೆ ಮಾಡಿದ ಟ್ಯಾಕ್ಸಿ ಡ್ರೈವರ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. .
ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ವಿವಿಧ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, .ಇಬ್ಬರು ಪ್ರಯಾಣಿಕರನ್ನು ಹುಡುಕಲು ತಪಾಸಣೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್