ಕಾಫಿ ತೋಟದಲ್ಲಿ ಕೋಟ್ಯಾಂತರ ಮೌಲ್ಯದ ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳು !
Team Udayavani, Jan 14, 2022, 10:46 AM IST
ಸಕಲೇಶಪುರ: ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ವಶಪಡೆದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಾಲೇಬೇಲೂರು ಗ್ರಾಮದ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ವಾಟೆಗದ್ದೆ ಗ್ರಾಮದ ಹರೀಶ್ ಹಾಗೂ ಇತರರು ಕಳೆದ 15 ದಿನಗಳ ಹಿಂದೆ ಕೆಲಸ ಮಾಡುವಾಗ ಬ್ರಿಟೀಷರ ಕಾಲದ ಕೆಲ ನಾಣ್ಯಗಳು ದೊರಕಿದ್ದು ಮಾಲಿಕರಿಗೆ ತಿಳಿಸದೆ ತೆಗೆದುಕೊಂಡು ಹೋಗಿರುತ್ತಾರೆ. ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿದಾಗ ಈ ಕುರಿತು ತೋಟದ ಮಾಲಿಕರು ಹರೀಶ್ ಬಳಿ ಈ ಕುರಿತು ವಿಚಾರಿಸಿದಾಗ ಅವನು ಇಂದು ನನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲಿಕರಿಗೆ 9 ನಾಣ್ಯ ಒಪ್ಪಿಸಿದ್ದಾನೆ. ಈ ವೇಳೆಗಾಗಲೆ ಮಾಹಿತಿ ಸಿಕ್ಕ ತೋಟದ ಮಾಲಿಕ ಶ್ಯಾಮ್ ಪೋಲಿಸರಿಗೆ ಈ ಕುರಿತು ದೂರು ನೀಡಿ 9 ನಾಣ್ಯಗಳನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹರೀಶ್‌ನನ್ನು ಬಂಧಿಸಿ, ವಾಟೆಗದ್ದೆ ಗ್ರಾಮದ ಅವನ ಮನೆಯ ಹಿಂಭಾಗ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಸುಮಾರು 19 ಬ್ರಿಟೀಷರ ಕಾಲದ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 28 ಬೆಳ್ಳಿ ನಾಣ್ಯಗಳು ದೊರಕಿದ್ದು ಈ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಮೌಲ್ಯದ ಬೆಲೆ ಇದ್ದು, ವಶಪಡಿಸಿಕೊಂಡ ನಾಣ್ಯಗಳನ್ನು ಪ್ರಾಚೀನ ಹಾಗೂ ಪುರಾತತ್ವ ಇಲಾಖೆಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಡಿ.ವೈ.ಎಸ್.ಪಿ ಅನಿಲ್ ಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ಬಸವರಾಜು ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಸ್ತೆಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ
ಸಕಲೇಶಪುರ: ಅಪರಿಚಿತ ವಾಹನ ಢಿಕ್ಕಿ; ಶಾಲೆಗೆ ತೆರಳುತ್ತಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು
ಜನಪ್ರತಿನಿಧಿಗಳು ಜನತೆಯ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸಿ
ಬಿಜೆಪಿ ಏಳಿಗೆಗೆ ಶಾಮ್ ಮುಖರ್ಜಿ ಶ್ರಮ ಕಾರಣ; ರೇಣುಕುಮಾರ್
ಮೂಲ ಸೌಕರ್ಯಕ್ಕಾಗಿ 4.5 ಕೋಟಿ ರೂ. ವೆಚ್ಚ; ಎಚ್.ಡಿ.ರೇವಣ್ಣ
MUST WATCH
ತನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಖಾದರ್
ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಹೊಸ ಸೇರ್ಪಡೆ
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಓಟ ಬೆಳೆಸುವರೇ ಸಿಂಧು?
ಲೀಡ್ಸ್ ಟೆಸ್ಟ್: ಇಂಗ್ಲೆಂಡ್ 3-0 ಪರಾಕ್ರಮ: ಸ್ಟೋಕ್ಸ್ ಬಳಗಕ್ಕೆ 7 ವಿಕೆಟ್ ಜಯ
ರಾಜ್ಯಾದ್ಯಂತ ಆರಂಭವಾದ ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ
ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ
ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್ ಆಕ್ಷೇಪ